AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಜಿನಿಯರ್ ನೀರು ಕೇಳಿದ್ರೆ ​ ಮೂತ್ರ ಕೊಟ್ಟ ಪ್ಯೂನ್​

ಕಚೇರಿಯಲ್ಲಿ ನೀರು ಕೇಳಿದರೆ ಎಂಜಿನಿಯರ್​ಗೆ ಮೂತ್ರ(Urine) ಕೊಟ್ಟಿರುವ ಅಸಹ್ಯಕರ ಘಟನೆ ಒಡಿಶಾದ ಗಜಪತಿ ನಗರದಲ್ಲಿ ನಡೆದಿದೆ. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಲ್ಲಿ (RWSS) ಕೆಲಸ ಮಾಡುತ್ತಿರುವ ಎಂಜಿನಿಯರ್ ಒಬ್ಬರು ಪ್ಯೂನ್ ಬಳಿ ಕುಡಿಯಲು ನೀರು ಕೇಳಿದ್ದರು. ಪ್ಯೂನ್ ನೀರಿನ ಬದಲು ಮೂತ್ರ ಕುಡಿಸಿರುವ ವಿಚಿತ್ರ ಘಟನೆ ವರದಿಯಾಗಿದೆ.

ಎಂಜಿನಿಯರ್ ನೀರು ಕೇಳಿದ್ರೆ ​ ಮೂತ್ರ ಕೊಟ್ಟ ಪ್ಯೂನ್​
ನೀರು
ನಯನಾ ರಾಜೀವ್
|

Updated on: Aug 01, 2025 | 3:33 PM

Share

ಒಡಿಶಾ, ಆಗಸ್ಟ್​ 01: ಕಚೇರಿಯಲ್ಲಿ ನೀರು ಕೇಳಿದರೆ ಎಂಜಿನಿಯರ್​ಗೆ ಮೂತ್ರ(Urine) ಕೊಟ್ಟಿರುವ ಅಸಹ್ಯಕರ ಘಟನೆ ಒಡಿಶಾದ ಗಜಪತಿ ನಗರದಲ್ಲಿ ನಡೆದಿದೆ. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಲ್ಲಿ (RWSS) ಕೆಲಸ ಮಾಡುತ್ತಿರುವ ಎಂಜಿನಿಯರ್ ಒಬ್ಬರು ಪ್ಯೂನ್ ಬಳಿ ಕುಡಿಯಲು ನೀರು ಕೇಳಿದ್ದರು. ಪ್ಯೂನ್ ನೀರಿನ ಬದಲು ಮೂತ್ರ ಕುಡಿಸಿರುವ ವಿಚಿತ್ರ ಘಟನೆ ವರದಿಯಾಗಿದೆ.

ಇದರಿಂದಾಗಿ ಅವರ ಆರೋಗ್ಯ ಹದಗೆಟ್ಟಿತ್ತು, ಈಗ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ಯೂನ್ ಎಂಜಿನಿಯರ್‌ಗೆ ಶುದ್ಧ ನೀರು ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಇದೀಗ ಆ ನೀರು, ಮೂತ್ರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಎಂಜಿನಿಯರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡ ಈ ವಿಷಯದಲ್ಲಿ ಕ್ರಮ ಕೈಗೊಂಡಿದ್ದಾರೆ.

ಈ ಘಟನೆ ಜುಲೈ 23 ರಂದು ನಡೆದಿದೆ ಎಂದು ಹೇಳಲಾಗುತ್ತಿದೆ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ (ಆರ್‌ಡಬ್ಲ್ಯೂಎಸ್‌ಎಸ್) ಎಂಜಿನಿಯರ್ ಸಚಿನ್ ಗೌಡ ಎಫ್‌ಐಆರ್ನಲ್ಲಿ ‘ನಾನು ಜುಲೈ 22 ರಂದು ಕಚೇರಿಗೆ ಜೂನಿಯರ್ ಎಂಜಿನಿಯರ್ ಆಗಿ ಸೇರಿಕೊಂಡೆ. ಜುಲೈ 23 ರಂದು ಊಟ ಮಾಡಿದ ನಂತರ, ನಾನು ಪಿಯೋನ್ ಸಿಬಾ ನಾರಾಯಣ್ ನಾಯಕ್ ಬಳಿ ಕುಡಿಯಲು ನೀರು ಕೇಳಿದ್ದೆ, ಕುಡಿಯುವ ನೀರು ಎಂದು ಹೇಳಿ ಪ್ಯೂನ್ ತನಗೆ ಸ್ಟೀಲ್ ಬಾಟಲಿ ಕೊಟ್ಟರು’ ಸಚಿನ್ ಗೌಡ ಆರೋಪಿಸಿದ್ದಾರೆ. ಕುಡಿದ ಮೇಲೆ ಅದರಿಂದ ಮೂತ್ರದ ವಾಸನೆ ಬರುತ್ತಿರುವುದು ಗೊತ್ತಾಯಿತು. ಇಬ್ಬರು ಆ ಬಾಟಲಿಯಿಂದ ನೀರು ಕುಡಿದಿದ್ದಾಗಿ ಹೇಳಿದ್ದಾರೆ.

ಮತ್ತಷ್ಟು ಓದಿ: ಮಹಾರಾಷ್ಟ್ರ: ಭಕ್ತರಿಗೆ ಕೊಳಕು ಚಪ್ಪಲಿಯಿಂದ ಒದ್ದು, ತನ್ನ ಮೂತ್ರ ಕುಡಿಸುವ ನಕಲಿ ಬಾಬಾ

ನೀರಿನ ರುಚಿಯೂ ಸಂಪೂರ್ಣವಾಗಿ ಭಿನ್ನವಾಗಿತ್ತು. ಅದು ತುಂಬಾ ಕೆಟ್ಟ ವಾಸನೆ ಬರುತ್ತಿತ್ತು ಎಂದು ಹೇಳಿದ್ದರು. ಮರುದಿನ ಎಂಜಿನಿಯರ್ ಅನಾರೋಗ್ಯಕ್ಕೆ ಒಳಗಾದರು. ನಂತರ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ಇಡೀ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಎಫ್‌ಐಆರ್ ದಾಖಲಾದ ನಂತರ, ಬಾಟಲಿಯಲ್ಲಿ ಉಳಿದಿದ್ದ ನೀರಿನ ಮಾದರಿಯನ್ನು ಸ್ಥಳೀಯ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಎರಡನೇ ಮಾದರಿಯನ್ನು ನಿರ್ಣಾಯಕ ಪರೀಕ್ಷೆಗಾಗಿ ಪರಲಖೆಮುಂಡಿಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಯ ನಂತರ ಅಸ್ವಸ್ಥರಾದ ಎಂಜಿನಿಯರ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರ್ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಈ ವಿಷಯವನ್ನು ಒಡಿಶಾ ಜಲಸಂಪನ್ಮೂಲ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮುಂದೆಯೂ ಎತ್ತಲಾಗಿದೆ.

ಪ್ಯೂನ್ ಈ ಕುರಿತು ಮಾತನಾಡಿ, ತಾನು ನೀರು ಕೊಟ್ಟಿದ್ದೇನೆ ಮತ್ತು ಅದರಲ್ಲಿ ಯಾವುದೇ ರೀತಿಯಲ್ಲಿ ಕಲಬೆರಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಎಂಜಿನಿಯರ್ ನನ್ನ ಮೇಲೆ ಏಕೆ ಈ ಆರೋಪ ಮಾಡುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಗುರುವಾರ ರಾತ್ರಿ ವಿಚಾರಣೆಯ ನಂತರ ಪೊಲೀಸರು ಪ್ಯೂನ್ ಅನ್ನು ಬಿಡುಗಡೆ ಮಾಡಿದರು. ನಂತರ ಶುಕ್ರವಾರ ಬೆಳಗ್ಗೆ ಮತ್ತೆ ಪೊಲೀಸರು ಆರೋಪಿ ಪ್ಯೂನ್ ಅನ್ನು ಪೊಲೀಸ್ ಠಾಣೆಗೆ ಕರೆಸಿ ಬಂಧಿಸಿದರು. ನೀರು/ಮೂತ್ರದ ಮಾದರಿಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್