20 ಲಕ್ಷ ರೂ. ಕದ್ದು ಹಸುವಿನ ಸಗಣಿಯಲ್ಲಿ ಬಚ್ಚಿಟ್ಟಿದ್ದ ವ್ಯಕ್ತಿ

|

Updated on: Nov 17, 2024 | 9:53 AM

ಕಳ್ಳ ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳುತ್ತಾರೆ ಎಂಬುದು ಅಕ್ಷರಶಃ ಸತ್ಯ. ವ್ಯಕ್ತಿಯೊಬ್ಬ 20 ಲಕ್ಷ ರೂ. ಕಳವು ಮಾಡಿದ್ದ ಬೇರೆಲ್ಲಾದರೂ ಇಟ್ಟರೆ ಸಿಕ್ಕಿಬೀಳಬಹುದು ಎನ್ನುವ ಭಯದಲ್ಲಿ ಹಸುವಿನ ಸಗಣಿಯೊಳಗೆ ಮುಚ್ಚಿಟ್ಟಿದ್ದ, ಆದರೂ ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

20 ಲಕ್ಷ ರೂ. ಕದ್ದು ಹಸುವಿನ ಸಗಣಿಯಲ್ಲಿ ಬಚ್ಚಿಟ್ಟಿದ್ದ ವ್ಯಕ್ತಿ
ಸಗಣಿ
Follow us on

ಕಳ್ಳ ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳುತ್ತಾರೆ ಎಂಬುದು ಅಕ್ಷರಶಃ ಸತ್ಯ. ವ್ಯಕ್ತಿಯೊಬ್ಬ 20 ಲಕ್ಷ ರೂ. ಕಳವು ಮಾಡಿದ್ದ ಬೇರೆಲ್ಲಾದರೂ ಇಟ್ಟರೆ ಸಿಕ್ಕಿಬೀಳಬಹುದು ಎನ್ನುವ ಭಯದಲ್ಲಿ ಹಸುವಿನ ಸಗಣಿಯೊಳಗೆ ಮುಚ್ಚಿಟ್ಟಿದ್ದ, ಆದರೂ ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಹಸುವಿನ ಸಗಣಿಯ ರಾಶಿಯಲ್ಲಿ ಭಾರಿ ಮೊತ್ತದ ಹಣ ಪತ್ತೆಯಾಗಿದೆ
ಒಡಿಶಾದ ಬಾಲಾಸೋರ್​ನಲ್ಲಿ ಘಟನೆ ನಡೆದಿದೆ. ಕಮರ್ದ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಬಡಮಂಡರುಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ಮತ್ತು ಒಡಿಶಾದ ಪೊಲೀಸ್ ಅಧಿಕಾರಿಗಳ ತಂಡ ಗ್ರಾಮಕ್ಕೆ ತಲುಪಿ ಆರೋಪಿ ಗೋಪಾಲ್ ಬೆಹೆರಾ ಅವರ ಅತ್ತೆಯ ಮನೆಯ ಮೇಲೆ ದಾಳಿ ನಡೆಸಿದರು.

ಆರೋಪಿ ಗೋಪಾಲ್ ಸದ್ಯ ತಪ್ಪಿಸಿಕೊಂಡಿದ್ದು, ಹೈದರಾಬಾದ್‌ನ ಕೃಷಿ ಆಧಾರಿತ ಕಂಪನಿಯ ಮಾಲೀಕನಿಂದ 20 ಲಕ್ಷಕ್ಕೂ ಹೆಚ್ಚು ಕಳ್ಳತನ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

ಆರೋಪಿ ಕದ್ದ ಹಣವನ್ನು ಮಾವನ ಕೈಗೆ ಕೊಟ್ಟಿದ್ದ
ಗೋಪಾಲ್ ತನ್ನ ಸೋದರ ಮಾವ ರವೀಂದ್ರ ಬೆಹೆರಾ ಮೂಲಕ ಕದ್ದ ಹಣವನ್ನು ತನ್ನ ಗ್ರಾಮಕ್ಕೆ ವರ್ಗಾಯಿಸಲು ಯೋಜಿಸಿದ್ದ.
ಕಮರ್ದಾ ಪೊಲೀಸರೊಂದಿಗೆ ರವೀಂದ್ರ ಅವರ ನಿವಾಸದಲ್ಲಿ ಶೋಧ ನಡೆಸಿದರು, ಹಸುವಿನ ಸಗಣಿಯಲ್ಲಿ ಬಚ್ಚಿಟ್ಟಿದ್ದ ಹಣವನ್ನು ಕೊನೆಗೂ ಪತ್ತೆ ಹಚ್ಚಿದ್ದಾರೆ.

ಗೋಪಾಲ್ ಮತ್ತು ರವೀಂದ್ರ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಕಮರ್ದಾ ಪೊಲೀಸ್ ಠಾಣೆಯ ಐಐಸಿ ಪ್ರೇಮದ ನಾಯಕ್ ಹೇಳಿದ್ದಾರೆ. ಆರೋಪಿಯ ಕುಟುಂಬದ ಸದಸ್ಯರನ್ನು ಗ್ರಾಮದಿಂದ ಬಂಧಿಸಲಾಗಿದ್ದು, ಸಕ್ರಿಯ ತನಿಖೆ ಮುಂದುವರೆದಿದ್ದು, ಗೋಪಾಲ್‌ಗಾಗಿ ಹುಡುಕಾಟ ಮುಂದುವರೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ