Odisha Train Accident: ಒಡಿಶಾದ ರೈಲ್ವೆ ಟ್ರ್ಯಾಕ್​ಗಳ​ ಮೇಲೆ ಜನರಂತೆಯೇ ಅನಾಥವಾಗಿ ಬಿದ್ದಿದ್ದವು, ಬೆಂಗಾಲಿ ಕವಿತೆಯ ಸಾಲುಗಳು

ಅಪಘಾತಗಳು ಚಿಕ್ಕದಾಗಿರಲಿ ದೊಡ್ಡದಾಗಿರಲಿ ಮರೆಯಲಾಗದ ಕೆಲವು ಕಥೆಗಳನ್ನು ಉಳಿಸಿಬಿಡುತ್ತದೆ. ಒಡಿಶಾದ ಬಾಲಸೋರ್​ನಲ್ಲಿ ನಡೆದ ತ್ರಿವಳಿ ರೈಲು ಅಪಘಾತಗಳು ಇಂತಹ ನೂರಾರು ನೆನಪುಗಳು ಬೀಡುಬಿಡುವಂತೆ ಮಾಡಿದೆ.

Odisha Train Accident: ಒಡಿಶಾದ ರೈಲ್ವೆ ಟ್ರ್ಯಾಕ್​ಗಳ​ ಮೇಲೆ ಜನರಂತೆಯೇ ಅನಾಥವಾಗಿ ಬಿದ್ದಿದ್ದವು, ಬೆಂಗಾಲಿ ಕವಿತೆಯ ಸಾಲುಗಳು
ಬೆಂಗಾಲಿ ಕವಿತೆಗಳು

Updated on: Jun 05, 2023 | 11:01 AM

ಅಪಘಾತಗಳು ಚಿಕ್ಕದಾಗಿರಲಿ ದೊಡ್ಡದಾಗಿರಲಿ ಮರೆಯಲಾಗದ ಕೆಲವು ಕಥೆಗಳನ್ನು ಉಳಿಸಿಬಿಡುತ್ತದೆ. ಒಡಿಶಾದ ಬಾಲಸೋರ್​ನಲ್ಲಿ ನಡೆದ ತ್ರಿವಳಿ ರೈಲು ಅಪಘಾತಗಳು ಇಂತಹ ನೂರಾರು ನೆನಪುಗಳು ಬೀಡುಬಿಡುವಂತೆ ಮಾಡಿದೆ. ಅಪಘಾತದ ದೃಶ್ಯಗಳು ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ, ಎಲ್ಲಿ ನೋಡಿದರೂ ಪ್ರಯಾಣಿಕರ ಮೃತದೇಹಗಳೇ ಕಾಣುತ್ತಿದ್ದವು. ಅಳುತ್ತಿದ್ದ ಪ್ರಯಾಣಿಕರ ಕಣ್ಣುಗಳು ತಮ್ಮ ಜನರನ್ನು ನೋಡಲು ಹಾತೊರೆಯುತ್ತಿದ್ದವು. ಇದರ ನಡುವೆ ಟ್ರ್ಯಾಕ್​ಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬೆಂಗಾಲಿ ಭಾಷೆಯ ಕವನಗಳು ಗಮನ ಸೆಳೆದಿವೆ.
ರೈಲ್ವೆ ಟ್ರ್ಯಾಕ್​ಗಳಲ್ಲಿ ಬೆಂಗಾಲಿ ಭಾಷೆಯ ಕವಿತೆಗಳು ಸಿಕ್ಕಿವೆ. ಖಂಡಿತವಾಗಿಯೂ ಕವನ ಪ್ರೇಮಿ ಅದನ್ನು ಓದುತ್ತಾ ಪ್ರಯಾಣಿಸುತ್ತಿದ್ದ ಎಂದೆನಿಸುತ್ತದೆ.

ಹಳಿಗಳ ಮೇಲೆ ಬಿದ್ದಿರುವ ಪುಟಗಳಲ್ಲಿ ಮೀನುಗಳು ಮತ್ತು ಆನೆಗಳ ಚಿತ್ರಗಳು ಕಂಡುಬಂದಿವೆ. ಒಂದು ಪುಟದಲ್ಲಿ ನವಿಲಿನ ಚಿತ್ರವೂ ಇತ್ತು. ಪ್ರತಿ ಚಿತ್ರದ ಮುಂದೆ ಒಂದು ಕವಿತೆ ಬರೆಯಲಾಗಿತ್ತು. ಒಂದು ಪುಟದಲ್ಲಿ ಗುಲಾಬಿ ಹೂವೊಂದು ಬಿಡಿಸಿರುವುದು ಕಂಡು ಬಂತು.
ಟ್ರ್ಯಾಕ್‌ಗಳಲ್ಲಿ ಅಲ್ಲಲ್ಲಿ ಕಂಡುಬರುವ ಈ ಪುಟಗಳು ಈಗ ಯಾವುದೇ ಪ್ರಾಮುಖ್ಯತೆಯನ್ನು ಹೊಂದಿಲ್ಲವಾದರೂ, ಅವು ಖಂಡಿತವಾಗಿಯೂ ಪ್ರಯಾಣವನ್ನು ವಿವರಿಸುತ್ತಿವೆ.

ಮತ್ತಷ್ಟು ಓದಿ: Odisha Train Accident: ಆಸ್ಪತ್ರೆಯಲ್ಲಿ ಹೆಣಗಳ ರಾಶಿ, ಮೃತರ ಗುರುತು ಪತ್ತೆ ಹಚ್ಚಲು ಸಂಬಂಧಿಕರ ಹರಸಾಹಸ

ಬೆಂಗಾಲಿ ಭಾಷೆಯಲ್ಲಿ ಬರೆದ ಕೆಲವು ಕವಿತೆಗಳು ಹೀಗಿವೆ, ಆಲ್ಪೋ ಅಲ್ಪೋ ಮೇಘ್ ಥೇಕೆ ಹಲ್ಕಾ ಬ್ರಿಸ್ಟಿ ಹೋಯ್, ಛೋಟೋ ಚೋಟೋ ಗೋಲ್ಪೋ ಥೇಕೆ ಭಲೋಬಾಸ ಸೃಷ್ಟಿ ಹೋಯ್. ಡೈರಿಯಲ್ಲಿ ಬರೆದ ಕವನಗಳ ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕವನಗಳ ಸಾಲುಗಳೇನೋ ಪೂರ್ಣವಾಗಿವೆ, ಆದರೆ ಅವುಗಳನ್ನು ಓದುವ ವ್ಯಕ್ತಿಯ ಪ್ರಯಾಣವು ಅಪೂರ್ಣವಾಗಿ ಉಳಿದಿರಬಹುದು.
ಆಗ ಪೊಲೀಸ್ ಅಧಿಕಾರಿಗಳು ಯಾರಾದರೂ ಹಿಂತಿರುಗಿ ಬಂದು ನನ್ನ ಡೈರಿ ನಿಮಗೆ ಸಿಕ್ಕಿದೆಯೇ ಎಂದು ಕೇಳಬಹುದು ಎಂಬ ಭರವಸೆಯಿಂದ ಅದನ್ನು ಇರಿಸಿಕೊಂಡಿದ್ದಾರೆ.

ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಭವಿಸಿದ ರೈಲು ಅಪಘಾತದಲ್ಲಿ 275 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವೇಗವಾಗಿ ಬರುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್ ಹಳಿತಪ್ಪಿ ಅದರ ಬೋಗಿಗಳು ಲೂಪ್ ಲೈನ್ ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು, ರೈಲಿನ ಹಿಂಬದಿ ಹಾದು ಹೋಗುತ್ತಿದ್ದ ಯಶವಂತಪುರ ಎಕ್ಸ್ ಪ್ರೆಸ್ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us