Odisha Train Accident: ಹಲವು ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ; ಇಲ್ಲಿದೆ ಕರ್ನಾಟಕದಿಂದ ಹೊರಡುವ ರೈಲುಗಳ ವಿವರ
ರೈಲು ದುರಂತದಿಂದ ದೇಶದ ಅನೇಕ ಕಡೆ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಕರ್ನಾಟಕ ಸೇರಿ ಅನೇಕ ಕಡೆ ರೈಲು ಸಂಚಾರ ಸ್ಥಗಿತಗೊಂಡಿದ್ದು, ಇನ್ನೂ ಹಲವು ಕಡೆ ರೈಲು ಸಂಚಾರದ ಮಾರ್ಗ ಬದಲಾವಣೆಯಾಗಿದೆ.
ಬೆಂಗಳೂರು: ದೇಶದಲ್ಲಿ ನಡೆದ ಅನೇಕ ರೈಲು ದುರಂತಗಳಲ್ಲಿ ನೆನ್ನೆ (ಜೂ.2) ರಾತ್ರಿ ಒಡಿಶಾದಲ್ಲಿ ನಡೆದ ಭೀಕರ ರೈಲು (Odisha Train Accident) ದುರಂತವು ಒಂದು. ಈ ರೈಲು ದುರಂತದಲ್ಲಿ 233ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು. 900ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೈಲು ದುರಂತದಿಂದ ದೇಶದ ಅನೇಕ ಕಡೆ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ಕರ್ನಾಟಕ ಸೇರಿ ಅನೇಕ ಕಡೆ ರೈಲು ಸಂಚಾರ ಸ್ಥಗಿತಗೊಂಡಿದ್ದು, ಇನ್ನೂ ಹಲವು ಕಡೆ ರೈಲು ಸಂಚಾರದ ಮಾರ್ಗ ಬದಲಾವಣೆಯಾಗಿದೆ. ಒಟ್ಟು ದೇಶದಲ್ಲಿ 49 ರೈಲು ಸಂಚಾರ ರದ್ದುಗೊಂಡಿದ್ದು, 38 ರೈಲು ಮಾರ್ಗ ಬದಲಾವಣೆ ಮಾಡಿಕೊಂಡಿದೆ. ಸಂಚಾರ ಸ್ಥಗಿತ ಮತ್ತು ಮಾರ್ಗ ಬದಲಾವಣೆಗೊಂಡ ರೈಲುಗಳ ಪಟ್ಟಿ ಇಲ್ಲಿದೆ.
ಕರ್ನಾಟಕದ ರದ್ದುಗೊಂಡ ರೈಲುಗಳ ಪಟ್ಟಿ
1. 12551- ಬೆಂಗಳೂರಿನಿಂದ ಕಾಮಾಖ್ಯ ಎಸಿ ಎಸ್‌ಎಫ್ ಎಕ್ಸ್‌ಪ್ರೆಸ್
2. 12864 – ಬೆಂಗಳೂರಿನಿಂದ ಹೌರಾ ಎಕ್ಸ್‌ಪ್ರೆಸ್
3. 12253 ಬೆಂಗಳೂರು – ಭಾಗಲ್ಪುರ್ ಅಂಗ ಎಕ್ಸ್‌ಪ್ರೆಸ್
4. 08411 ಬಾಲಸೋರ್ -ಭುವನೇಶ್ವರ ವಿಶೇಷ ಬಾಲಸೋರ್‌ನಿಂದ
5. 08415/08416 ಜೆನಾಪುರ-ಪುರಿ-ಜೆನಾಪುರ
6. 08439 ಪುರಿಯಿಂದ ಪಟ್ನಾಗೆ ವಿಶೇಷ ರೈಲು
ಮಾರ್ಗ ಬದಲಿಸಿದ ರೈಲುಗಳ ಪಟ್ಟಿ
1. 12503 ಬೆಂಗಳೂರು-ಅಗರ್ತಲಾ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಜೂನ್ 2, 2023 ರಂದು ವಿಜಯನಗರ-ತಿತಿಲಗಢ-ಝಾರ್ಸುಗುಡ ಮೂಲಕ ಚಲಿಸುತ್ತದೆ.
2. 12864 ಬೆಂಗಳೂರು – ಹೌರಾ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಜೂನ್ 2, 2023 ರಂದು, ನಾರಾಜ್-ಅಂಗುಲ್-ಸಂಬಲ್‌ಪುರ್ ನಗರ-ಜಾರ್ಸುಗುಡಾ ಮೂಲಕ ಚಲಿಸುತ್ತದೆ.
3. 18048 ಜೂನ್ 2, 2023 ರಂದು ವಾಸ್ಕೋಡ ಗಾಮಾದಿಂದ ವಾಸ್ಕೋಡ ಗಾಮಾ-ಶಾಲಿಮಾರ್, ಕಟಕ್-ಅಂಗುಲ್-ಸಂಬಲ್ಪುರ್ ಸಿಟಿ-ಝಾರ್ಸುಗುಡಾ ಮೂಲಕ ಚಲಿಸುತ್ತದೆ.
4. 15630 ಜೂನ್ 2, 2023 ರಂದು ಸಿಲ್ಘಾಟ್ ಟೌನ್‌ನಿಂದ ಸಿಲ್ಘಾಟ್ ಟೌನ್-ತಾಂಬರಂ ನಾಗಾಂವ್ ಎಕ್ಸ್‌ಪ್ರೆಸ್, ಜಾರ್ಸುಗುಡಾ-ಸಂಬಲ್‌ಪುರ್ ಸಿಟಿ-ಅಂಗುಲ್-ಕಟಕ್ ಮೂಲಕ ಚಲಿಸುತ್ತದೆ.
5. 07029 ಅಗರ್ತಲಾ – ಜೂನ್ 2, 2023 ರಂದು ಅಗರ್ತಲಾದಿಂದ ಸಿಕಂದರಾಬಾದ್ ವಿಶೇಷ, ಜಾರ್ಸುಗುಡ-ಸಂಬಲ್ಪುರ್ ಸಿಟಿ-ಅಂಗುಲ್-ಕಟಕ್ ಮೂಲಕ ಚಲಿಸುತ್ತದೆ.
6. 15630 ಸಿಲ್ಘಾಟ್-ತಾಂಬ್ರಮ್ ಎಕ್ಸ್‌ಪ್ರೆಸ್, ಜೂನ್ 2, 2023 ರಂದು ಪ್ರಾರಂಭವಾಗುವ ಪ್ರಯಾಣ, ಅಸನ್ಸೋಲ್-ಚಾಂಡಿಲ್-ರೂರ್ಕೆಲಾ – ಝಾರ್ಸುಗುಡಾ-ಸಂಬಲ್‌ಪುರ್ ಸಿಟಿ- ಅಂಗುಲ್-ಕಟಕ್ ಮೂಲಕ ತಿರುಗಿಸಿದ ಮಾರ್ಗದಲ್ಲಿ ಚಲಿಸುತ್ತದೆ.
ಇದನ್ನೂ ಓದಿ: Odisha Train Accident: ರಕ್ಷಣಾ ಮತ್ತು ಪರಿಹಾರ ಕಾರ್ಯ ಜಾರಿಯಲ್ಲಿರುವಾಗಲೇ ಅಪಘಾತ ನಡೆದ ಸ್ಥಳದ ವಿಹಂಗಮ ದೃಶ್ಯ ಲಭ್ಯವಾಗಿದೆ
ಇನ್ನೂ ಈ ಘಟನೆಯಿಂದ ಬೆಂಗಳೂರು-ಗುವಾಹಟಿ ಎಕ್ಸ್‌ಪ್ರೆಸ್ ರೈಲು ಸಂಚಾರ ಕ್ಯಾನ್ಸಲ್ ಮಾಡಲಾಗಿದೆ. ರಾತ್ರಿ 10.30ಕ್ಕೆ ಬೈಯ್ಯಪ್ಪನಹಳ್ಳಿ ನಿಲ್ದಾಣದಿಂದ ಒಡಿಶಾ ಮಾರ್ಗವಾಗಿ ತೆರಳಬೇಕಿದ್ದ ಬೆಂಗಳೂರು-ಗುವಾಹಟಿ ರೈಲು ಬೆಂಗಳೂರು ರೈಲು ನಿಲ್ದಾಣದಲ್ಲೇ ನಿಂತಿದೆ. ಹೀಗಾಗಿ ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಹಲವು ಪ್ರಯಾಣಿಕರು ಪರದಾಡುತ್ತಿದ್ದಾರೆ. ಬೆಂಗಳೂರಿನಿಂದ ಒಡಿಶಾಗೆ ತೆರಳಲು ಟಿಕೆಟ್ ಬುಕ್ ಮಾಡಿದ್ದ ಜನರು ರೈಲು ಬರುತ್ತೆ ಎಂದು ಕಾದು ಕುಳಿತಿದ್ದಾರೆ. ಮತ್ತೊಂದೆಡೆ ಜನರಲ್ ಟಿಕೆಟ್ ಪಡೆದಿದ್ದ ಪ್ರಯಾಣಿಕರಿಗೆ ಹಣ ವಾಪಸ್ ನೀಡಲಾಗುತ್ತಿದೆ. ಬೈಯ್ಯಪ್ಪನಹಳ್ಳಿ ನಿಲ್ದಾಣದಲ್ಲಿ ಹಣ ವಾಪಸ್ ನೀಡಲಾಗುತ್ತಿದೆ. ಇನ್ನು ಒಡಿಶಾ ಮಾರ್ಗದಲ್ಲಿ ತೆರಳುವ ರೈಲುಗಳ ಸಂಚಾರ ನಾಳೆ ಕೂಡ ಬಹುತೇಕ ರದ್ದು? ಹೀಗಾಗಿ ಪ್ರಯಾಣಿಕರು ರೈಲು ಮುಖಾಂತರ ಒಡಿಶಾಗೆ ಹೋಗಲು ಇನ್ನೆರಡು ದಿನ ಅಸಾಧ್ಯ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ