ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್​ನ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ: ಯಾರಿಗೆ ಎಷ್ಟು ಸ್ಥಾನ?

lok sabha election 2024 : ಲೋಕಸಭಾ ಚುನಾವಣೆ ರಂಗೇರಿದ್ದು, ಮೊದಲ ಹಂತದ ಮತದಾನಕ್ಕೂ ಮುನ್ನ ಮಹಾ ಸಮೀಕ್ಷೆಯೊಂದು ಹೊರಬಂದಿದೆ. ಅಬ್​ ಕಿ ಬಾರ್, ಚಾರ್ ಸೋ ಪಾರ್ ಅನ್ನೋ ಮೋದಿ ಕನಸು ನನಸಾಗುತ್ತಾ? ಮೋದಿ ನೇತೃತ್ವದಲ್ಲಿ ಎನ್​ಡಿಎ ಮೈತ್ರಿಕೂಟವನ್ನ ಬಗ್ಗುಬಡಿಯೋ ಇಂಡಿಯಾ ಒಕ್ಕೂಟದ ಹೋರಾಟಕ್ಕೆ ಫಲ ಸಿಗುತ್ತಾ? ಎಲ್ಲವೂ ಜೂನ್​ 4ರಂದು ಗೊತ್ತಾಗಲಿದೆ. ಅದಕ್ಕೂ ಮುನ್ನ ಸಮೀಕ್ಷೆಗಳು ನುಡಿದ ಭವಿಷ್ಯವೇನು? ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗುತ್ತೆ? ಎನ್ನುವ ವಿವರ ಇಲ್ಲಿದೆ.

ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್​ನ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ: ಯಾರಿಗೆ ಎಷ್ಟು ಸ್ಥಾನ?
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Apr 16, 2024 | 7:31 PM

ನವದೆಹಲಿ, (ಏಪ್ರಿಲ್ 16): ಲೋಕಸಭೆ ಚುನಾವಣೆ (lok sabha election 2024) ರಂಗೇರಿದ್ದು, ಏಫ್ರಿಲ್​ 26ರಂದು ಮೊದಲ ಹಂತದಲ್ಲಿ ಮತದಾನದೊಂದಿಗೆ ಪಾಂಚಜನ್ಯ ಮೊಳಗಲಿದೆ. ದೇಶದಲ್ಲಿ ಒಟ್ಟು 7 ಹಂತದಲ್ಲಿ ಮತದಾನ ನಡೆಯಲಿದ್ದು, ಕದನ ಕಲಿಗಳ ಭವಿಷ್ಯ ಜೂನ್​ 4ರಂದು ಹೊರಬೀಳಲಿದೆ. ಆದ್ರೆ ಅದಕ್ಕೂ ಮುನ್ನವೇ ಮತದಾನ ಪೂರ್ವ ನಡೆಸಲಾದ ಸಮೀಕ್ಷೆಗಳಲ್ಲಿ(poll Survey ) ರೋಚಕ ಮಾಹಿತಿ ಹೊರಬಿದ್ದಿದೆ. ಟಿವಿ9 ನೆಟ್​ವರ್ಕ್ (Tv9 Network), ಪೀಪಲ್ಸ್ ಇನ್‌ಸೈಟ್(People’s Insight), ಪೋಲ್‌ಸ್ಟ್ರಾಟ್‌  (Polstrat), ಈ ಮೂರು ಸಂಸ್ಥೆಗಳು ದೇಶಾದ್ಯಂತ ಚುನಾವಣಾ ಸಮೀಕ್ಷೆ ನಡೆಸಿದೆ. ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳ ಸುಮಾರು 25ಲಕ್ಷಕ್ಕೂ ಅಧಿಕ ಜನರಿಂದ ಮಾದರಿ ಸಂಗ್ರಹಿಸಲಾಗಿದೆ. 4123 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆದಿದ್ದು, ಕಂಪ್ಯೂಟರ್ ಅಸಿಸ್ಟೆಡ್ ಟೆಲಿಫೋನ್ ಇಂಟರ್ ವ್ಯೂವಿಂಗ್ ಮೂಲಕ ಜನರ ಅಭಿಪ್ರಾಯ ಪಡೆಯಲಾಗಿದೆ. ಇದು ಏಪ್ರಿಲ್​ 1ರಿಂದ ಏಪ್ರಿಲ್ 13 ರವರೆಗೆ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಸಿಕ್ಕಂತ ದತ್ತಾಂಶ ಏನು ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

ಮ್ಯಾಜಿಕ್​ ನಂ ದಾಟಲಿರುವ ಎನ್​ಡಿಎ

ಅದರಂತೆ ದೇಶಾದ್ಯಂತ 543 ಕ್ಷೇತ್ರದಲ್ಲಿ ಅಧಿಕಾರಕ್ಕೇರಲು 272 ಸ್ಥಾನಗಳಲ್ಲಿ ಗೆಲ್ಲಬೇಕಿದೆ. ಎಲ್ಲಾ ರಾಜ್ಯಗಳ ಚಿತ್ರಣವನ್ನ ತೆರೆದಿಟ್ಟಿರುವ ಸಮೀಕ್ಷೆಯೇ ಅಂತಿಮವಾಗಿದೆ. ಎನ್​ಡಿಎಗೆಷ್ಟು? ಇಂಡಿಯಾ ಮೈತ್ರಿ ಕೂಟಕ್ಕೆ ಎಷ್ಟು ಮಹಾ ಭವಿಷ್ಯವನ್ನೇ ನುಡಿದಿದೆ. 543 ಕ್ಷೇತ್ರದಲ್ಲಿ ಎನ್​ಡಿಎ ಮೈತ್ರಿ ಕೂಟ ಒಟ್ಟು 362 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಈ ಪೈಕಿ ಬಿಜೆಪಿ ಸಿಂಗಲ್​ ಹ್ಯಾಂಡೆಡ್​ ಆಗಿ 319 ಕ್ಷೇತ್ರ ಗೆಲ್ಲಲಿದೆ ಅಂದಿದ್ರೆ. ಮೈತ್ರಿ ಪಕ್ಷಗಳು 43 ಕ್ಷೇತ್ರಗಳನ್ನ ಗೆಲ್ಲಲಿದೆ ಎಂದು ಅಂದಾಜಿಸಿದೆ. ಇನ್ನು ಇಂಡಿಯಾ ಮೈತ್ರಿ ಕೂಟ 149 ಸ್ಥಾನಗಳಲ್ಲಿ ಗೆಲ್ಲಬಹುದೆಂದು ಸಮೀಕ್ಷೆ ಹೇಳಿದೆ. ಇದರಲ್ಲಿ ಕಾಂಗ್ರೆಸ್​ 49 ಸ್ಥಾನ ಗೆಲ್ಲಲಿದೆ ಅಂದಿದ್ರೆ. ಮೈತ್ರಿ ಪಕ್ಷಗಳು 100 ಸ್ಥಾನ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಯಾವ ರಾಜ್ಯದಲ್ಲಿ ಯಾರು ಎಷ್ಟ ಸ್ಥಾನ ಗೆಲ್ಲಲಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.

ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗುತ್ತೆ?

ಕಾಂಗ್ರೆಸ್​ ಮತ್ತು ಬಿಜೆಪಿಗೆ ಕರ್ನಾಟಕ ಪ್ರತಿಷ್ಠಯ ಕಣವಾಗಿದೆ. ಇಂತಹ ಅಖಾಡದಲ್ಲಿ ಬಿಜೆಪಿ, ಜೆಡಿಎಸ್​ ಮೈತ್ರಿ ಕೂಟ ಎನ್​ಡಿಎ ಅತಿಹೆಚ್ಚು ಸ್ಥಾನಗಳಿಸುತ್ತೆ ಎಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್‌ ಸಮೀಕ್ಷೆ ಭವಿಷ್ಯ ನುಡಿದಿದೆ. ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ 20, ಜೆಡಿಎಸ್​ಗೆ 3 ಸ್ಥಾನ ಸಿಗಬಹುದು. ಇನ್ನು ಕಾಂಗ್ರೆಸ್​ 5 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ)

ತಮಿಳುನಾಡಿನಲ್ಲಿ(39 ಕ್ಷೇತ್ರ ) ಯಾರಿಗೆ ಎಷ್ಟು ಸೀಟು?

ತಮಿಳುನಾಡಿನಲ್ಲಿ ಇಂಡಿಯಾ ಮೈತ್ರಿ ಕೂಟಕ್ಕೆ 32 ಸ್ಥಾನ, ಎನ್​ಡಿಎಗೆ 5 ಸ್ಥಾನ, AIADMK-02 ಸ್ಥಾನ ಗೆಲ್ಲಬಹುದು ಎಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್‌ ಸಮೀಕ್ಷೆ ಭವಿಷ್ಯ ನುಡಿದಿದೆ.

ಆಂಧ್ರಪ್ರದೇಶದಲ್ಲಿ(ಒಟ್ಟು 25 ಕ್ಷೇತ್ರ ) ಎನ್​ಡಿಎ ಕಮಲ್

ಆಂಧ್ರ ಪ್ರದೇಶದಲ್ಲಿ ಎನ್​ಡಿಎ 12 ಸ್ಥಾನ, YSRCP 13 ಸ್ಥಾನ, ಇಂಡಿಯಾ ಮೈತ್ರಿ ಕೂಟ ಶೂನ್ಯ ಎಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್‌ ಸಮೀಕ್ಷೆ ಭವಿಷ್ಯ ನುಡಿದಿದೆ)

ತೆಲಂಗಾಣ- 17 ಕ್ಷೇತ್ರ

ಇನ್ನು ತೆಲಂಗಾಣದಲ್ಲಿ ಎನ್​ಡಿಎ 7 ಸ್ಥಾನ, ಇಂಡಿಯಾ ಮೈತ್ರಿ ಕೂಟ 8 ಸ್ಥಾನ, ಬಿಆರ್​​ಎಸ್​ 1 ಸ್ಥಾನ, ಎಐಎಂಐಎಂ 1 ಸ್ಥಾನದಲ್ಲಿ ಗೆಲ್ಲೋ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.

ಕೇರಳದ 20 ಕ್ಷೇತ್ರದಲ್ಲಿ ಯಾರಿಗೆ ಎಷ್ಟು?

ಕೇರಳದಲ್ಲಿ ಎನ್​ಡಿಎ 3 ಸ್ಥಾನ, ಯಡಿಎಫ್ 14 ಸ್ಥಾನ. ಎಲ್​ಡಿಎಫ್ 3 ಸ್ಥಾನದಲ್ಲಿ ಗೆಲ್ಲಬಹುದೆಂದು ಸಮೀಕ್ಷೆ ಹೇಳಿದೆ)

ಮಹಾರಾಷ್ಟ್ರದ 48ರಲ್ಲಿ ಯಾರಿಗೆ ಎಷ್ಟು ಸ್ಥಾನ?

ಮಹಾರಾಷ್ಟ್ರದಲ್ಲಿ ಎನ್​ಡಿಎ 28 ಕ್ಷೇತ್ರ, ಇಂಡಿಯಾ ಮೈತ್ರಿ ಕೂಟ 20 ಸ್ಥಾನದಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ)

ದೀದಿ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಗೆಲ್ಲೋದು ಯಾರು?

ಮಮತಾ ಬ್ಯಾನರ್ಜಿ ತವರು ರಾಜ್ಯ ಪಶ್ಚಿಮ ಬಂಗಾಳದಲ್ಲಿ ಒಟ್ಟು 42 ಕ್ಷೇತ್ರಗಳಲ್ಲಿ ಎನ್​ಡಿಎ 20 ಸ್ಥಾನ, ಇಂಡಿಯಾ ಮೈತ್ರಿ ಕೂಟ 1 ಸ್ಥಾನ, ಇನ್ನು ಮಮತಾ ಬ್ಯಾನರ್ಜಿಯ ಟಿಎಂಸಿ 21 ಸ್ಥಾನ ಗೆಲ್ಲಿದೆ ಎಂದು ಸಮೀಕ್ಷೆ ಹೇಳಿದೆ.

40 ಕ್ಷೇತ್ರ ಹೊಂದಿರುವ ಬಿಹಾರ್​ನಲ್ಲಿ ಏನಾಗಲಿದೆ?

ಒಟ್ಟು 40 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬಿಹಾರದಲ್ಲಿ ಎನ್​ಡಿಎ 31 ಸ್ಥಾನ, ಇಂಡಿಯಾ ಮೈತ್ರಿ ಕೂಟ 8 ಸ್ಥಾನದಲ್ಲಿ ಗೆಲ್ಲಬಹುದೆಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಮಧ್ಯ ಪ್ರದೇಶದಲ್ಲಿ ಎನ್​ಡಿಎ ಕ್ಲೀನ್ ಸ್ವಿಪ್

ಮಧ್ಯ ಪ್ರದೇಶದ 29 ಲೋಕಸಭಾ ಕ್ಷೇತ್ರಗಳಲ್ಲಿ ಎನ್​ಡಿಎ ಕ್ಲೀನ್ ಸ್ವೀಪ್​ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ. 29 ಕ್ಷೇತ್ರಕ್ಕೆ 29ರಲ್ಲೂ ಎನ್​ಡಿಎ ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ)

ಮೋದಿ ತವರು ಗುಜರಾತ್​ನಲ್ಲಿ ಎನ್​ಡಿಎ ಕ್ಲೀನ್ ಸ್ವಿಪ್​

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್​ನಲ್ಲೂ ಸಹ ಎನ್​ಡಿಎ ಕ್ಲೀನ್​ ಸ್ವೀಪ್​ ಮಾಡಲಿದೆ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಒಟ್ಟು 26 ಕ್ಷೇತ್ರದಲ್ಲಿ 29 ಸ್ಥಾನಗಳನ್ನು ಎನ್​ಡಿಎ ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ರಾಜಸ್ಥಾನದಲ್ಲಿ ರಾಜ ಯಾರು?

ರಾಜಸ್ಥಾನದ 25 ಲೋಕಸಭಾ ಕ್ಷೇತ್ರಗಳಲ್ಲಿ ಎನ್​ಡಿಎ 19 ಸ್ಥಾನ, ಇಂಡಿಯಾ ಮೈತ್ರಿ ಕೂಟ 5 ಸ್ಥಾನ, ಇತರೆ 1 ಸ್ಥಾನ ಗೆಲ್ಲಲಿದೆ ಎಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್‌ ಸಮೀಕ್ಷೆ ಭವಿಷ್ಯ ನುಡಿದಿದೆ.

ಎಎಪಿ ಸರ್ಕಾರ ಇರುವ ಪಂಜಾಬ್​ನಲ್ಲಿ ಯಾರಿಗೆ ಎಷ್ಟು ಸ್ಥಾನ?​

ಪಂಜಾಬ್​ನಲ್ಲಿ 13 ಕ್ಷೇತ್ರಗಳಿದ್ದು, ಇದರಲ್ಲಿ ಎನ್​ಡಿಎ 4 ಸ್ಥಾನ, ಆಪ್​ 8 ಸ್ಥಾನದಲ್ಲಿ ಗೆಲ್ಲಬಹುದೆಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್‌ ಸಮೀಕ್ಷೆ ಭವಿಷ್ಯ ಹೇಳಿದೆ.

ಜಾರ್ಖಂಡ್​: 14 ಲೋಕಸಭಾ ಕ್ಷೇತ್ರಗಳನ್ನೊಳಗೊಂಡಿರುವ ಜಾರ್ಖಂಡ್​​ನಲ್ಲಿ ಎನ್​ಡಿಎ 12 ಸ್ಥಾನ, ಇಂಡಿಯಾ 1 ಸ್ಥಾನ, ಇತರೆಗೆ 1 ಸ್ಥಾನ ಗೆಲ್ಲಬಹುದೆಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್‌ ಸಮೀಕ್ಷೆ ಭವಿಷ್ಯ ನುಡಿದಿದೆ.

ಛತ್ತೀಸ್​ಗಢ: 11 ಕ್ಷೇತ್ರ ಇರುವ ಛತ್ತೀಸ್​ಗಢದಲ್ಲಿ ಎನ್​ಡಿಎ ಕ್ಲೀನ್ ಸ್ವೀಪ್​ ಮಾಡಲಿದೆ ಎಂದು ಭವಿಷ್ಯ ನುಡಿದಿದೆ. ಎನ್​​ಡಿಎ 11 ಕ್ಷೇತ್ರದಲ್ಲಿ ಗೆಲ್ಲಬಹುದೆಂದು ಎಂದು ಸಮೀಕ್ಷೆ ಹೇಳಿದೆ.

ಅಸ್ಸಾಂ: ಅಸ್ಸಾಂನಲ್ಲಿ 14 ಲೋಕಸಭಾ ಕ್ಷೇತ್ರಗಳಿದ್ದುಮ ಈ ಪೈಕಿ ಎನ್​ಡಿಎ 12 ಸ್ಥಾನ, ಇಂಡಿಯಾ ಮೈತ್ರಿ ಕೂಟಕ್ಕೆ 1 ಸ್ಥಾನ, ಇತರೆ 1 ಸ್ಥಾನ ಗೆಲ್ಲಬಹುದೆಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಒಡಿಶಾ: 21 ಲೋಕಸಭಾ ಕ್ಷೇತ್ರಗಳಿರುವ ಒಡಿಶಾದಲ್ಲಿ ಎನ್​ಡಿ 14 ಸ್ಥಾನ, ಇಂಡಿಯಾ ಮೈತ್ರಿ ಕೂಟ 1 ಸ್ಥಾನ, ಬಿಜೆಡಿ 6 ಸ್ಥಾನ ಗೆಲ್ಲಬಹುದೆಂದು ಸಮೀಕ್ಷೆ ಭವಿಷ್ಯ ನಡಿದಿದೆ.

ಹರಿಯಾಣ: ಹರಿಯಾಣದಲ್ಲಿ 10 ಲೋಕಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಎನ್​ಡಿಎ 9 ಸ್ಥಾನ, ಇಂಡಿಯಾ ಮೈತ್ರಿ ಕೂಟ 1 ಸ್ಥಾನದಲ್ಲಿ ಗೆಲ್ಲಬಹುದೆಂದು ಸಮೀಕ್ಷೆ ಭವಿಷ್ಯ ನಡಿದಿದೆ.

ದೆಹಲಿ:– 7 ಕ್ಷೇತ್ರ ಇರುವ ದೆಹಲಿಯಲ್ಲಿ ಎನ್​ಡಿಎ 6 ಸ್ಥಾನ, ಇಂಡಿಯಾ ಮೈತ್ರಿ ಕೂಟದ ಭಾಗವಾದ ಆಪ್​ 1 ಸ್ಥಾನದಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

ಹಿಮಾಚಲಪ್ರದೇಶ-4 ಕ್ಷೇತ್ರ: ಹಿಮಾಚಲ ಪ್ರದೇಶದಲ್ಲಿ ಎನ್​ಡಿಎ ಕ್ಲೀನ್​ ಸ್ಪೀಪ್​ ಮಾಡಲಿದೆ ಎನ್ನಲಾಗ್ತಿದೆ. ಎನ್​ಡಿಎ 4 ಕ್ಷೇತ್ರದಲ್ಲೂ ಗೆಲ್ಲಬಹುದೆಂದು ಸಮೀಕ್ಷೆ ಹೊರಬಿದ್ದಿದೆ.

ಉತ್ತರಾಖಂಡ್- 05 ಕ್ಷೇತ್ರ: ಉತ್ತರಾಖಂಡದಲ್ಲೂ ಎನ್​ಡಿಎ ಕ್ಲೀನ್​ ಸ್ವೀಪ್​ ಮಾಡಲಾಗುತ್ತೆ ಎನ್ನಲಾಗ್ತಿದೆ. ಎನ್​ಡಿಎ 5 ಸ್ಥಾನದಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

ಉತ್ತರ ಪ್ರದೇಶ-80 ಕ್ಷೇತ್ರ: ಉತ್ತರ ಪ್ರದೇಶದಲ್ಲಿ ಎನ್​ಡಿಎ 68 ಕ್ಷೇತ್ರ, ಇಂಡಿಯಾ ಮೈತ್ರಿ ಕೂಟ 12 ಸ್ಥಾನ ಗೆಲ್ಲಬಹುದು ಎಂದು ಟಿವಿ9, ಪೀಪಲ್ಸ್ ಇನ್‌ಸೈಟ್, ಪೋಲ್‌ಸ್ಟ್ರಾಟ್‌ ಸಮೀಕ್ಷೆ ಭವಿಷ್ಯ ನುಡಿದಿದೆ)

ಜಮ್ಮು-ಕಾಶ್ಮೀರ- 05 ಕ್ಷೇತ್ರ: ಜಮ್ಮು, ಕಾಶ್ಮೀರದಲ್ಲಿ ಎನ್​ಡಿಎ 68 ಕ್ಷೇತ್ರ, ಇಂಡಿಯಾ ಮೈತ್ರಿ ಕೂಟ 12 ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ