Onam 2021: ಓಣಂ ಹಬ್ಬಕ್ಕೆ ಭರ್ಜರಿ ಗಿಫ್ಟ್; ಕೇರಳದ ಸರ್ಕಾರಿ ನೌಕರರಿಗೆ 311 ಕೋಟಿ ರೂ. ಬೋನಸ್

Onam Bonus: 4 ತಿಂಗಳ ಹಿಂದಷ್ಟೇ ಕೇರಳದ ಸರ್ಕಾರಿ ಉದ್ಯೋಗಿಗಳಿಗೆ ವೇತನ ಜಾಸ್ತಿ ಮಾಡಿತ್ತು. ಇದೀಗ ಮತ್ತೆ ಓಣಂ ಹಬ್ಬದ ಬೋನಸ್ ಎಂದು ಬರೋಬ್ಬರಿ 311 ಕೋಟಿ ರೂ. ಹಣವನ್ನು ನೀಡುತ್ತಿದೆ.

Onam 2021: ಓಣಂ ಹಬ್ಬಕ್ಕೆ ಭರ್ಜರಿ ಗಿಫ್ಟ್; ಕೇರಳದ ಸರ್ಕಾರಿ ನೌಕರರಿಗೆ 311 ಕೋಟಿ ರೂ. ಬೋನಸ್
ಓಣಂ ಹಬ್ಬ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 12, 2021 | 3:51 PM

ತಿರುವನಂತಪುರಂ: ಕೇರಳದಲ್ಲಿ ಇಂದಿನಿಂದ 10 ದಿನಗಳ ಕಾಲ ಓಣಂ ಹಬ್ಬ (Onam Festival) ನಡೆಯಲಿದೆ. ಕೊರೊನಾ (Coronavirus) ಕರಿ ಛಾಯೆಯ ನಡುವೆಯೂ ಕೇರಳಿಗರು ತಮ್ಮ ಮನೆಗಳಲ್ಲಿ ವಿಜೃಂಭಣೆಯಿಂದಲೇ ಹಬ್ಬವನ್ನು ಆಚರಿಸುತ್ತಿದ್ದಾರೆ. ಕೊರೊನಾದಿಂದ ಕಳೆದೊಂದು ವರ್ಷದಿಂದ ಅದೆಷ್ಟೋ ಜನರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ, ಲಕ್ಷಾಂತರ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೈಯಲ್ಲಿ ದುಡ್ಡಿಲ್ಲದೆ ಹಲವಾರು ಜನರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಕೇರಳ ಸರ್ಕಾರ ಓಣಂ ಹಬ್ಬದ ಪ್ರಯುಕ್ತ 5.2 ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ ಬೋನಸ್ ಘೋಷಿಸಿದೆ. 4 ತಿಂಗಳ ಹಿಂದಷ್ಟೇ ಕೇರಳ ಸರ್ಕಾರ ಸರ್ಕಾರಿ ಉದ್ಯೋಗಿಗಳಿಗೆ ವೇತನ ಜಾಸ್ತಿ ಮಾಡಿತ್ತು. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೇರಳ ಸರ್ಕಾರ (Kerala Government) ಇದೀಗ ಮತ್ತೆ 5.2 ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ ಬರೋಬ್ಬರಿ 311 ಕೋಟಿ ರೂ. ಹಣವನ್ನು ಬೋನಸ್​ ಆಗಿ ನೀಡುತ್ತಿರುವುದು ಅಚ್ಚರಿ ಮೂಡಿಸಿದೆ.

ಕೇರಳದ ವಿಧಾನಸಭಾ ಚುನಾವಣೆಗೂ ಮುನ್ನ ಏಪ್ರಿಲ್ ತಿಂಗಳಲ್ಲಿ ಕೇರಳದ ಸರ್ಕಾರಿ ಉದ್ಯೋಗಿಗಳಿಗೆ ವೇತನ ಜಾಸ್ತಿ ಮಾಡಲಾಗಿತ್ತು. ಇದಕ್ಕಾಗಿ 4,850 ಕೋಟಿ ರೂ. ಹಣವನ್ನು ಸರ್ಕಾರ ಮೀಸಲಿಟ್ಟಿತ್ತು. ಇದೀಗ ಮತ್ತೆ ಕೇರಳದ ಸರ್ಕಾರಿ ಉದ್ಯೋಗಿಗಳಿಗೆ ಬಂಪರ್ ಉಡುಗೊರೆ ಸಿಕ್ಕಿದ್ದು, ಓಣಂ ಹಬ್ಬದ ಬೋನಸ್ ಕೂಡ ಸಿಕ್ಕಿದೆ. ಇನ್ನೊಂದೆಡೆ ಖಾಸಗಿ ವಲಯದಲ್ಲಿ ಕೊರೊನಾದಿಂದ ಕೆಲಸ ಕಳೆದುಕೊಂಡು ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಎಷ್ಟೋ ಉದ್ಯೋಗಿಗಳು ಐದಾರು ತಿಂಗಳಿನಿಂದ ಸಂಬಳವಿಲ್ಲದೆ ದುಡಿಯುತ್ತಿದ್ದಾರೆ. ಕಳೆದ 7 ವಾರಗಳಿಂದ ಕೇರಳದಲ್ಲಿ 2 ಜನರು ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಖಾಸಗಿ ನೌಕರರ ಕುಟುಂಬಕ್ಕೆ ಕೇರಳ ಸರ್ಕಾರ ಇದುವರೆಗೂ ಯಾವ ಸಹಾಯಹಸ್ತವನ್ನೂ ಚಾಚಿಲ್ಲ. ಸಂಕಷ್ಟದಲ್ಲಿರುವ ಖಾಸಗಿ ಸಂಸ್ಥೆಗಳಿಗೆ ನೆರವು ನೀಡಲು ಸರ್ಕಾರ ಇನ್ನೂ ಮುಂದಾಗಿಲ್ಲ ಎಂಬುದು ಗಮನಿಸಲೇಬೇಕಾದ ಸಂಗತಿ.

ಕೇರಳದ 5.2 ಲಕ್ಷ ಸರ್ಕಾರಿ ಉದ್ಯೋಗಿಗಳ ಪೈಕಿ ಸುಮಾರು 1 ಲಕ್ಷ ಜನರಿಗೆ ಓಣಂ ಹಬ್ಬದ ಬೋನಸ್ ಆಗಿ 4,000 ರೂ. ಸಿಗಲಿದೆ. ಉಳಿದವರಿಗೆ 2,750 ರೂ. ಸಿಗಲಿದೆ. ಇಷ್ಟೇ ಅಲ್ಲದೆ ಸರ್ಕಾರಿ ಉದ್ಯೋಗದಿಂದ ನಿವೃತ್ತರಾಗಿರುವ 5.3 ಲಕ್ಷ ಜನರಿಗೆ ಓಣಂ ಹಬ್ಬದ ಪ್ರಯುಕ್ತ 1,000 ರೂ. ನೀಡಲಾಗುತ್ತಿದೆ. ಹಾಗೇ, ಓಣಂ ಹಬ್ಬಕ್ಕಾಗಿ ಎಲ್ಲ ಸರ್ಕಾರಿ ಉದ್ಯೋಗಿಗಳೂ 15,00 ರೂ.ವರೆಗೆ ಅಡ್ವಾನ್ಸ್​ ವೇತನವನ್ನು ಪಡೆಯಬಹುದು ಎಂದು ಸೂಚಿಸಲಾಗಿದೆ. ಈ ಹಣವನ್ನು ಮುಂದಿನ 5 ತಿಂಗಳ ವೇತನದಲ್ಲಿ ಹಂತ-ಹಂತವಾಗಿ ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ: Onam 2021: ಕೇರಳದಲ್ಲಿ ಇಂದಿನಿಂದ ಓಣಂ ಸಂಭ್ರಮ; ಈ ಹಬ್ಬದಂದು ಭೂಮಿಗೆ ಬರುತ್ತಾನೆ ಬಲಿ ಚಕ್ರವರ್ತಿ!

Coronavirus ಕೇರಳದಲ್ಲಿ 18,607 ಹೊಸ ಕೊವಿಡ್ ಪ್ರಕರಣ ಪತ್ತೆ, 93 ಸಾವು

(Onam 2021 Kerala Government Announces Special Bonus of 311 Crore Rs for Government Employees)

Published On - 3:49 pm, Thu, 12 August 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ