Amarnath Yatra 2021: ಅಮರನಾಥ ದೇಗುಲದಲ್ಲಿ ವರ್ಚ್ಯುವಲ್ ದರ್ಶನ, ಆರತಿ ಇಂದಿನಿಂದ ಪ್ರಾರಂಭ..

ಪ್ರಸಕ್ತ ವರ್ಷ ಮೊದಲು ಒಂದು ಬಾರಿ ಅಮರನಾಥ ಯಾತ್ರೆ ಮುಂದೂಡಲ್ಪಟ್ಟಿತ್ತು. ಆದರೆ ಬಳಿಕ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಅಮರನಾಥ ದೇವಸ್ಥಾನದ ಮಂಡಳಿಯೊಂದಿಗೆ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.

Amarnath Yatra 2021: ಅಮರನಾಥ ದೇಗುಲದಲ್ಲಿ ವರ್ಚ್ಯುವಲ್ ದರ್ಶನ, ಆರತಿ ಇಂದಿನಿಂದ ಪ್ರಾರಂಭ..
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jun 28, 2021 | 1:32 PM

ಶ್ರೀನಗರ: ಈ ವರ್ಷ ಕೊವಿಡ್​ 19 ಕಾರಣದಿಂದಾಗಿ ಅಮರನಾಥ ಯಾತ್ರೆ ರದ್ದುಗೊಂಡಿದ್ದು, ಆನ್​ಲೈನ್​ನಲ್ಲಿ ದೇವರ ದರ್ಶನ ಪಡೆದು, ಆರತಿ ನೆರವೇರಿಸಲು ಅವಕಾಶ ಮಾಡಿಕೊಡಲಾಗಿದೆ. ಅಮರನಾಥ ಯಾತ್ರೆ ಹಿಂದುಗಳ ಪವಿತ್ರ ಯಾತ್ರೆಯಲ್ಲೊಂದಾಗಿದೆ. ಕೊವಿಡ್​ 19 ಸೋಂಕಿನ ಕಾರಣದಿಂದ ಕಳೆದ ವರ್ಷವೂ ಅಮರನಾಥ ಯಾತ್ರೆ ರದ್ದಾಗುತ್ತಿದೆ. ಆದರೆ ಭಕ್ತರಿಗೆ ನಿರಾಸೆ ಆಗದಿರಲೆಂದು ಇಂದಿನಿಂದಲೇ ವರ್ಚ್ಯುವಲ್​ ಆರತಿ ಮತ್ತು ದರ್ಶನ ವ್ಯವಸ್ಥೆ ಮಾಡಲಾಗಿದೆ.

ಈ ವರ್ಷ ಅಮರನಾಥ ಯಾತ್ರೆ ಸಾಂಕೇತಿಕವಾಗಿ ನಡೆಯಲಿದೆ. ಇಲ್ಲಿನ ಗುಹೆಗೆ ಸಂಬಂಧಪಟ್ಟ ಎಲ್ಲ ಧಾರ್ಮಿಕ ಕಾರ್ಯಕ್ರಮಗಳೂ ವರ್ಚ್ಯುವಲ್​ ಆಗಿಯೇ ನೆರವೇರಲಿದೆ ಎಂದು ಜೂನ್​ 21ರಂದು ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಹೇಳಿದ್ದರು.

ಆನ್​ಲೈನ್ ಆರತಿ ಜೂ.28ರಿಂದ ಆಗಸ್ಟ್​ 22ರವರೆಗೆ ದಿನದಲ್ಲಿ ಒಂದು ತಾಸು ನಡೆಯಲಿದೆ. ಮುಂಜಾನೆ 6ರಿಂದ 6.30ರವರೆಗೆ ಮತ್ತು ಸಂಜೆ 5.30ರವರೆಗೆ ಕಾಲಾವಕಾಶ ಕೊಡಲಾಗಿದೆ. ಇದು ಶ್ರೀ ಅಮರನಾಥ್​ ಜಿ ವೆಬ್​ಸೈಟ್​, ಆ್ಯಪ್​ ಮತ್ತು ಎಂಎಚ್​ 1 ಪ್ರೈಮ್​​ನಲ್ಲಿ ನೇರಪ್ರಸಾರ ಆಗಲಿದೆ.

ಪ್ರಸಕ್ತ ವರ್ಷ ಮೊದಲು ಒಂದು ಬಾರಿ ಅಮರನಾಥ ಯಾತ್ರೆ ಮುಂದೂಡಲ್ಪಟ್ಟಿತ್ತು. ಆದರೆ ಬಳಿಕ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಅಮರನಾಥ ದೇವಸ್ಥಾನದ ಮಂಡಳಿಯೊಂದಿಗೆ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮನೋಜ್​ ಸಿನ್ಹಾ ಟ್ವೀಟ್ ಮಾಡಿದ್ದರು. ಹಿಮಾಲಯದ ಮೇಲಿರುವ ಅಮರನಾಥ ದೇಗುಲಕ್ಕೆ ಯಾತ್ರೆ ಈ ಬಾರಿ ಜೂನ್​ 28ರಿಂದ ಪಹಲ್ಗಾಮ್​ ಮತ್ತು ಬಲ್ಟಾಲ್​ ಮಾರ್ಗದಲ್ಲಿ ಪ್ರಾರಂಭವಾಗಲಿತ್ತು. ಹಾಗೇ ಆಗಸ್ಟ್​22ರಂದು ಮುಕ್ತಾಯಗೊಳ್ಳಬೇಕಿತ್ತು.

ಇದನ್ನೂ ಓದಿ:ಲಾಕ್‌ಡೌನ್‌ ತೆರವಾದರೂ ಸುಧಾರಿಸಿಲ್ಲ ನೇಕಾರರ ಬದುಕು; ಬಾಗಲಕೋಟೆಯಲ್ಲಿ ನೇಯ್ದ ಬಟ್ಟೆ ಮನೆಯಲ್ಲೇ ರಾಶಿ 

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ