Operation Sindoor: ಭಾರತ ಪಾಕ್​ ಮೇಲೆ ನಡೆಸಿದ ದಾಳಿಯಲ್ಲಿ 100 ಉಗ್ರರು ಹತರಾಗಿದ್ದಾರೆ: ರಾಜನಾಥ್​ ಸಿಂಗ್

ಭಾರತ ಪಾಕಿಸ್ತಾನದ(Pakistan)ದ​ ಮೇಲೆ ನಡೆಸಿರುವ ದಾಳಿಯಲ್ಲಿ 100 ಉಗ್ರರು ಹತರಾಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಹೇಳಿದ್ದಾರೆ. ಇಂದು ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್​ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿ ಆಪರೇಷನ್​ ಸಿಂಧೂರ್​ಗೆ 100 ಉಗ್ರರು ಬಲಿಯಾಗಿದ್ದಾರೆಂದು ಹೇಳಿದ್ದಾರೆ. ಈ ಕಾರ್ಯಾಚರಣೆಯು ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡಿತ್ತು ಮತ್ತು ಅವೆಲ್ಲವನ್ನೂ ನಾಶಪಡಿಸಲಾಗಿದೆ.

Operation Sindoor: ಭಾರತ ಪಾಕ್​ ಮೇಲೆ ನಡೆಸಿದ ದಾಳಿಯಲ್ಲಿ 100 ಉಗ್ರರು ಹತರಾಗಿದ್ದಾರೆ: ರಾಜನಾಥ್​ ಸಿಂಗ್
ರಾಜನಾಥ್​ ಸಿಂಗ್
Image Credit source: Northeast Post

Updated on: May 08, 2025 | 2:11 PM

ನವದೆಹಲಿ, ಮೇ 08: ಭಾರತ ಪಾಕಿಸ್ತಾನದ(Pakistan)ದ​ ಮೇಲೆ ನಡೆಸಿರುವ ದಾಳಿಯಲ್ಲಿ 100 ಉಗ್ರರು ಹತರಾಗಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಹೇಳಿದ್ದಾರೆ. ಇಂದು ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್​ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿ ಆಪರೇಷನ್​ ಸಿಂಧೂರ್(Operation Sindoor)​ಗೆ 100 ಉಗ್ರರು ಬಲಿಯಾಗಿದ್ದಾರೆಂದು ಹೇಳಿದ್ದಾರೆ. ಈ ಕಾರ್ಯಾಚರಣೆಯು ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡಿತ್ತು ಮತ್ತು ಅವೆಲ್ಲವನ್ನೂ ನಾಶಪಡಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಸ್‌ಪಿಯ ರಾಮ್‌ಗೋಪಾಲ್ ಯಾದವ್ ಸೇರಿದಂತೆ ಎಲ್ಲ ಪಕ್ಷಗಳ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಮೊದಲ ಬಾರಿಗೆ ಸರ್ಕಾರವು ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ ಭಯೋತ್ಪಾದಕರ ಸಂಖ್ಯೆಯನ್ನು ನೀಡಲಾಗಿದೆ. ನಾವು ಈ ವಿಷಯವನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುವುದಿಲ್ಲ, ಆದರೆ ಪಾಕಿಸ್ತಾನ ಏನಾದರೂ ಮಾಡಿದರೆ ನಾವು ಕೂಡ ಹಿಂದೆ ಸರಿಯುವುದಿಲ್ಲ ಎಂದು ಅವರು ಸಭೆಯಲ್ಲಿ ಹೇಳಿದರು.

ಆಪರೇಷನ್ ಸಿಂಧೂರ್’ ಅಡಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ಸೇನಾ ಕಾರ್ಯಾಚರಣೆಯನ್ನು ಮೂರು ಸೇನೆಗಳು ಜಂಟಿಯಾಗಿ ನಡೆಸಿದ್ದವು. ಇದು ಯಾವುದೇ ಪ್ರಚೋದನೆಯಿಲ್ಲದೆ ಸಂಯಮದ ಕ್ರಮವಾಗಿದ್ದು, ಪಾಕಿಸ್ತಾನದ ಮಿಲಿಟರಿ ಸ್ಥಾಪನೆಗಳು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಭಯೋತ್ಪಾದಕ ನೆಲೆಗಳನ್ನು ಮಾತ್ರ ಗುರಿಯಾಗಿಸಲಾಗಿದೆ.

ಇದನ್ನೂ ಓದಿ
ಯುದ್ಧದ ಉದ್ವಿಗ್ನತೆ: ದೇಶಾದ್ಯಂತ ಮಾಕ್​ ಡ್ರಿಲ್​ ದರ್ಶನ ಹೇಗಿತ್ತು?
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ಪಾಕಿಸ್ತಾನದೊಳಗೆ ನುಗ್ಗಿ ಹೊಡೆದ ಭಾರತ, ಆಪರೇಷನ್ ಸಿಂಧೂರಕ್ಕೆ ಜಾಗತಿಕ ಬೆಂಬಲ
ಭಾರತ ನಡೆಸಿದ ದಾಳಿಯಲ್ಲಿ ಉಗ್ರ ಮಸೂದ್ ಅಜರ್, ಹಫೀಜ್ ಸಯೀದ್ ಸಾವು?

ಮತ್ತಷ್ಟು ಓದಿ: ಉಗ್ರ ಮಸೂದ್ ಅಜರ್​ಗೆ ಮನೆಯವರೇ ಸತ್ತರೂ ಕಣ್ಣೀರಿಲ್ಲ, ಹತಾಶೆಯಿಲ್ಲ: ಭಯೋತ್ಪಾದನೆಯೇ ಕನಸು!

ಮೇ 6 ರ ರಾತ್ರಿ 1 ಗಂಟೆ ಸುಮಾರಿಗೆ ಭಾರತೀಯ ಸೇನೆಯು ಈ ಕಾರ್ಯಾಚರಣೆಯನ್ನು ನಡೆಸಿತು, ಇದರಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿರುವ 9 ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಲಾಗಿತ್ತು. ದೇಶಾದ್ಯಂತ ರಾಜಕೀಯ ಪಕ್ಷಗಳು ಈ ಕಾರ್ಯಾಚರಣೆಯನ್ನು ಶ್ಲಾಘಿಸಿವೆ. ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಇಡೀ ವಿರೋಧ ಪಕ್ಷವು ಸರ್ಕಾರದ ಜೊತೆ ನಿಂತಿದೆ ಮತ್ತು ಎಲ್ಲಾ ಪಕ್ಷಗಳು ಇದನ್ನು ಗಂಭೀರವಾಗಿ ಚರ್ಚಿಸಿವೆ.

ಸಭೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈ ವಿಷಯವನ್ನು ಗಂಭೀರವಾಗಿ ಚರ್ಚಿಸಿದವು ಮತ್ತು ಈ ವಿಷಯದಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ ಎಂದು ಸರ್ವಾನುಮತದಿಂದ ಹೇಳಿವೆ ಎಂದು ರಿಜಿಜು ಹೇಳಿದರು.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:00 pm, Thu, 8 May 25