
ನವದೆಹಲಿ, ಮೇ 11: ಭಾರತದ ಸೇನೆಗಳು ಮೇ 7ರಿಂದ 10ರವರೆಗೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ (Operation Sindoor) ಪಾಕಿಸ್ತಾನದ 35-40 ಸೈನಿಕರನ್ನು ಕೊಲ್ಲಲಾಗಿದೆ. ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಓ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ವಾಯುಪಡೆ ಕಾರ್ಯಾಚರಣೆಗಳ ಮಹಾನಿರ್ದೇಶಕ ಎಕೆ ಭಾರ್ತಿ, ವೈಸ್ ಅಡ್ಮಿರಲ್ ಎಎಸ್ ಪ್ರಮೋದ್ ಅವರು ಪಾಲ್ಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಲಾಯಿತು. ಸಿಂದೂರ ಕಾರ್ಯಾಚರಣೆಯಲ್ಲಿ ಭಾರತದ ಐವರು ಸೈನಿಕರೂ ಬಲಿಯಾದ ಸಂಗತಿಯನ್ನು ಈ ಸಂದರ್ಭದಲ್ಲಿ ತಿಳಿಸಲಾಗಿದೆ.
ನಾಲ್ಕು ದಿನಗಳ ಕಾಲ ನಡೆದ ಆಪರೇಷನ್ ಸಿಂದೂರ್ ಹಾಗೂ ನಂತರದ ಸಂಘರ್ಷದಲ್ಲಿ ಭಾರತದ ಸೇನೆ ಪಾಕಿಸ್ತಾನದ ಮೇಲೆ ಪೂರ್ಣಪ್ರಮಾಣದ ಪ್ರಾಬಲ್ಯ ಮೆರೆದಿದೆ. 35-40 ಪಾಕಿಸ್ತಾನೀ ಸೈನಿಕರನ್ನು ಕೊಂದದ್ದಲ್ಲದೆ ಇನ್ನೂ ಐದಾರು ಪ್ರಮುಖ ಸಾಧನೆಗಳನ್ನು ಭಾರತೀಯ ಸೇನೆ ಮಾಡಿದೆ. ಆಪರೇಷನ್ ಸಿಂದೂರದ ಸಕ್ಸಸ್ ಈ ಕೆಳಕಂಡಂತಿದೆ:
ಇದನ್ನೂ ಓದಿ: Target Success: ಆಪರೇಷನ್ ಸಿಂದೂರ್ನಿಂದ ಮೂರೂ ಗುರಿ ಈಡೇರಿಕೆ: ಭಾರತ ಹೇಳಿಕೆ
ಸುದ್ದಿಗೋಷ್ಠಿಯಲ್ಲಿ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಏರ್ ಮಾರ್ಷಲ್ ಎಕೆ ಭಾರ್ತಿ, ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಮತ್ತು ಮೇಜರ್ ಜನರಲ್ ಸಂದೀಪ್ ಶಾರ್ದಾ ಪಾಲ್ಗೊಂಡಿದ್ದರು. ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಅವರು ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನಕ್ಕೆ ಹೇಗೆಲ್ಲಾ ಹಾನಿಯಾಯಿತು ಎಂದು ಸಾಕ್ಷ್ಯಗಳುಳ್ಳ ಚಿತ್ರಗಳನ್ನು ಸ್ಲೈಡ್ಗಳಲ್ಲಿ ತೋರಿಸಿದರು. ಸುದ್ದಿಗೋಷ್ಠಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮವೂ ಇತ್ತು.
ಭಾರತವು ಮೇ 7ರಿಂದ 10ರವರೆಗೆ ತನ್ನ ವಿವಿಧ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಯಾವೆಲ್ಲಾ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಿತು ಎನ್ನುವ ವಿವರವನ್ನು ಸದ್ಯ ನೀಡಲು ಏರ್ ಮಾರ್ಷಲ್ ಎಕೆ ಭಾರ್ತಿ ನಿರಾಕರಿಸಿದರು. ಕಾರ್ಯಾಚರಣೆಯಲ್ಲಿ ಏನೆಲ್ಲಾ ಪರಿಣಾಮವಾಯಿತು ಎನ್ನುವ ವಿವರ ಮಾತ್ರ ಈಗ ನೀಡುವುದಾಗಿ ಅವರು ಹೇಳಿ, ನಂತರ ಕಾರ್ಯಾಚರಣೆಯ ವಿವರ ಬಿಚ್ಚಿಟ್ಟರು.
ಇದನ್ನೂ ಓದಿ: ಆಪರೇಷನ್ ಸಿಂದೂರ್: ಉಗ್ರರನ್ನು ಸದೆಬಡಿದ ಪುರಾವೆಗಳನ್ನು ಬಿಚ್ಚಿಟ್ಟ ಡಿಜಿಎಂಒ
ನಾಲ್ಕು ದಿನಗಳ ಕಾಲ ನಡೆದ ಭಾರತ ಮತ್ತು ಪಾಕಿಸ್ತಾನ ಸಂಘರ್ಷಕ್ಕೆ ಮೇ 10ರಂದು ಸಂಜೆ ವಿರಾಮ ಬಿದ್ದಿದೆ. ಭಾರತವು ನೂರ್ ಖಾನ್ ವಾಯುನೆಲೆ ಸೇರಿದಂತೆ ಪಾಕಿಸ್ತಾನದ ಪ್ರಮುಖ ಏರ್ ಬೇಸ್ಗಳನ್ನು ನಾಶ ಮಾಡಿದ್ದು ಪಾಕಿಸ್ತಾನಕ್ಕೆ ಆತಂಕವಾಗಿ, ಕದನ ವಿರಾಮಕ್ಕೆ ನೆರವಾಗುವಂತೆ ಅಮೆರಿಕಕ್ಕೆ ಮನವಿ ಮಾಡಿತೆನ್ನಲಾಗಿದೆ. ಮೇ 10ರಂದು ಸಂಜೆ 5ಕ್ಕೆ ಅನ್ವಯ ಆಗುವಂತೆ ಕದನ ವಿರಾಮ ನಿಯಮ ಜಾರಿಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ