ನವದೆಹಲಿ, ಸೆಪ್ಟೆಂಬರ್ 25: ನಾಲ್ಕು ದಿನಗಳ ಹಿಂದೆ ರಾಜ್ಯಸಭೆಯ ವಿಸಟರ್ಸ್ ಗ್ಯಾಲರಿಯಲ್ಲಿ (Rajya Sabha Visitors’ Gallery) ಘೋಷಣೆಗಳನ್ನು ಕೂಗಿದ ಘಟನೆ ಬಗ್ಗೆ ಕೆಲ ರಾಜ್ಯಸಭಾ ಸದಸ್ಯರು ಗಂಭೀರವಾಗಿ ಪರಿಗಣಿಸಿದ್ದಾರೆ. ಆ ಘಟನೆ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಬ್ಬರು ರಾಜ್ಯಸಭೆ ಸದಸ್ಯೆಯರು ಸಭಾಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯೆ ಮೌಸಮ್ ನೂರ್ ಮತ್ತು ಶಿವಸೇನಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಈ ಪತ್ರ ಬರೆದಿದ್ದು, ಸೆಪ್ಟೆಂಬರ್ 21ರಂದು ಸಂಭವಿಸಿದ್ದ ಘಟನೆ (Political sloganeering incident) ಬಗ್ಗೆ ತಮ್ಮ ಆತಂಕ ತೋರ್ಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಬಿಗಿ ಭದ್ರತೆ ಇದ್ದರೂ ರಾಜಕೀಯ ಘೋಷಣೆಗಳು ನಡೆದಿರುವುದಕ್ಕೆ ಗಾಬರಿ ಪಟ್ಟಿರುವ ಈ ಇಬ್ಬರು ಸದಸ್ಯೆಯರು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಯ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Shiv Sena (UBT) MP Priyanka Chaturvedi writes to the Chairman of the Rajya Sabha requesting urgent action against political sloganeering by visitors in the House gallery on September 21. pic.twitter.com/kP204xDc1O
— ANI (@ANI) September 23, 2023
ಸೆಪ್ಟೆಂಬರ್ 21ರಂದು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗಿತ್ತು. ಆ ವೇಳೆ ಮಸೂದೆ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆಯುತ್ತಿರುವಂತೆಯೇ ವಿಸಿಟರ್ಸ್ ಗ್ಯಾಲರಿಯಿಂದ 50 ಮಂದಿ ಸಾರ್ವಜನಿಕರು ‘ಮೋದಿ ಮೋದಿ’ ಎಂದು ಘೋಷಣೆಗಳನ್ನು ಕೂಗಿದರು. ಇದರಿಂದ ಕ್ರುದ್ಧಗೊಂಡ ವಿಕ್ಷಗಳ ಸದಸ್ಯರು 10 ನಿಮಿಷ ಆ ಸಭೆಯಿಂದ ಹೊರಗೆ ಹೋದರು.
ರಾಜ್ಯಸಭೆ ಅಥವಾ ಲೋಕಸಭೆಯಲ್ಲಿ ಕಲಾಪಗಳನ್ನು ಸಾರ್ವಜನಿಕರು ವೀಕ್ಷಿಸಲು ಅವಕಾಶ ಇದೆಯಾದರೂ ಯಾರೂ ಕೂಡ ಸದ್ದು ಮಾಡುವಂತಿಲ್ಲ. ಕಲಾಪಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ ತರುವಂತಿಲ್ಲ. ಆದರೂ ಕೂಡ ಗ್ಯಾಲರಿಯಲ್ಲಿ ಕೂತು ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗಲಾಗಿದ್ದರ ಬಗ್ಗೆ ಪ್ರಿಯಾಂಕಾ ಚತುರ್ವೇದಿ ಮತ್ತು ಮೌಸಮ್ ನೂರ್ ಅಸಮಾಧಾನ ವ್ಯಕ್ತಪಡಿಸಿ ಈಗ ರಾಜ್ಯಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಇನ್ನು, ಲೋಕಸಭೆಯ ಕಲಾಪದ ವೇಳೆ, ಬಿಎಸ್ಪಿ ಸದಸ್ಯ ದಾನಿಶ್ ಅಲಿ ಬಗ್ಗೆ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವಹೇಳನಕಾರಿ ಹೇಳಿಕೆ ನೀಡಿದ್ದರೆನ್ನಲಾಗಿದ್ದು, ಈ ವಿಚಾರದ ಬಗ್ಗೆ ವಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಸಭೆಯ ಪ್ರಿವಿಲೇಜ್ ಕಮಿಟಿಗೆ ವಹಿಸುವಂತೆ ಒತ್ತಾಯಿಸಿ ಹಲವು ವಿಪಕ್ಷಗಳ ಸದಸ್ಯರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದುಂಟು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ