ಆಕ್ಸಿಜನ್ ಸ್ಥಗಿತ; ಆಗ್ರಾದ ಆಸ್ಪತ್ರೆಯಲ್ಲಿ ಸೋಂಕಿತರ ಕೊಲೆ? ಸ್ಫೋಟಕ ಸತ್ಯ ಬಾಯ್ಬಿಟ್ಟ ಆಸ್ಪತ್ರೆ ಮಾಲೀಕ

ಪಾರಸ್ ಆಸ್ಪತ್ರೆ ಮಾಲೀಕನ ವಿಡಿಯೋ, ಆಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಪಾರಸ್ ಆಸ್ಪತ್ರೆಯಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆಯಿತ್ತು. ಮುಖ್ಯಮಂತ್ರಿ ಕೂಡ ಆಕ್ಸಿಜನ್ ಪಡೆಯಲು ಆಗಲ್ಲವೆಂದಿದ್ರು. ಹೀಗಾಗಿ ರೋಗಿಗಳನ್ನ ಡಿಸ್ಚಾರ್ಜ್ ಮಾಡಲು ಆರಂಭಿಸಿದ್ದೆವು....

ಆಕ್ಸಿಜನ್ ಸ್ಥಗಿತ; ಆಗ್ರಾದ ಆಸ್ಪತ್ರೆಯಲ್ಲಿ ಸೋಂಕಿತರ ಕೊಲೆ?  ಸ್ಫೋಟಕ ಸತ್ಯ ಬಾಯ್ಬಿಟ್ಟ ಆಸ್ಪತ್ರೆ ಮಾಲೀಕ
ವೈದ್ಯಕೀಯ ಆಮ್ಲಜನಕ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on: Jun 08, 2021 | 2:13 PM

ಉತ್ತರ ಪ್ರದೇಶದ ಆಗ್ರಾದ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ಸ್ಥಗಿತಗೊಂಡು ಕೇವಲ 5 ನಿಮಿಷದಲ್ಲಿ 22 ರೋಗಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿ ಆಘಾತಕಾರಿ ಮಾಹಿತಿಯೊಂದು ಬಹಿರಂಗಗೊಂಡಿದೆ. ಆಕ್ಸಿಜನ್ ನಿಲ್ಲಿಸುವುದಾಗಿ ನಾನೇ ಹೇಳಿದ್ದೆ ಎಂದು ಪಾರಸ್ ಆಸ್ಪತ್ರೆ ಮಾಲೀಕ ಡಾ.ಅರಿಂಜಯ್ ಜೈನ್ ಬಾಯ್ಬಿಟ್ಟಿದ್ದಾರೆ.

ಏಪ್ರಿಲ್ 27ರಂದು ಉತ್ತರ ಪ್ರದೇಶದ ಆಗ್ರಾದ ಪಾರಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸ್ಥಗಿತಗೊಂಡು ಕೇವಲ 5 ನಿಮಿಷದಲ್ಲಿ 22 ಸೋಂಕಿತರು ಮೃತಪಟ್ಟಿದ್ದರು. ಸದ್ಯ ಈಗ ಆಸ್ಪತ್ರೆ ಮಾಲೀಕ ನಡೆದಿದ್ದ ಘಟನೆ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಪಾರಸ್ ಆಸ್ಪತ್ರೆ ಮಾಲೀಕ ಡಾ.ಅರಿಂಜಯ್ ಜೈನ್ ಸೂಚನೆ ಮೇರೆಗೆ ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಈ ಪರಿಣಾಮವಾಗಿ ಕೇವಲ 5 ನಿಮಿಷದಲ್ಲಿ 22 ಸೋಂಕಿತರು ಮೃತಪಟ್ಟಿದ್ದಾರೆ. 22 ರೋಗಿಗಳ ಸಾವಿನ ಬಗ್ಗೆ ತನಿಖೆಗೆ ನಡೆಸಲು ಉತ್ತರ ಪ್ರದೇಶದ ಆಗ್ರಾ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.

ಘಟನೆ ಖಂಡಿಸಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಆಕ್ರೋಶ ಹೊರ ಹಾಕಿದ್ದರು. ಉತ್ತರ ಪ್ರದೇಶದಲ್ಲಿ ಮೆಡಿಕಲ್ ಆಕ್ಸಿಜನ್ ಮಾತ್ರವಲ್ಲ. ಮಾನವೀಯತೆ ಕೊರತೆಯಿದೆ ಎಂದು ವಾಗ್ದಾಳಿ ನಡೆಸಿದ್ದರು. ಸದ್ಯ ಈಗ ಪಾರಸ್ ಆಸ್ಪತ್ರೆ ಮಾಲೀಕನ ವಿಡಿಯೋ, ಆಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಪಾರಸ್ ಆಸ್ಪತ್ರೆಯಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆಯಿತ್ತು. ಮುಖ್ಯಮಂತ್ರಿ ಕೂಡ ಆಕ್ಸಿಜನ್ ಪಡೆಯಲು ಆಗಲ್ಲವೆಂದಿದ್ರು. ಹೀಗಾಗಿ ರೋಗಿಗಳನ್ನ ಡಿಸ್ಚಾರ್ಜ್ ಮಾಡಲು ಆರಂಭಿಸಿದ್ದೆವು.

ರೋಗಿಗಳ ಕುಟುಂಬಸ್ಥರಿಗೆ ಕೌನ್ಸೆಲಿಂಗ್ ಮಾಡಲು ಆರಂಭಿಸಿದೆವು. ಕೆಲವರು ನಮ್ಮ ಮಾತು ಕೇಳಿ ರೋಗಿಗಳನ್ನು ಕರೆದೊಯ್ದರು. ಇನ್ನೂ ಕೆಲವರು ಆಸ್ಪತ್ರೆ ಬಿಟ್ಟು ಹೋಗುವುದಿಲ್ಲವೆಂದು ಹೇಳಿದ್ದರು. ಆ ಸಂದರ್ಭದಲ್ಲಿ ಅಣಕು ಕಾಱಚರಣೆ ಮಾಡೋಣ ಅಂದೆ ಯಾರು ಬದುಕ್ತಾರೋ, ಯಾರು ಸಾಯ್ತಾರೋ ನೋಡೋಣ ಎಂದೆ. ಏ.27ರ ಬೆಳಗ್ಗೆ 7 ಗಂಟೆ ಸುಮಾರಿಗೆ ಅಣಕು ಕಾರ್ಯಾಚರಣೆ ಮಾಡಿದೆವು. ಯಾರಿಗೂ ಗೊತ್ತಾಗದಂತೆ ಆಮ್ಲಜನಕ ಪೂರೈಕೆ ನಿಲ್ಲಿಸಿದ್ದೆವು. 22 ರೋಗಿಗಳು ಸಾಯುತ್ತಾರೆ ಎಂದು ನಾವು ಗುರುತಿಸಿದೆವು ಎಂದು ಪಾರಸ್ ಆಸ್ಪತ್ರೆ ಮಾಲೀಕ ಡಾ.ಅರಿಂಜಯ್ ಜೈನ್ ಹೇಳಿರುವ ವಿಡಿಯೋ, ಆಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ; ಆಡಿಯೋದಲ್ಲಿರುವುದು ಸತ್ಯವಾದರೆ ಅಧಿಕಾರಿಯನ್ನು ಬಂಧಿಸಿ ಎಂದ ಮಾಜಿ ಶಾಸಕ ವಾಸು