ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ 74 ಸಾಧಕರಿಗೆ ಇಂದು 2022ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಪದ್ಮವಿಭೂಷಣ ಪುರಸ್ಕೃತರಾದ ಪ್ರಭಾ ಅತ್ರೆ ಮತ್ತು ಕಲ್ಯಾಣ್ ಸಿಂಗ್ (ಮರಣೋತ್ತರ), ಪದ್ಮಭೂಷಣ ಪುರಸ್ಕೃತರಾದ ವಿಕ್ಟರ್ ಬ್ಯಾನರ್ಜಿ, ಸಂಜಯ ರಾಜಾರಾಂ (ಮರಣೋತ್ತರ), ಪ್ರತಿಭಾ ರೇ ಮತ್ತು ಆಚಾರ್ಯ ವಶಿಷ್ಠ ತ್ರಿಪಾಠಿ ಮುಂತಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವರ್ಷ ಒಟ್ಟು 128 ಪದ್ಮ ಪ್ರಶಸ್ತಿಗಳನ್ನು ನೀಡಲಾಯಿತು. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಈ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕಲೆ, ಸಮಾಜಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಇತ್ಯಾದಿ ಚಟುವಟಿಕೆಗಳ ವಿವಿಧ ವಿಭಾಗಗಳು ಮತ್ತು ಕ್ಷೇತ್ರಗಳಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಯಿತು.
#WATCH | Tokyo Olympic Gold medallist Neeraj Chopra receives Padma Shri award from President Ram Nath Kovind pic.twitter.com/S1NLkkc2J7
— ANI (@ANI) March 28, 2022
ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕೂಡ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.
A grassroots agricultural innovator from Karnataka’s Dharwad, Abdul Khader Nadakattin receives Padma Shri award from President Ram Nath Kovind.
He has been credited with over 40 innovations that assist small and marginal farmers across India. pic.twitter.com/KVgbCFbm4H
— ANI (@ANI) March 28, 2022
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಗಾಯಕ ಸೋನು ನಿಗಮ್ ಕೂಡ ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಧಾರವಾಡದ ತಳಮಟ್ಟದ ಕೃಷಿ ಆವಿಷ್ಕಾರಕ ಅಬ್ದುಲ್ ಖಾದರ್ ನಡಕಟ್ಟಿನ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. ಭಾರತದಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ಮಾಡುವ 40ಕ್ಕೂ ಹೆಚ್ಚು ಆವಿಷ್ಕಾರಗಳನ್ನು ಅವರು ಕಂಡುಹಿಡಿದಿದ್ದಾರೆ.
Wood carving artist from Ladakh, Tsering Namgyal receives Padma Shri award from President Ram Nath Kovind. pic.twitter.com/DOohtKdDhm
— ANI (@ANI) March 28, 2022
ಕೋವಿಡ್ -19 ಲಸಿಕೆಯಾದ ಕೋವಾಕ್ಸಿನ್ ಅನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಕ್ಕಾಗಿ ಭಾರತ್ ಬಯೋಟೆಕ್ ಎಂಡಿ ಕೃಷ್ಣ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದಾರೆ. ಐರ್ಲೆಂಡ್‌ನ ಪ್ರೊಫೆಸರ್ ರುಟ್ಗರ್ ಕೊರ್ಟೆನ್‌ಹಾರ್ಸ್ಟ್ ಅವರು ಐರಿಶ್ ಶಾಲೆಗಳಲ್ಲಿ ಸಂಸ್ಕೃತವನ್ನು ಜನಪ್ರಿಯಗೊಳಿಸಲು ನೀಡಿದ ಕೊಡುಗೆಗಾಗಿ ಪದ್ಮಶ್ರೀಯನ್ನು ಪಡೆದಿದ್ದಾರೆ.
#WATCH | Bharat Biotech MD Krishna Ella and Joint MD Suchitra Ella receive the Padma Bhushan award from President Ram Nath Kovind. pic.twitter.com/yxauttlvvy
— ANI (@ANI) March 28, 2022
ಪದ್ಮವಿಭೂಷಣವನ್ನು ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ. ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ ಪದ್ಮಭೂಷಣ ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿಯು ನಾಲ್ಕು ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ ಮೂವತ್ನಾಲ್ಕು ಮಹಿಳೆಯರು ಮತ್ತು ಪಟ್ಟಿಯು ವಿದೇಶಿ/ಎನ್‌ಆರ್‌ಐ/ಪಿಐಒ/ಒಸಿಐ ವರ್ಗದಿಂದ 10 ವ್ಯಕ್ತಿಗಳು ಮತ್ತು 13 ಮರಣೋತ್ತರ ಪ್ರಶಸ್ತಿ ಪುರಸ್ಕೃತರಿದ್ದಾರೆ.
ಎಂಟು ಭಾರತೀಯ ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಖ್ಯಾತ ಕ್ರೀಡಾಪಟುಗಳಾದ ನೀರಜ್ ಚೋಪ್ರಾ, ಪ್ರಮೋದ್ ಭಗತ್, ಸುಮಿತ್ ಅಂತಿಲ್, ಅವನಿ ಲೆಖರ, ಫೈಸಲ್ ಅಲಿ ದಾರ್, ಶಂಕರನಾರಾಯಣ ಮೆನನ್ ಚುಂಡಾಯಿಲ್, ಬ್ರಹ್ಮಾನಂದ ಸಂಖ್ವಾಲ್ಕರ್, ವಂದನಾ ಕಟಾರಿಯಾ ಪದ್ಮಶ್ರೀ ವಿಭಾಗದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನು ಕ್ರೀಡಾ ವಿಭಾಗದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ದೇವೇಂದ್ರ ಝಝಾರಿಯಾ ಅವರಿಗೆ ನೀಡಲಾಗಿದೆ. ದೇಶದ ಅತ್ಯಂತ ಯಶಸ್ವಿ ಪ್ಯಾರಾಲಿಂಪಿಕ್ ಅಥ್ಲೀಟ್‌ಗಳಲ್ಲಿ ಒಬ್ಬರಾದ ಝಝಾರಿಯಾ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದರು.
ಕರ್ನಾಟಕದ ಐವರಿಗೆ ಪದ್ಮ ಪ್ರಶಸ್ತಿ:
ಕರ್ನಾಟಕದ ಐವರಿಗೆ ಈ ಬಾರಿ ಪದ್ಮ ಪ್ರಶಸ್ತಿ ನೀಡಲಾಗಿದೆ. ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಕ್ಷೇತ್ರದ ಸೇವೆಗಾಗಿ ಸುಬ್ಬಣ್ಣ ಅಯ್ಯಪ್ಪನ್, ಕಲಾ ಕ್ಷೇತ್ರಕ್ಕೆ ಎಚ್.ಆರ್. ಕೇಶವಮೂರ್ತಿ, ನಾವೀನ್ಯತೆ ಕ್ಷೇತ್ರಕ್ಕೆ ಅಬ್ದುಲ್ ಖಾದರ್ ನಡಕಟ್ಟಿನ್, ಕೃಷಿ ಕ್ಷೇತ್ರದ ಸಾಧನೆಗಾಗಿ ಅಮೈ ಮಹಾಲಿಂಗ ನಾಯ್ಕ ಅವರಿಗೆ ಪದ್ಮ ಪ್ರಶಸ್ತಿ ನೀಡಲಾಗಿದ್ದು, ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: Video: ಪ್ರಧಾನಿ ಮೋದಿ, ರಾಷ್ಟ್ರಪತಿಯೆದುರು ಮೊಣಕಾಲೂರಿ ನಮಸ್ಕರಿಸಿದ 126 ವರ್ಷದ, ಪದ್ಮಶ್ರೀ ಪುರಸ್ಕೃತ ಯೋಗಗುರು
Padma Awards 2022: ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ರಿಂದ ಪ್ರಶಸ್ತಿ ಪ್ರದಾನ