ಆಪರೇಷನ್ ಸಿಂಧೂರ್​ನಲ್ಲಿ 80 ಭಾರತೀಯ ಯುದ್ಧವಿಮಾನಗಳಿಂದ ದಾಳಿ: ಟ್ರೋಲ್ ಆದ ಪಾಕ್ ಪ್ರಧಾನಿ ಹೇಳಿಕೆ

Pakistan PM Shehbaz Sharif gets trolled: ಪಹಲ್ಗಾಂ ಉಗ್ರದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದೊಳಗೆ 9 ಸ್ಥಳಗಳಲ್ಲಿರುವ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದೆ. ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರು ಆಪರೇಷನ್ ಸಿಂಧೂರದಲ್ಲಿ 80 ಭಾರತೀಯ ಯುದ್ಧವಿಮಾನಗಳು ಭಾಗಿಯಾಗಿದ್ದುವು ಎಂದು ಹೇಳಿದ್ದಾರೆ. ಪಾಕ್ ಪ್ರಧಾನಿಗಳು ಸಂಸತ್ತಿಗೆ ನೀಡಿದ ಈ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.

ಆಪರೇಷನ್ ಸಿಂಧೂರ್​ನಲ್ಲಿ 80 ಭಾರತೀಯ ಯುದ್ಧವಿಮಾನಗಳಿಂದ ದಾಳಿ: ಟ್ರೋಲ್ ಆದ ಪಾಕ್ ಪ್ರಧಾನಿ ಹೇಳಿಕೆ
ಯುದ್ಧದ ಭೀತಿ ಎದುರಾಗಿರುವುದರಿಂದ ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಪಾಕಿಸ್ತಾನಕ್ಕೆ ಹಣಕಾಸಿನ ಸಹಾಯ ಮಾಡಲು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ತಮ್ಮ ಅಂತಾರಾಷ್ಟ್ರೀಯ ಪಾಲುದಾರರ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಷೇರುಪೇಟೆಯ ಕುಸಿತ, ಯುದ್ಧೋಪಕರಣಗಳ ಖರೀದಿ, ಆಹಾರ ವಸ್ತುಗಳ ಶೇಖರಣೆಗೆ ಹಣದ ಅಗತ್ಯವಿದೆ ಎಂದು ಪಾಕಿಸ್ತಾನ ಬೇಡಿಕೊಂಡಿದೆ.

Updated on: May 07, 2025 | 7:12 PM

ನವದೆಹಲಿ, ಮೇ 7: ಆಪರೇಷನ್ ಸಿಂದೂರ (Operation Sindoor) ಕೈಗೊಂಡು ಪಾಕಿಸ್ತಾನದ ಪಂಜಾಬ್ ಮತ್ತು ಪಿಒಕೆಯೊಳಗಿರುವ 9 ಉಗ್ರ ಸ್ಥಳಗಳ ಮೇಲೆ ಭಾರತವು ಕಾರ್ಯಾಚರಿಸಿದೆ. ಇದರಲ್ಲಿ ಉಗ್ರರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೆರವಾಗುತ್ತಿರುವ ಸ್ಥಳಗಳು ಈ ದಾಳಿಯಲ್ಲಿ ಧ್ವಂಸಗೊಂಡಿವೆ. ರಾತ್ರಿ 1 ಗಂಟೆಯ ಬಳಿಕ ಆರಂಭವಾಯಿತೆನ್ನಲಾದ ಈ ಕ್ಷಿಪ್ರ ಕಾರ್ಯಾಚರಣೆಯು ಭಾರತದ ಈವರೆಗಿನ ಕಾರ್ಯಾಚರಣೆಗಳಲ್ಲೇ ಅತಿ ವೈಶಿಷ್ಟ್ಯವಾದುದು ಎನ್ನಲಾಗುತ್ತಿದೆ. ಇದೇ ವೇಳೆ, ಭಾರತ ದಾಳಿ ಮಾಡಿದ ಸ್ಥಳದಲ್ಲಿ ಉಗ್ರರು ಇಲ್ಲವೇ ಇಲ್ಲ. ನಾಗರಿಕರನ್ನು ಗುರಿಯಾಗಿಸಿ ಭಾರತ ದಾಳಿ ಮಾಡಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

25 ನಿಮಿಷ ಕಾಲ ಇದ್ದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಭಾರತವು 9 ಉಗ್ರ ಶಿಬಿರಗಳ ಮೇಲೆ 24 ಕ್ಷಿಪಣಿಗಳ ಮಳೆ ಸುರಿಸಿದೆ. ರಾತ್ರಿ 1:05ರಿಂದ 1:30ರವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ 70ಕ್ಕೂ ಹೆಚ್ಚು ಉಗ್ರರು ಸತ್ತಿರುವ ಅಂದಾಜಿದೆ. ಇದೇ ವೇಳೆ, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರು ಆಪರೇಷನ್ ಸಿಂದೂರದಲ್ಲಿ 80 ಭಾರತೀಯ ಯುದ್ಧವಿಮಾನಗಳು ಬಳಕೆ ಆಗಿವೆ ಎಂದು ಹೇಳಿ ಟ್ರೋಲ್ ಆಗುತ್ತಿದ್ದಾರೆ.

ಇದನ್ನೂ ಓದಿ
ಭಾರತದ ದಾಳಿ ಬಗ್ಗೆ ಮಹಿಳಾ ಅಧಿಕಾರಿಗಳಿಂದಲೇ ಸುದ್ದಿಗೋಷ್ಠಿ ನಡೆಸಿದ್ದೇಕೆ?
ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ: #Itoldmodi ವೈರಲ್‌!
ಆಪರೇಷನ್ ಸಿಂಧೂರ್​​: ಪತರಗುಟ್ಟಿದ ಪಾಕ್​ ​ಸಚಿವ ಯುಟರ್ನ್
ಅಮೃತಸರ ವಿಮಾನ ನಿಲ್ದಾಣ, ಕರ್ತಾರ್‌ಪುರ ಕಾರಿಡಾರ್ ಬಂದ್

ಇದನ್ನೂ ಓದಿ: ಆಪರೇಷನ್ ಸಿಂಧೂರ್​​ಗೆ ಪತರಗುಟ್ಟಿದ ಪಾಕ್​: ಬಡಾಯಿ..ಬೊಗಳೆ ಬಿಡ್ತಿದ್ದ ​ರಕ್ಷಣಾ ಸಚಿವ ಯುಟರ್ನ್

ತಮ್ಮ ದೇಶದ ಸಂಸತ್ತಿನಲ್ಲಿ ಮಾತನಾಡುತ್ತಾ ಶಹಬಾಜ್ ಷರೀಫ್ ಈ ಮಾತುಗಳನ್ನು ಆಡಿದ್ದಾರೆ. ಭಾರತದ ನೆಲದಿಂದ ಕ್ಷಿಪಣಿ ಮೂಲಕ 250 ಕಿಮೀ ದೂರದವರೆಗೂ ಇರುವ ಸ್ಥಳಗಳ ಮೇಲೆ ಭಾರತ ಸ್ಟ್ರೈಕ್ ಮಾಡಿದೆ. ಬಾಲಾಕೋಟ್ ಏರ್​​ಸ್ಟ್ರೈಕ್​​​ನಂತೆ ಇಲ್ಲಿ ಯುದ್ಧವಿಮಾನಗಳನ್ನು ಬಳಸಲಾಗಿಲ್ಲ. ಆದರೆ, ಪಾಕ್ ಪ್ರಧಾನಿಗಳು 80 ಭಾರತೀಯ ಯುದ್ಧ ವಿಮಾನಗಳಿಂದ ದಾಳಿ ಆಗಿದೆ ಎಂದು ಹೇಳಿದ್ದು ಅಚ್ಚರಿ.

ಮೂರು ರಫೇಲ್ ಯುದ್ಧವಿಮಾನ ಸೇರಿದಂತೆ ಐದು ಭಾರತೀಯ ಜೆಟ್​​​ಗಳನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ ಎನ್ನುವಂತಹ ಸುದ್ದಿಯೂ ಪಾಕ್ ಮಾಧ್ಯಮಗಳಲ್ಲಿ ಪ್ರಕಟವಾಗಿದೆಯಂತೆ.

ಇದನ್ನೂ ಓದಿ: ಪಾಕಿಸ್ತಾನದೊಳಗೆ ಅತಿದೂರ ಹೋಗಿ ಹೊಡೆತ ಕೊಟ್ಟಿದ್ದು ಇದೇ ಮೊದಲು; ಹಿಂದೆಲ್ಲಾ ಭಾರತ ಒಳನುಗ್ಗಿದ್ದು ಎಷ್ಟು ದೂರ?

ಶಹಬಾಜ್ ಷರೀಫ್ ಅವರನ್ನು ಆನ್​​ಲೈನ್​​​ನಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇವರನ್ನು ಜೋಕರ್ ಎಂದು ಕೆಲವರು ಬಣ್ಣಿಸಿದ್ದಾರೆ. ‘ರಾತ್ರಿ 80 ವಿಮಾನಗಳು ಒಳಗೆ ಬಂದಿವೆ. ಶಹಬಾಜ್ ಸಾಹೇಬರಿಗೆ ಬೆಳಗ್ಗೆ ಗೊತ್ತಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಸುಳಿವೇ ಸಿಗದಂತಿದೆ’ ಎಂದು ಎಕ್ಸ್​​​ನಲ್ಲಿ ಒಬ್ಬರು ಟ್ರೋಲ್ ಮಾಡಿದ್ದಾರೆ.

80 ಇತ್ತು, ಪಾಕಿಸ್ತಾನ 200 ಅನ್ನು ಹೊಡೆದು ಹಾಕಿದೆ ಎಂದು ಮತ್ತೊಬ್ಬರು ವ್ಯಂಗ್ಯ ಮಾಡಿದ್ದಾರೆ. 500 ಚಂದ್ರಯಾನ ಮತ್ತು 1,000 ಯುಎಫ್​​ಒಗಳೂ ಕೂಡ ಈ ದಾಳಿಯ ಭಾಗವಾಗಿದ್ದವೆಂದು ಈ ಮನುಷ್ಯ ಹೇಳಬಹುದು ಎಂದು ಮಗದೊಬ್ಬರು ಕಿಚಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:34 pm, Wed, 7 May 25