ದೆಹಲಿ: ದೆಹಲಿಯ ಲಕ್ಷ್ಮೀನಗರದಲ್ಲಿ ಪಾಕಿಸ್ತಾನ ಮೂಲದ ಉಗ್ರನನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಪಾಕಿಸ್ತಾನದ ಪಂಜಾಬ್ ನಿವಾಸಿಯಾದ ಮೊಹಮ್ಮದ್ ಆಶ್ರಫ್ ಎಂಬ ಉಗ್ರ ನಕಲಿ ಐಡಿ ಕಾರ್ಡ್ ಇಟ್ಟುಕೊಂಡು ದೆಹಲಿಯ ತುಂಬ ಓಡಾಡುತ್ತಿದ್ದ. ಆತನನ್ನು ವಶಕ್ಕೆ ಪಡೆದಿರುವ ದೆಹಲಿ ಪೊಲೀಸ್ ವಿಶೇಷ ತಂಡ ಆತನನ್ನು ವಿಚಾರಣೆಗೆ ಒಳಪಡಿಸಿದೆ. ಹಾಗೇ, ಆ ಭಯೋತ್ಪಾದಕನಿಂದ ಎಕೆ -47 ಗನ್ ಮತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಡುರಾತ್ರಿ ದೆಹಲಿಯಲ್ಲಿ ಆ ಉಗ್ರ ನಡೆಸಬೇಕಿದ್ದ ದಾಳಿ ಇದರಿಂದ ತಪ್ಪಿದಂತಾಗಿದೆ.
ಬಂಧಿತ ಪಾಕಿಸ್ತಾನದ ಭಯೋತ್ಪಾದಕನ ಹೆಸರು ಮೊಹಮ್ಮದ್ ಅಶ್ರಫ್ ಅಲಿಯಾಸ್ ಅಲಿ. ಭಯೋತ್ಪಾದಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿ. ಮೊಹಮ್ಮದ್ ಅಶ್ರಫ್ ದೆಹಲಿಯ ಶಾಸ್ತ್ರಿ ನಗರದಲ್ಲಿ ಅಲಿ ಅಹ್ಮದ್ ನೂರಿ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದ. ಈತನನ್ನು ಲಕ್ಷ್ಮಿ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ನಕಲಿ ದಾಖಲೆಗಳ ಸಹಾಯದಿಂದ ಭಾರತದ ಗುರುತಿನ ಚೀಟಿಯನ್ನೂ ಪಡೆದುಕೊಂಡಿದ್ದ.
Delhi Police Special Cell arrests a terrorist of Pakistani nationality from Ramesh Park, Laxmi Nagar. He was living with a fake ID of an Indian national. One AK-47 assault rifle with one extra magazine and 60 rounds, one hand grenade, 2 sophisticated pistols with 50 rounds seized
— ANI (@ANI) October 12, 2021
ಈತನ ಬಂಧನದ ಬಳಿಕ ದೆಹಲಿ ಪೊಲೀಸರು ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚು ಅಲರ್ಟ್ ಆಗಿದ್ದು, ದೆಹಲಿಯ ಮಾರುಕಟ್ಟೆಗಳು ಮತ್ತು ಮಾಲ್‌ಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಅವರು ಭಯೋತ್ಪಾದನಾ ವಿರೋಧಿ ಕ್ರಮಗಳಿಗೆ ಒತ್ತು ನೀಡುವುದು, ಎಲ್ಲ ಕಡೆ ಪೊಲೀಸ್ ಗಸ್ತು ಹೆಚ್ಚಿಸುವುದು ಮತ್ತು ರಾಷ್ಟ್ರ ರಾಜಧಾನಿಯಾದ್ಯಂತ ರಾತ್ರಿ ಗಸ್ತು ತೀವ್ರಗೊಳಿಸುವಂತೆ ಡಿಸಿಪಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
Delhi Police Special Cell arrested Mohd Asraf, a Pakistani terrorist, from Ramesh Park, Laxmi Nagar. One AK-47 assault rifle with one extra magazine and 60 rounds and other weapons seized from his possession. pic.twitter.com/0hHxP4H4Uu
— ANI (@ANI) October 12, 2021
ಇನ್ನು, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರೆದಿದ್ದು, ಶೋಪಿಯಾನ್ ನಲ್ಲಿ ಇಂದು ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಮತ್ತೆ ಎನ್ಕೌಂಟರ್ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆ ಸಿಬ್ಬಂದಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ನ ಫಿರಿಪೋರಾ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಆ ಪ್ರದೇಶವನ್ನು ಸುತ್ತುವರೆದಿದ್ದಾರೆ. ನಿನ್ನೆ ತಡರಾತ್ರಿ ಇದೇ ಶೋಪಿಯಾನ್ ಜಿಲ್ಲೆಯ ಇಮಾಮ್ಸಾಹಿಬ್ ಪ್ರದೇಶದಲ್ಲಿ ಮತ್ತೊಂದು ಗುಂಡಿನ ಚಕಮಕಿ ನಡೆದಿತ್ತು, ಇದರಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಇಂದು ಕಳೆದ 36 ಗಂಟೆಗಳಲ್ಲಿ 5ನೇ ಎನ್ಕೌಂಟರ್ ಕಾರ್ಯಾಚರಣೆ ನಡೆಸಲಾಗಿದೆ.
ಇದನ್ನೂ ಓದಿ: Terrorist Encounter: ಜಮ್ಮು ಕಾಶ್ಮೀರದಲ್ಲಿ ಪೊಲೀಸರಿಂದ ಎಲ್ಇಟಿ ಉಗ್ರನ ಎನ್ಕೌಂಟರ್
ಕಾಶ್ಮೀರದಲ್ಲಿ ಮುಂಜಾನೆ ನಡೆದ ಎನ್ಕೌಂಟರ್; ಇಬ್ಬರು ಉಗ್ರರ ಹತ್ಯೆ, ಮೂವರು ಯೋಧರಿಗೆ ಗಾಯ