ದೆಹಲಿ:ಪುಲಿಟ್ಜೆರ್ ವಿಜೇತ ತನಿಖೆಯಾದ ಪನಾಮ ಪೇಪರ್ಸ್ ಶ್ರೀಮಂತರು ಮತ್ತು ಪ್ರಭಾವಿ ವ್ಯಕ್ತಿಗಳು ತಮ್ಮ ಹಣವನ್ನು ಜಾಗತಿಕ ತೆರಿಗೆ ಸ್ವರ್ಗಗಳು ಎನ್ನಲಾಗುವ ಪ್ರದೇಶಗಳ ಒಳಗೆ ಮತ್ತು ಹೊರಗೆ ಹೇಗೆ ಸಾಗಿಸಿದರು ಎಂಬುದನ್ನು ಬಹಿರಂಗಪಡಿಸಿತ್ತು. ಇದು ಭಾರತೀಯ ತೆರಿಗೆ ಸಂಸ್ಥೆಗಳಲ್ಲಿ 20,000 ಕೋಟಿ ರೂ.ಗಳ ಮೌಲ್ಯದ ಅಘೋಷಿತ ಆಸ್ತಿಗಳಿಗೆ ಕಾರಣವಾಗಿದೆ. ಬಹುಶಃ ಇಂಥಾ ಪ್ರಕರಣಗಳಲ್ಲಿ ಲಭಿಸಿದ ಇದು ಅತ್ಯಧಿಕ ಮೊತ್ತ ಇದಾಗಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಸಲ್ಲಿಸಿದ ಮಾಹಿತಿ ಹಕ್ಕು (CBDT) ಕೋರಿಕೆಗಳಿಗೆ ಉತ್ತರಿಸಿದ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ), 2021 ರ ಜೂನ್ ವರೆಗೆ, ತನಿಖೆಯ ನಂತರ ಭಾರತ ಮತ್ತು ವಿದೇಶಗಳಲ್ಲಿ ಒಟ್ಟು 20,078 ಕೋಟಿ ರೂ.ಗಳ ಅಘೋಷಿತ ಆಸ್ತಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಪನಾಮ ಪೇಪರ್ಸ್ ತನಿಖೆಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಜಾಗತಿಕ ಪಾಲುದಾರರಾಗಿದ್ದು, ಇದು ಪನಾಮಿಯನ್ ಕಾನೂನು ಸಂಸ್ಥೆಯಾದ ಮೊಸಾಕ್ ಫೋನ್‌ಸೆಕಾದಿಂದ ಪಡೆದ ಸುಮಾರು 1.15 ಕೋಟಿ ಮಿಲಿಯನ್ ರಹಸ್ಯ ದಾಖಲೆಗಳಿಂದ ಪಡೆದ ಸಾಗರೋತ್ತರ ಹಿಡುವಳಿ ಮೇಲೆ ಕೇಂದ್ರೀಕರಿಸಿದೆ.
ತನಿಖೆಯಲ್ಲಿ ಕಂಡುಹಿಡಿದ ವಿಷಯಗಳನ್ನು ಇಂಟರ್ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ (ICIJ) ಮತ್ತು 100 ಮಾಧ್ಯಮ ಪಾಲುದಾರರನ್ನು ಒಳಗೊಂಡಿದ್ದು, ಭಾರತದಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್ 2016 ರ ಏಪ್ರಿಲ್‌ನಲ್ಲಿ ಪ್ರಕಟಿಸಿತು.
ಆರ್‌ಟಿಐ ಮೂಲಕ ಸಿಬಿಡಿಟಿ ಈ ಹಿಂದೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ಇತ್ತೀಚಿನ ಸಂಖ್ಯೆ: 2019 ರ ಜೂನ್‌ನಲ್ಲಿ 1,564 ಕೋಟಿ ರೂ., ಮತ್ತು 2018 ರ ಏಪ್ರಿಲ್‌ನಲ್ಲಿ 1,088 ಕೋಟಿ ರೂ.ಆಗಿದೆ.
ಸಿಬಿಡಿಟಿ “ತೆಗೆದುಕೊಂಡ ಕ್ರಮ” ಗಾಗಿ ಇತ್ತೀಚಿನ ಡೇಟಾವನ್ನು ಸಹ ಸಲ್ಲಿಸಿದೆ. ಕಳೆದ ತಿಂಗಳವರೆಗೆ, ಕಪ್ಪು ಹಣ ಕಾಯ್ದೆ ಮತ್ತು ಆದಾಯ ತೆರಿಗೆ ಕಾಯ್ದೆಯಡಿ ವಿವಿಧ ನ್ಯಾಯಾಲಯಗಳಲ್ಲಿ 46 ಕಾನೂನು ಕ್ರಮಗಳನ್ನು ದಾಖಲಿಸಲಾಗಿದೆ. 83 ಪ್ರಕರಣಗಳಲ್ಲಿ ಶೋಧ ಮತ್ತು ಸಮೀಕ್ಷೆಗಳನ್ನು ನಡೆಸಲಾಗಿದೆ.
ವಿಶೇಷವೆಂದರೆ, ಈ ಪ್ರಕರಣಗಳಿಗೆ ತೆರಿಗೆ ರಿಯಲೈಸೇಷನ್ (tax realisation) ಪ್ರಾರಂಭವಾಗಿದೆ ಎಂದು ಸಿಬಿಡಿಟಿ ಬಹಿರಂಗಪಡಿಸಿದೆ. ಆರ್‌ಬಿಐ ಉತ್ತರವು ಸಿಬಿಡಿಟಿ 142 ಕೋಟಿ ರೂ.ಗಳ ತೆರಿಗೆಯನ್ನು ವಸೂಲಿ ಮಾಡಿದೆ ಎಂದು ತೋರಿಸುತ್ತದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ನ್ಯಾಯಾಲಯಗಳಲ್ಲಿ ಪ್ರಕರಣಗಳು ಪ್ರಗತಿಯಲ್ಲಿರುವಾಗ ಈ ಅಂಕಿ ಅಂಶವು ಏರಿಕೆಯಾಗುವ ನಿರೀಕ್ಷೆಯಿದೆ.
ಜಾಗತಿಕವಾಗಿ ಪನಾಮ ಪೇಪರ್ಸ್ ಐದು ವರ್ಷಗಳ ಗಡಿಯನ್ನು ದಾಟಿದ ನಂತರ, ಐಸಿಐಜೆ ಲೆಕ್ಕಾಚಾರ ಪ್ರಕಾರ ಒಟ್ಟಾರೆಯಾಗಿ, ವಿಶ್ವದಾದ್ಯಂತ ತೆರಿಗೆ ಅಧಿಕಾರಿಗಳು ತೆರಿಗೆ ಮತ್ತು ದಂಡವನ್ನು 136 ಕೋಟಿ ಡಾಲರ್ಗಿಂತ ಹೆಚ್ಚಿನ ಮೊತ್ತವನ್ನು ಮರುಪಡೆಯಲಾಗಿದೆ. ಯುಕೆ, ಜರ್ಮನಿ, ಸ್ಪೇನ್, ಫ್ರಾನ್ಸ್ ಮತ್ತು ಆಸ್ಟ್ರಿಯಾದಿಂದ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ ಎಂದು ಅಂಕಿ ಅಂಶಗಳು ತೋರಿಸಿವೆ.
ಏನಿದು ಪನಾಮ ಪೇಪರ್ಸ್?
2016ರಲ್ಲಿ ಅನಾವರಣಗೊಂಡ ‘ಪನಾಮ ಪೇಪರ್ಸ್’ ಜಗತ್ತಿನ ತನಿಖಾ ಪತ್ರಿಕೋದ್ಯಮದ ಇತಿಹಾಸದಲ್ಲೇ ಅತಿ ಮುಖ್ಯವಾದ ‘ತನಿಖಾ ಪತ್ರಿಕೋದ್ಯಮ’ ಎಂದು ಹೇಳಲಾಗುತ್ತದೆ. ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಎಂಬ ಅಮೆರಿಕ ಮೂಲದ ಸರ್ಕಾರೇತರ ಸಂಘಟನೆಯೊಂದು ‘ಪನಾಮ ಪೇಪರ್’ ಹೆಸರಿನಲ್ಲಿ ದಾಖಲೆಗಳನ್ನು 2015ರ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಿತ್ತು.
ಪನಾಮ ಪೇಪರ್ಸ್ ಹಲವಾರು ರಾಷ್ಟ್ರಗಳ ಮುಖ್ಯಸ್ಥರು, 70 ದೇಶಗಳಲ್ಲಿ 128 ಉನ್ನತ ರಾಜಕಾರಣಿಗಳು ಮತ್ತು ವಿಶ್ವದಾದ್ಯಂತ ನೂರಾರು ಶತಕೋಟ್ಯಾಧಿಪತಿಗಳು ಪನಾಮ ಮೂಲದ ಸಂಘಟನೆಯ ಮೂಲಕ ಅಕ್ರಮ ಹೂಡಿಕೆ ಮಾಡಿದ್ದಾರೆ ಎಂಬ ಬಹಿರಂಗಪಡಿಸುವಿಕೆಯ ಸರಣಿಯಾಗಿದೆ. 50 ದೇಶಗಳ 400 ಪತ್ರಕರ್ತರು ಒಟ್ಟುಗೂಡಿ, ಅತ್ಯಂತ ನಿಗೂಢವಾಗಿ ಈ ಅಧ್ಯಯನವನ್ನು ನಡೆಸಿದ್ದರು. ಇದಕ್ಕೆ ಭಾರತದಿಂದ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಕರ್ತರು ಜೊತೆಗೂಡಿದರು. ಎಂಟು ತಿಂಗಳ ಕಾಲ ರಹಸ್ಯವಾಗಿ ಹಗಲು ರಾತ್ರಿ ನಡೆದ ಈ ಅಧ್ಯಯನ ಮತ್ತು ತನಿಖೆ 2016ರ ಏಪ್ರಿಲ್‌ನಲ್ಲಿ ಮುಗಿದು ಆಯಾ ದೇಶಗಳಲ್ಲಿ ಏಕಕಾಲದಲ್ಲಿ ಏಪ್ರಿಲ್ 4ರ ಸಂಜೆ 8ಕ್ಕೆ ಬಯಲು ಮಾಡಲಾಗಿತ್ತು.
ಇದನ್ನೂ ಓದಿ: CoWIN Global Conclave ಕೊವಿನ್ ಜಾಗತಿಕ ಸಮಾವೇಶವನ್ನುದ್ದೇಶಿಸಿ ಇಂದು ಸಂಜೆ 3ಗಂಟೆಗೆ ಮೋದಿ ಭಾಷಣ
(Panama Papers Replying to Right To Information CBDT says undeclared assets totalling Rs 20,078 crore have been identified)