CoWIN Global Conclave ಕೊವಿನ್ ಜಾಗತಿಕ ಸಮಾವೇಶವನ್ನುದ್ದೇಶಿಸಿ ಇಂದು ಸಂಜೆ 3ಗಂಟೆಗೆ ಮೋದಿ ಭಾಷಣ

PM Narendra Modi: ಕೊವಿನ್ ಪ್ಲಾಟ್‌ಫಾರ್ಮ್ ಮೂಲಕ ಕೊವಿಡ್ ವಿರುದ್ಧ ಹೋರಾಡಲು ಯುನಿವರ್ಸಲ್ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ ಭಾರತದ ಅನುಭವವನ್ನು ಹಂಚಿಕೊಳ್ಳಲು ಈ ಸಮಾವೇಶ ಗುರಿ ಹೊಂದಿದೆ ಎಂದು ಅದು ಹೇಳಿದೆ.

CoWIN Global Conclave ಕೊವಿನ್ ಜಾಗತಿಕ ಸಮಾವೇಶವನ್ನುದ್ದೇಶಿಸಿ ಇಂದು ಸಂಜೆ 3ಗಂಟೆಗೆ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 05, 2021 | 11:09 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಕೊವಿನ್ ಜಾಗತಿಕ ಸಮಾವೇಶವನ್ನುದ್ದೇಶಿಸಿ (CoWIN Global Conclave) ಮಾತನಾಡಲಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ತಿಳಿಸಿದೆ. ಎನ್‌ಎಚ್‌ಎ ಪ್ರಕಾರ, ವರ್ಚುವಲ್ ಮೀಟ್ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ. ಇದರಲ್ಲಿ ವಿಶ್ವದಾದ್ಯಂತ ದೇಶಗಳನ್ನು ಪ್ರತಿನಿಧಿಸುವ ಆರೋಗ್ಯ ಮತ್ತು ತಂತ್ರಜ್ಞಾನ ತಜ್ಞರು ಭಾಗವಹಿಸಲಿದ್ದಾರೆ.

“ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು #CoWINGlobalConclave ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಲು ನಾವು ಉತ್ಸುಕರಾಗಿದ್ದೇವೆ. ಕೊವಿಡ್ ಅನ್ನು ಎದುರಿಸಲು ಭಾರತವು #COWIN ಅನ್ನು ಡಿಜಿಟಲ್ ಸಾರ್ವಜನಿಕ ಒಳಿತಿಗಾಗಿ ಜಗತ್ತಿಗೆ ನೀಡುತ್ತದೆ. ಜುಲೈ 5, ಸಂಜೆ 3ಗಂಟೆಗೆ ಕೊವಿನ್ ಜಾಗತಿಕ ಸಮಾವೇಶದಲ್ಲಿ ಭಾಗವಹಿಸಿ ಎಂದು ಎನ್ಎಚ್ಎ ಭಾನುವಾರ ಟ್ವೀಟ್ ಮಾಡಿದೆ.

ಕೊವಿನ್ ಪ್ಲಾಟ್‌ಫಾರ್ಮ್ ಮೂಲಕ ಕೊವಿಡ್ ವಿರುದ್ಧ ಹೋರಾಡಲು ಯುನಿವರ್ಸಲ್ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ ಭಾರತದ ಅನುಭವವನ್ನು ಹಂಚಿಕೊಳ್ಳಲು ಈ ಸಮಾವೇಶ ಗುರಿ ಹೊಂದಿದೆ ಎಂದು ಅದು ಹೇಳಿದೆ.

ಇತ್ತೀಚೆಗೆ,ಅನೇಕ ದೇಶಗಳು ‘ಭಾರತದ ವ್ಯಾಕ್ಸಿನೇಷನ್ ಡ್ರೈವ್‌ನ ಟೆಕ್ ಬೆನ್ನೆಲುಬು’ ಯನ್ನು ಬಳಸಲು ಆಸಕ್ತಿ ತೋರಿಸಿವೆ ಎಂದು ಎನ್‌ಎಚ್‌ಎ ವೆಬ್‌ಸೈಟ್ ತಿಳಿಸಿದೆ. ಕೊವಿನ್ ಜೊತೆಗೆ ಕೊವಿಡ್ ಅನ್ನು ಗೆಲ್ಲಲು ವಿಶ್ವದೊಂದಿಗೆ ಕೈಜೋಡಿಸಲು ಭಾರತ ಉತ್ಸುಕವಾಗಿದೆ.

ಕೊವಿನ್ ಅಪ್ಲಿಕೇಶನ್ ಬಳಸಲು ಸುಮಾರು ಆಸಕ್ತಿ ವ್ಯಕ್ತಪಡಿಸಿವೆ 50 ರಾಷ್ಟ್ರಗಳು ಕೆನಡಾ, ಮೆಕ್ಸಿಕೊ, ನೈಜೀರಿಯಾ, ಪನಾಮ ಮತ್ತು ಉಗಾಂಡಾ ಸೇರಿದಂತೆ ಸುಮಾರು 50 ದೇಶಗಳು ಆಯಾ ದೇಶಗಳಲ್ಲಿ ಇನಾಕ್ಯುಲೇಷನ್ ಡ್ರೈವ್‌ಗಾಗಿ ಕೊವಿನ್ ಫ್ಲಾಟ್​​ಫಾರ್ಮ್ ಅನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿಸಿವೆ.

ಮೂಲಗಳ ಪ್ರಕಾರ, ಇತರ ದೇಶಗಳಾದ ವಿಯೆಟ್ನಾಂ, ಇರಾಕ್, ಡೊಮಿನಿಕನ್ ರಿಪಬ್ಲಿಕ್, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಸಹ ತಮ್ಮದೇ ದೇಶಗಳಲ್ಲಿ ತಮ್ಮದೇ ಆದ ಕೊವಿಡ್ ಕಾರ್ಯಕ್ರಮಗಳನ್ನು ನಡೆಸಲು ಕೊವಿನ್ ಪ್ಲಾಟ್‌ಫಾರ್ಮ್ ಬಗ್ಗೆ ತಿಳಿಯಲು ಆಸಕ್ತಿ ವ್ಯಕ್ತಪಡಿಸಿವೆ.

ಕೊವಿನ್ ಫ್ಲಾಟ್​​ಫಾರ್ಮ್ ಅನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ದೇಶಾದ್ಯಂತ ಕೊವಿಡ್ ವ್ಯಾಕ್ಸಿನೇಷನ್ ಅನ್ನು ಕಾರ್ಯತಂತ್ರಗೊಳಿಸಲು, ಕಾರ್ಯಗತಗೊಳಿಸಲು, ಮೇಲ್ವಿಚಾರಣೆ ಮಾಡಲು ಮತ್ತು ಮೌಲ್ಯಮಾಪನ ಮಾಡಲಿರುವ ಪ್ರಧಾನ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: Co-Winನ್ನು ಇತರ ದೇಶಗಳೊಂದಿಗೆ ಹಂಚಲು ಭಾರತ ಸಿದ್ಧ: ಈ ಪೋರ್ಟಲ್‌ನಲ್ಲಿ ನೀವು ಏನೇನು ಮಾಡಬಹುದು?

(PM Narendra Modi will share his thoughts at the CoWIN Global Conclave today)