Parivartan Yatra: ಮಮತಾ ಬ್ಯಾನರ್ಜಿ ರೈತರಿಗೆ ಅನ್ಯಾಯ ಎಸಗಿದ್ದಾರೆ; ಪಶ್ಚಿಮ ಬಂಗಾಳದಲ್ಲಿ ಜೆ.ಪಿ. ನಡ್ಡಾ ವಾಗ್ದಾಳಿ

| Updated By: ganapathi bhat

Updated on: Apr 06, 2022 | 8:13 PM

ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳಕ್ಕೆ ಎಲ್ಲವನ್ನೂ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಮಮತಾ ಬ್ಯಾನರ್ಜಿ ಎಲ್ಲಕ್ಕೂ ಇಲ್ಲ ಎಂದಿದ್ದಾರೆ ಎಂದು ಜೆ.ಪಿ. ನಡ್ಡಾ ಟಿಎಂಸಿ ವಿರುದ್ಧ ಗುಡುಗಿದರು.

Parivartan Yatra: ಮಮತಾ ಬ್ಯಾನರ್ಜಿ ರೈತರಿಗೆ ಅನ್ಯಾಯ ಎಸಗಿದ್ದಾರೆ; ಪಶ್ಚಿಮ ಬಂಗಾಳದಲ್ಲಿ ಜೆ.ಪಿ. ನಡ್ಡಾ ವಾಗ್ದಾಳಿ
ಜೆ.ಪಿ. ನಡ್ಡಾ
Follow us on

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಆಡಳಿತದಲ್ಲಿ ವಿಫಲರಾಗಿದ್ದಾರೆ. 10 ವರ್ಷಗಳ ಹಿಂದೆ ತಾಯಿ, ಮಣ್ಣು ಮತ್ತು ಮನುಷ್ಯರ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದ ಅವರು, ತಾಯಿಯನ್ನು ಲೂಟಿ ಮಾಡಿದ್ದಾರೆ. ಮಣ್ಣಿಗೆ ಅಗೌರವ ತೋರಿದ್ದಾರೆ ಮತ್ತು ಮನುಷ್ಯರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರು. 

ಶ್ರೀ ಶ್ರೀ ಗೌರಂಗ ಮಹಾಪ್ರಭು ಜನ್ಮಸ್ಥಾನ ಆಶ್ರಮ, ನವದ್ವಿಪ್​ನಲ್ಲಿ ನಡ್ಡಾ ಪೂಜೆ ಸಲ್ಲಿಸಿದರು. ಬಳಿಕ, ಬಿಜೆಪಿ ‘ಪರಿವರ್ತನಾ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದರು. ಪಶ್ಚಿಮ ಬಂಗಾಳದ ಜನತೆಯನ್ನು ಈ ‘ಪರಿವರ್ತನಾ ಯಾತ್ರೆ’ಯ ಮೂಲಕ ಜಾಗೃತಗೊಳಿಸುವುದು ಬಿಜೆಪಿ ಉದ್ದೇಶವಾಗಿದೆ. ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅತ್ಯುತ್ಸಾಹದ ಭಾಗವಹಿಸುವಿಕೆ, ಪಶ್ಚಿಮ ಬಂಗಾಳದ ರಾಜಕೀಯ ಅಲೆ ಬದಲಾಗುತ್ತಿರುವುದನ್ನು ಸೂಚಿಸುತ್ತಿದೆ ಎಂದು ನಡ್ಡಾ ಹೇಳಿದರು.

ಮಮತಾ ಬ್ಯಾನರ್ಜಿ ರೈತರಿಗೆ ಅನ್ಯಾಯ ಎಸಗಿದ್ದಾರೆ. ದೀದೀ ತನ್ನ ಹಠ, ಅಹಂಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು (PM Kisan Samman Nidhi ) ಕೂಡ ಪಶ್ಚಿಮ ಬಂಗಾಳದಲ್ಲಿ ಅನುಷ್ಠಾನಗೊಳಿಸಿಲ್ಲ. ಇದರಿಂದಾಗಿ 70 ಲಕ್ಷ ರೈತರು ಈ ಯೋಜನೆಯಿಂದ ವಂಚಿತರಾಗಿದ್ದರು ಎಂದು ಜೆ.ಪಿ. ನಡ್ಡಾ ಮಾಲ್ಡಾದಲ್ಲಿ ಆರೋಪಿಸಿದರು.

25 ಲಕ್ಷ ರೈತರು ಕೇಂದ್ರಕ್ಕೆ ಅವಹಾಲು ಸಲ್ಲಿಸಿದ ನಂತರ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ನಾನು ಕೂಡ ಅಳವಡಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆ ಹೀಗೆ ಪಶ್ಚಾತಾಪ ಪಟ್ಟು ಪ್ರಯೋಜನವಿಲ್ಲ ಎಂದು ನಡ್ಡಾ ಹೇಳಿದರು.

ಬಿಜೆಪಿ ಪರಿವರ್ತನಾ ಯಾತ್ರೆಗೂ ಮೊದಲು ಮಾಲ್ಡಾದಲ್ಲಿ ನಡೆದ ಪಕ್ಷದ ರೋಡ್ ಶೋನಲ್ಲಿ ಭಾಗವಹಿಸಿದ ಜೆ.ಪಿ. ನಡ್ಡಾ, ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳಕ್ಕೆ ಎಲ್ಲವನ್ನೂ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಮಮತಾ ಬ್ಯಾನರ್ಜಿ ಎಲ್ಲಕ್ಕೂ ಇಲ್ಲ ಎಂದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಇಂಡಿಯಾ ಟುಡೆ ಸಮೀಕ್ಷೆ: ಈಗಲೇ ಲೋಕಸಭಾ ಚುನಾವಣೆ ನಡೆದರೆ ಯಾರು ಗೆಲ್ಲುತ್ತಾರೆ?

ಬಿಜೆಪಿ ಪರಿವರ್ತನಾ ಯಾತ್ರೆಗೆ ಜೆ.ಪಿ. ನಡ್ಡಾ ಚಾಲನೆ

ಮಾಲ್ಡಾದಲ್ಲಿ ಜೆ.ಪಿ. ನಡ್ಡಾ ರೋಡ್ ಶೋ

ಇದಕ್ಕೂ ಮೊದಲು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಶ್ ಮಾಲ್ಡಾದಲ್ಲಿ ರೈತರ ಜೊತೆಗೆ ಭೋಜನ ಸ್ವೀಕರಿಸಿದರು.

ನಾಳೆ ಅಸ್ಸಾಂ, ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಒಂದು ದಿನದ ಪಶ್ಚಿಮ ಬಂಗಾಳ ಪ್ರವಾಸದ ಬಳಿಕ, ನಾಳೆ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಿಗೆ ಭೇಟಿ ಕೈಗೊಳ್ಳಲಿದ್ದಾರೆ. ಅಸ್ಸಾಂನಲ್ಲಿ ಎರಡು ಆಸ್ಪತ್ರೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪಶ್ಚಿಮ ಬಂಗಾಳದ ಹಲ್ದಿಯಾದಲ್ಲಿ ಮೂಲಸೌಕರ್ಯ ಯೋಜನೆಯನ್ನು ದೇಶಕ್ಕೆ ಅರ್ಪಣೆ ಮಾಡಲಿದ್ದಾರೆ.

ಜೊತೆಗೆ, ಪೂರ್ವ ಭಾರತದ ಅಭಿವೃದ್ಧಿಗೆ ಸಂಬಂಧಿಸಿದ ’ಪೂರ್ವೋದಯ’ ಯೋಜನೆಯ ಹಲವು ಕಾರ್ಯಗಳಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ. ಮೋದಿ ಜೊತೆ, ಪಶ್ಚಿಮ ಬಂಗಾಳದ ರಾಜ್ಯಪಾಲ, ಮುಖ್ಯಮಂತ್ರಿ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?

ಮಮತಾದೀ, ಯಾಕೆ ಅಷ್ಟು ಹೆದರಿದ್ದೀರಿ? ಏನಾಯಿತು?: ದೀದಿಗೆ ಕುಟುಕಿದ ಜೆ.ಪಿ. ನಡ್ಡಾ

Published On - 7:36 pm, Sat, 6 February 21