ಪ್ರತಿಪಕ್ಷಗಳ ನಿಜವಾದ ಉದ್ದೇಶ ಕೇವಲ ರಾಜಕೀಯ ಬೇಳೆ ಬೇಯಿಸುವುದೇ ಹೊರತು ಸತ್ಯ ಅರಿಯುವುದಲ್ಲ: ಧರ್ಮೇಂದ್ರ ಪ್ರಧಾನ್

|

Updated on: Jul 24, 2023 | 7:49 PM

ಲೋಕಸಭೆಯ ಸ್ಪೀಕರ್ ಅವರೇ ಪದೇ ಪದೇ ಚರ್ಚೆಯನ್ನು ಸುಗಮವಾಗಿ ನಡೆಸುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದರು. ಪ್ರತಿಪಕ್ಷಗಳ ಅಜೆಂಡಾ ಕೇವಲ ರಾಜಕೀಯ. ಅವರಿಗೆ ರಾಷ್ಟ್ರೀಯ ನೀತಿಯ ವಿಷಯ ಅರ್ಥವಾಗುವುದಿಲ್ಲ.ಟಿವಿ ಮತ್ತು ಟ್ವಿಟರ್‌ನಲ್ಲಿ ಚರ್ಚೆಗೆ ಕರೆ ನೀಡುವ ಪ್ರತಿಪಕ್ಷಗಳು, ಸದನದಲ್ಲಿ ಚರ್ಚೆಯ ಪ್ರತೀ ಪ್ರಯತ್ನವನ್ನು ವಿಫಲಗೊಳಿಸಲು ನಿರ್ಧರಿಸುತ್ತದೆ.

ಪ್ರತಿಪಕ್ಷಗಳ ನಿಜವಾದ ಉದ್ದೇಶ ಕೇವಲ ರಾಜಕೀಯ ಬೇಳೆ ಬೇಯಿಸುವುದೇ ಹೊರತು ಸತ್ಯ ಅರಿಯುವುದಲ್ಲ: ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
Follow us on

ದೆಹಲಿ ಜುಲೈ 24:  ಗೃಹ ಸಚಿವ ಅಮಿತ್ ಶಾ (Amit Shah) ಅವರು ಪ್ರತಿಪಕ್ಷಗಳು ಎತ್ತಿರುವ ಚರ್ಚೆಯ ಬೇಡಿಕೆಯನ್ನು ಬಹಳ ಸೌಜನ್ಯದಿಂದ ಒಪ್ಪಿಕೊಂಡರು. ಲೋಕಸಭೆಯ ಸ್ಪೀಕರ್ ಅವರೇ ಪದೇ ಪದೇ ಚರ್ಚೆಯನ್ನು ಸುಗಮವಾಗಿ ನಡೆಸುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದರು. ಪ್ರತಿಪಕ್ಷಗಳ ಅಜೆಂಡಾ ಕೇವಲ ರಾಜಕೀಯ. ಅವರಿಗೆ ರಾಷ್ಟ್ರೀಯ ನೀತಿಯ ವಿಷಯ ಅರ್ಥವಾಗುವುದಿಲ್ಲ.ಟಿವಿ ಮತ್ತು ಟ್ವಿಟರ್‌ನಲ್ಲಿ ಚರ್ಚೆಗೆ ಕರೆ ನೀಡುವ ಪ್ರತಿಪಕ್ಷಗಳು, ಸದನದಲ್ಲಿ ಚರ್ಚೆಯ ಪ್ರತೀ ಪ್ರಯತ್ನವನ್ನು ವಿಫಲಗೊಳಿಸಲು ನಿರ್ಧರಿಸುತ್ತದೆ. ಪ್ರತಿಪಕ್ಷಗಳ ನಿಜವಾದ ಉದ್ದೇಶ ಕೇವಲ ರಾಜಕೀಯ ಬೇಳೆ ಬೇಯಿಸುವುದೇ ಹೊರತು ಸತ್ಯ ಅರಿಯುವುದಲ್ಲ. ಇದನ್ನೆಲ್ಲ ಜನರು ನೋಡುತ್ತಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra pradhan )ಟ್ವೀಟ್ ಮಾಡಿದ್ದಾರೆ.

ಮಣಿಪುರದ ಪರಿಸ್ಥಿತಿಯ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಲು ಸರಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ. ಸದನದಲ್ಲಿ ಗದ್ದಲದ ನಡುವೆಯೇ ಪ್ರತಿಪಕ್ಷಗಳು ಮಣಿಪುರದ ಬಗ್ಗೆ ಚರ್ಚೆಗೆ ಏಕೆ ಸಿದ್ಧವಾಗಿಲ್ಲ ಎಂದು ಅವರು ಕೇಳಿದ್ದಾರೆ. ಮಣಿಪುರದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ನಾನು ವಿರೋಧ ಪಕ್ಷದ ನಾಯಕರನ್ನು ಒತ್ತಾಯಿಸುತ್ತೇನೆ. ಮಣಿಪುರ ವಿಷಯದಲ್ಲಿ ದೇಶದ ಮುಂದೆ ಸತ್ಯ ಹೊರಬರುವುದು ಮುಖ್ಯ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.


ಈಶಾನ್ಯ ರಾಜ್ಯದಲ್ಲಿ ಮೈತಿ ಮತ್ತು ಕುಕಿಗಳ ನಡುವಿನ ಜನಾಂಗೀಯ ಉದ್ವಿಗ್ನತೆಯ ನಡುವೆ ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಗೃಹ ಸಚಿವರ ಹೇಳಿಕೆಗಳು ಬಂದಿವೆ. ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಮೂರು ಹಿಂದಿನ ಮುಂದೂಡಿಕೆಗಳ ನಂತರ ಮಧ್ಯಾಹ್ನ ಮತ್ತೆ ಆರಂಭಗೊಂಡಾಗ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಮಣಿಪುರ ವಿಷಯದ ಬಗ್ಗೆ ಚರ್ಚೆ ನಡೆಸಲು ಬಯಸುತ್ತಿದ್ದಾರೆ ಎಂದು ಶಾ ಹೇಳಿದ್ದಾರೆ. ಆದರೆ ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡಲೇ ಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದರಿಂದ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮುಂದೂಡಿದ್ದಾರೆ.

ಮಣಿಪುರದಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಆಗ್ರಹಿಸಿ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗಿ ಫಲಕ ಹಿಡಿದು ಪ್ರತಿಭಟನೆ ನಡೆಸಿದ್ದರಿಂದ ಸಂಸತ್ತಿನ ಉಭಯ ಸದನಗಳು ಸೋಮವಾರ ಮತ್ತೆ ಮುಂದೂಡಲ್ಪಟ್ಟಿದೆ. ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ಗದ್ದಲ ಮುಂದುವರಿಯುತ್ತಿದ್ದಂತೆ ವಿರೋಧ ಪಕ್ಷಗಳು ಪ್ರಧಾನಿ ಸದನದ ಹೊರಗೆ ಏಕೆ ಮಾತನಾಡುತ್ತಿದ್ದಾರೆ? ಹೊರಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿವೆ.

ಇದನ್ನೂ ಓದಿ: ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ; ಮುಂಗಾರು ಅಧಿವೇಶದಲ್ಲಿ ಮಣಿಪುರ ಚರ್ಚೆಗೆ ಸಿದ್ಧ ಎಂದ ಅಮಿತ್ ಶಾ

ಪ್ರಧಾನಿಯವರು ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂಬುದು ನಮ್ಮ ಬೇಡಿಕೆ. ಆ ಹೇಳಿಕೆಯ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ನೀವು ಹೊರಗೆ ಮಾತನಾಡುತ್ತಿದ್ದೀರಿ ಆದರೆ ಒಳಗೆ ಮಾತನಾಡುತ್ತಿಲ್ಲ, ಇದು ಸಂಸತ್ತಿಗೆ ಮಾಡಿದ ಅವಮಾನ, ಇದು ಗಂಭೀರ ವಿಚಾರ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ