ಸಂಸತ್​​ನ ಒಳಗೆ ನುಗ್ಗಿದ ಯುವಕರ ಉದ್ದೇಶವೇನಿತ್ತು? ಪೊಲೀಸ್ ವಿಚಾರಣೆ ವೇಳೆ ಅವರು ಹೇಳಿದ್ದು ಹೀಗೆ

|

Updated on: Dec 14, 2023 | 6:06 PM

Parliament security breach: ನಿರುದ್ಯೋಗ, ರೈತರ ಸಮಸ್ಯೆ ಮತ್ತು ಮಣಿಪುರ ಹಿಂಸಾಚಾರದಂತಹ ಸಮಸ್ಯೆಗಳಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದು ನಾಲ್ವರು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಈ ವಿಷಯಗಳ ಬಗ್ಗೆ ಶಾಸಕರು ಚರ್ಚೆ ನಡೆಸುವಂತೆ ಅವರು ಗಮನ ಸೆಳೆಯಲು ಬಣ್ಣದ ಹೊಗೆಯನ್ನು ಬಳಸಿದ್ದಾರೆ.

ಸಂಸತ್​​ನ ಒಳಗೆ ನುಗ್ಗಿದ ಯುವಕರ ಉದ್ದೇಶವೇನಿತ್ತು? ಪೊಲೀಸ್ ವಿಚಾರಣೆ ವೇಳೆ ಅವರು ಹೇಳಿದ್ದು ಹೀಗೆ
ಸಂಸತ್ ಹೊರಗೆ ಪ್ರತಿಭಟನೆ ನಡೆಸಿದವರು
Follow us on

ದೆಹಲಿ ಡಿಸೆಂಬರ್ 14: ಉಗ್ರವಿರೋಧಿ ಕಾರ್ಯಾಚರಣೆಗಳ ಬಗ್ಗೆ ವ್ಯವಹರಿಸುವ ದೆಹಲಿ ಪೊಲೀಸರ (Delhi Police) ವಿಶೇಷ ಸೆಲ್ ಬುಧವಾರ ನಡೆದ ಸಂಸತ್ತಿನ ಭದ್ರತಾ ಲೋಪ (Parliament security breach) ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ದೆಹಲಿ ಪೊಲೀಸರು ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಿದ್ದು, ಆರನೆಯ ಆರೋಪಿ ಇನ್ನೂ ಪರಾರಿಯಾಗಿದ್ದಾನೆ.

ಆರು ಆರೋಪಿಗಳು ನಾಲ್ಕು ವರ್ಷಗಳಿಂದ ಸಂಪರ್ಕದಲ್ಲಿದ್ದರು. ಘಟನೆಯ ಕೆಲವು ದಿನಗಳ ಮೊದಲು ಉಲ್ಲಂಘನೆಯನ್ನು ನಿಖರವಾಗಿ ಯೋಜಿಸಿದ್ದರು ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ. ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಘಟಿತರಾಗಿದ್ದರು ಮತ್ತು ಆಕ್ರಮಣದ ಹಿಂದಿನ ದಿನಗಳಲ್ಲಿ ಸಂಸತ್ತಿನ ಕಟ್ಟಡವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ವಿವಿಧ ವಿಷಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಸಂಸತ್ ಒಳಗೆ ನುಗ್ಗಿದ್ದು ಎಂದು ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

ನಿರುದ್ಯೋಗ, ರೈತರ ಸಮಸ್ಯೆ ಮತ್ತು ಮಣಿಪುರ ಹಿಂಸಾಚಾರದಂತಹ ಸಮಸ್ಯೆಗಳಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದು ನಾಲ್ವರು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಈ ವಿಷಯಗಳ ಬಗ್ಗೆ ಶಾಸಕರು ಚರ್ಚೆ ನಡೆಸುವಂತೆ ಅವರು ಗಮನ ಸೆಳೆಯಲು ಬಣ್ಣದ ಹೊಗೆಯನ್ನು ಬಳಸಿದ್ದಾರೆ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಮಾತನಾಡಲು ಬಯಸಿರುವುದಾಗಿಯೂ ಅವರು ಹೇಳಿದ್ದಾರೆ.

ಆದಾಗ್ಯೂ, ಈ ಆರೋಪಿಗಳು ನೀಡಿರುವ ಕಾರಣ ಪೊಲೀಸರಿಗೆ ತೃಪ್ತಿ ತಂದಿಲ್ಲ. ಹಾಗಾಗಿ ಅವರ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸುತ್ತಾರೆ. ಅವರ ಎಲ್ಲಾ ಮೊಬೈಲ್ ಫೋನ್‌ಗಳು ಪ್ರಸ್ತುತ ಆರೋಪಿಗಳಲ್ಲಿ ಒಬ್ಬನಾದ ಲಲಿತ್ ಝಾ ಬಳಿ ಇವೆ, ಅವನು ಇನ್ನೂ ಪರಾರಿಯಾಗಿದ್ದಾನೆ. ಸಾಕ್ಷ್ಯ ನಾಶಪಡಿಸಲು ಲಲಿತ್ ಮೊಬೈಲ್ ಫೋನ್ ಗಳೊಂದಿಗೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಡಿಸೆಂಬರ್ 13, ಬುಧವಾರ, ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಅವರು ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದ್ದು ಕೈಯಲ್ಲಿದ್ದ ಡಬ್ಬಿಗಳಿಂದ ಹಳದಿ ಅನಿಲ ಬಿಡುಗಡೆ ಮಾಡಿದರು. ಅವರು ಸಂಸತ್ ಒಳಗೆ ಘೋಷಣೆಗಳನ್ನು ಕೂಗಿದರು. ಇಬ್ಬರನ್ನು ತಕ್ಷಣವೇ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಕೆಲವೇ ಕ್ಷಣಗಳಲ್ಲಿ, ಅಮೋಲ್ ಶಿಂಧೆ ಮತ್ತು ನೀಲಂ ಎಂದು ಗುರುತಿಸಲಾದ ಒಬ್ಬ ಪುರುಷ ಮತ್ತು ಮಹಿಳೆಯನ್ನು ಸಂಸತ್ತಿನ ಕಟ್ಟಡದ ಹೊರಗೆ ಹಳದಿ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳನ್ನು ಹೊತ್ತುಕೊಂಡು ಪ್ರತಿಭಟನೆ ನಡೆಸುತ್ತಿದ್ದಕ್ಕಾಗಿ ಬಂಧಿಸಲಾಯಿತು.

ಲೋಕಸಭೆ ಪ್ರವೇಶಿಸಿದ ಇಬ್ಬರು ಸೇರಿದಂತೆ ಐವರು ಆರೋಪಿಗಳು ಗುರುಗ್ರಾಮದಲ್ಲಿ ಲಲಿತ್ ಝಾ ಅವರ ನಿವಾಸದಲ್ಲಿ ತಂಗಿದ್ದರು. ಐವರನ್ನು ಗುರುತಿಸಿ ಹಿಡಿಯಲಾಗಿದ್ದು, ಆರನೆಯವನು ತಲೆಮರೆಸಿಕೊಂಡಿದ್ದಾನೆ.ಸಂಸತ್ತಿನಲ್ಲಿ ಭಾರೀ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಎಂಟು ಭದ್ರತಾ ಸಿಬ್ಬಂದಿಯನ್ನು ಲೋಕಸಭೆ ಸೆಕ್ರೆಟರಿಯೇಟ್ ಗುರುವಾರ ಅಮಾನತುಗೊಳಿಸಿದೆ.

ಆರೋಪಿಗಳ ಕುಟುಂಬ, ಸ್ನೇಹಿತರು ಏನಂತಾರೆ?

ಲೋಕಸಭೆಯ ಸಭಾಂಗಣಕ್ಕೆ ಜಿಗಿದವರಲ್ಲಿ ಒಬ್ಬರಾದ ಮೈಸೂರು ನಿವಾಸಿ ಮನೋರಂಜನ್ ಡಿ (33) ಎಂಜಿನಿಯರಿಂಗ್ ಪದವಿ ಪಡೆದಿದ್ದರೂ, ಸದ್ಯಕ್ಕೆ ಉದ್ಯೋಗದಲ್ಲಿಲ್ಲ. ಅವನ ತಂದೆಯ ಪ್ರಕಾರ, ಆತ ಕೃಷಿಯಲ್ಲಿ ತೊಡಗಿಸಿಕೊಂಡಿದ್ದನು. “ನನ್ನ ಮಗ ಏನಾದರೂ ಒಳ್ಳೆಯದನ್ನು ಮಾಡಿದ್ದರೆ, ನಾನು ಅವನನ್ನು ಬೆಂಬಲಿಸುತ್ತೇನೆ ಆದರೆ ಅವನು ಏನಾದರೂ ತಪ್ಪು ಮಾಡಿದ್ದರೆ, ನಾನು ಅದನ್ನು ಬಲವಾಗಿ ಖಂಡಿಸುತ್ತೇನೆ. ಅವನು ಮಾಡಿದ್ದು ಶಿಕ್ಷಾರ್ಹ. ಸಮಾಜಕ್ಕೆ ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ’ ಎಂದು ಮನೋರಂಜನ್ ಅವರ ತಂದೆ ದೇವರಾಜಗೌಡ ಹೇಳಿದ್ದಾರೆ.

ಮನೋರಂಜನ್ ಒಳ್ಳೆಯ ಹುಡುಗ. ಯಾಕೆ ಹೀಗೆ ಮಾಡಿದ್ದಾನೆ ಅನ್ನೋದು ಗೊತ್ತಿಲ್ಲ.ಲೋಕಸಭೆಯಲ್ಲಿ ಈ ರೀತಿಯ ದುಷ್ಕೃತ್ಯ ಎಸಗಿದ್ದು ತಪ್ಪು.ಮನೋರಂಜನ್ ಬಾಕ್ಸಿಂಗ್ ಮಾಡ್ತಾ ಇದ್ದ. ನನ್ನ ಮಗನಿಗೂ ಬಾಕ್ಸಿಂಗ್‌‌ ಹೇಳಿಕೊಟ್ಟಿದ್ದ.ನನ್ನ ಮಗನಿಗೂ ಬಾಕ್ಸಿಂಗ್ ಮೇಲೆ ಆಸಕ್ತಿ ಇತ್ತು.ಆ ಕಾರಣದಿಂದ ಹೇಳಿಕೊಟ್ಟಿದ್ದ.ಆದ್ರೆ ಆತ ಯಾರ ಜತೆಗೂ ಹೆಚ್ಚು ಮಾತನಾಡುತ್ತಿರಲಿಲ್ಲ.ಯಾರಾದರೂ ಮಾತನಾಡಿಸಿದರೆ ಮಾತ್ರ ಆತ ಮಾತನಾಡುತ್ತಿದ್ದ.ನಮ್ಮ ಜೊತೆಗೂ ಹೆಚ್ಚು ಮಾತನಾಡುತ್ತಿರಲಿಲ್ಲ.ಮನೋರಂಜನ್ ಜೊತೆ ಯಾರು ಸ್ನೇಹಿತರೂ ಆತನ ಮನೆಗೆ ಬಂದಿರುವುದನ್ನು ನಾನು ನೋಡಿಲ್ಲ.

ನನಗೆ ಎರಡು ವರ್ಷದಿಂದ ಮನೋರಂಜನ್ ಪರಿಚಯ.ಆತ ಮೊಬೈಲ್ ಬಳಸಿದ್ದನ್ನೆ ನೋಡಿಲ್ಲ‌.ಸಾಮಾನ್ಯವಾಗಿ ಎಲ್ಲರು ಮೊಬೈಲ್ ಕೈಯಲ್ಲಾದ್ರು ಇಟ್ಟುಕೊಳ್ಳುತ್ತಾರೆ.ಆದ್ರೆ ಈತ ಮೊಬೈಲ್ ಇಟ್ಟುಕೊಂಡಿದ್ದನ್ನು ನೋಡಿಲ್ಲ ಎಂದು ಟಿವಿ9 ಜತೆ ಮಾತನಾಡಿದ ಮನೋರಂಜನ್ ಎದುರು ಮನೆಯ ನಿವಾಸಿ ಅಕ್ಷಯ್ ಹೇಳಿದ್ದಾರೆ.

ಇದನ್ನೂ ಓದಿ: Parliament Security Breach: ಸಂಸತ್ತಿನ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗುವುದು: ಪ್ರಹ್ಲಾದ್ ಜೋಶಿ

ಅದೇ ರೀತಿ, ಸಂಸತ್ತಿನ ಆವರಣದಿಂದ ಬಂಧಿಸಲ್ಪಟ್ಟ ನೀಲಮ್ ದೇವಿ ಕೂಡ ತಮ್ಮ ನಿರುದ್ಯೋಗದಿಂದಾಗಿ ಹತಾಶರಾಗಿದ್ದರು ಎಂದು ವರದಿಯಾಗಿದೆ. ಜಿಂದ್‌ನಿಂದ ಬಂದಿರುವ ಆಕೆಯ ಕುಟುಂಬ, ಆಕೆ ಎಂಫಿಲ್ ಸಂಶೋಧನಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ. ಟೀಚರ್ ಕೆಲಸವನ್ನು ಪಡೆಯಲು ಕೇಂದ್ರೀಯ ಪರೀಕ್ಷೆಗಳನ್ನು  ತೇರ್ಗಡೆ ಹೊಂದಿದ್ದರು, ಆದರೆ ಒಂದನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.ಅವಳು ಹೆಚ್ಚು ಅರ್ಹತೆ ಹೊಂದಿದ್ದಾಳೆ, ಆದರೆ ಕೆಲಸ ಸಿಗುತ್ತಿಲ್ಲ. ಈ ಕಾರಣದಿಂದ ಆಕೆ ಎಷ್ಟು ಒತ್ತಡಕ್ಕೆ ಒಳಗಾಗಿದ್ದಳು. ಇಷ್ಟು ಓದಿದ್ದರೂ ಎರಡು ಹೊತ್ತಿನ ಊಟಕ್ಕಾಗಿ ಸಂಪಾದಿಸಲು ಸಾಧ್ಯವಾಗದೇ ನಾನು ಸಾಯಬೇಕಲ್ಲ  ಎಂದು ಆಕೆ ಹೇಳುತ್ತಿದ್ದಳು’ ಎಂದು ಆಕೆಯ ತಾಯಿ ಸರಸ್ವತಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ನೀಲಂ ಅವರ ಸಹೋದರ ರಾಮ್ನಿವಾಸ್, ಅವರು ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಸಹ ಉತ್ತೀರ್ಣರಾಗಿದ್ದಾಳೆ. “ಅವಳು ತನ್ನ ಬಿಎ, ಎಂಎ, ಎಂಫಿಲ್ ಪೂರ್ಣಗೊಳಿಸಿದ್ದಳು ಮತ್ತು ನೆಟ್ ತೇರ್ಗಡೆ ಹೊಂದಿದ್ದಳು, ಆದರೆ ಇನ್ನೂ ನಿರುದ್ಯೋಗಿಯಾಗಿದ್ದಳು. ಅವರು ಆರು ತಿಂಗಳ ಹಿಂದೆ ಜಿಂದ್‌ಗೆ ತೆರಳಿ ಮಾಧ್ಯಮಿಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು ಎಂದಿದ್ದಾರೆ.

ಪ್ರತಿಭಟನೆಯಲ್ಲಿ ನೀಲಂ ನಿರುದ್ಯೋಗದ ಸಮಸ್ಯೆಯನ್ನು ಆಗಾಗ್ಗೆ ಪ್ರಸ್ತಾಪಿಸಿದರು. ಮೂರು ಕೃಷಿ ಮಸೂದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಬಳಿ ವರ್ಷವಿಡೀ ನಡೆದ ರೈತರ ಪ್ರತಿಭಟನೆಯಲ್ಲಿಯೂ ಆಕೆ ಭಾಗಿಯಾಗಿದ್ದಳು.

ಸಂಸತ್ತಿನ ಹೊರಗೆ ನೀಲಂ ಅವರೊಂದಿಗೆ ಬಂದಿದ್ದ ಅಮೋಲ್ ಶಿಂಧೆ ಕೂಡ ಹತಾಶೆ ಮತ್ತು ಖಿನ್ನತೆಗೆ ಒಳಗಾಗಿದ್ದರು. ಸೇನೆಯ ನೇಮಕಾತಿಯನ್ನು ತೆರವುಗೊಳಿಸಲು ವಿಫಲವಾದ ಕಾರಣ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ತಾಯಿ ಬಹಿರಂಗಪಡಿಸಿದ್ದಾರೆ. “ಅವನು ಇದನ್ನು ಮಾಡಲು ಕಾರಣವೇನೆಂದು ನಮಗೆ ತಿಳಿದಿಲ್. ಆದರೆ ಅವನ ಪ್ರಯತ್ನಗಳ ಹೊರತಾಗಿಯೂ ಅವನಿಗೆ ಪ್ರವೇಶ ಸಿಕಿಲ್ಲ  ಎಂದು ಅವನು ಖಿನ್ನತೆಗೆ ಒಳಗಾಗಿದ್ದನು. ‘ನಾನು ಪ್ರವೇಶಿಸಲು ಸಾಧ್ಯವಾಗದಿದ್ದರೆ ನನ್ನ ಶಿಕ್ಷಣ ಮತ್ತು ಸಿದ್ಧತೆಯ ಪ್ರಯೋಜನವೇನು?’ ಹೇಳುತ್ತಿದ್ದರು.”

ಸಾಗರ್ ಶರ್ಮಾ ನಮಗೆ ಯಾವುದೇ ಮಾಹಿತಿ ನೀಡುತ್ತಿರಲಿಲ್ಲ:  ತಾಯಿ ರಾಣಿ ಶರ್ಮಾ ಹೇಳಿಕೆ

ಯಾವ ಕೆಲಸದ ಮೇಲೆ ದೆಹಲಿಗೆ ತೆರಳುತ್ತಿದ್ದೇನೆಂದು ಹೇಳಿರಲಿಲ್ಲ. ದೆಹಲಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಅಷ್ಟೇ
ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಾಗರ್ ಶರ್ಮಾ. 2 ದಿನ ಕೆಲಸವಿದೆ ಎಂದು ಹೇಳಿ ದೆಹಲಿಗೆ ತೆರಳಿದ್ದ ಸಾಗರ್ ಶರ್ಮಾ
ಸಾಗರ್ ಯಾವುದೇ ಅನುಮಾನ ಬರುವಂತೆ ನಡೆದುಕೊಳ್ಳುತ್ತಿರಲಿಲ್ಲ  ಎಂದು ಲಖನೌನಲ್ಲಿ ಸಾಗರ್ ಶರ್ಮಾ ತಾಯಿ ರಾಣಿ ಶರ್ಮಾ ಹೇಳಿಕೆ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ