Union Budget 2024: ಜು. 22ಕ್ಕೆ ಸಂಸತ್ ಅಧಿವೇಶ, ಜು.23ಕ್ಕೆ ಬಜೆಟ್ ಮಂಡನೆ: ​​ ಸಚಿವ ಕಿರಣ್ ರಿಜಿಜು

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jul 08, 2024 | 3:01 PM

Parliament session: ಜು. 22ಕ್ಕೆ ಸಂಸತ್ ಅಧಿವೇಶ, ಜು.23ಕ್ಕೆ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಹೇಳಿದ್ದಾರೆ. ಹೊಸ ಸರ್ಕಾರ ರಚನೆಯಾದ ನಂತರ ಈ ಬಜೆಟ್​​​ ಮಂಡನೆ ಮಾಡಲಾಗುತ್ತಿದೆ.

Union Budget 2024: ಜು. 22ಕ್ಕೆ ಸಂಸತ್ ಅಧಿವೇಶ, ಜು.23ಕ್ಕೆ ಬಜೆಟ್ ಮಂಡನೆ: ​​ ಸಚಿವ ಕಿರಣ್ ರಿಜಿಜು
Follow us on

ದೆಹಲಿ, ಜು.6: ಜುಲೈ 22ಕ್ಕೆ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿಲಿದೆ. ಹೊಸ ಸರಕಾರದ ಪೂರ್ಣ ಬಜೆಟ್ ಮಂಡನೆ ಜುಲೈ 23ಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್​​​ ಮಂಡನೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಬಜೆಟ್​​ ಮೇಲಿನ ಅಧಿವೇಶನ ಆಗಸ್ಟ್ 12ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು (ಜುಲೈ 6) ತಿಳಿಸಿದ್ದಾರೆ.

ಕಿರಣ್ ರಿಜಿಜು ಅವರು ಎಕ್ಸ್​​​ ಮೂಲಕ ಈ ಬಗ್ಗೆ ಹಂಚಿಕೊಂಡಿದ್ದಾರೆ. ಜುಲೈ 23ಕ್ಕೆ ಕೇಂದ್ರ ಬಜೆಟ್​​ ಮಂಡನೆಯಾಗಲಿದ್ದು, ಅಲ್ಲಿ ಆಗಸ್ಟ್​​ 12ರವರಗೆ ಬಜೆಟ್​​​ ಮೇಲ ಹಾಗೂ ಅನೇಕ ವಿಚಾರಗಳ ಮೇಲೆ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.

 

ಭಾರತದ ಸರ್ಕಾರದ ಶಿಫಾರಸಿನ ಮೇರೆಗೆ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಜುಲೈ 22, 2024 ರಿಂದ ಆಗಸ್ಟ್ 12, 2024 ರವರೆಗೆ ಬಜೆಟ್ ಅಧಿವೇಶನ ನಡೆಸಲು ಹಾಗೂ 2024 ಗಾಗಿ ಸಂಸತ್ತಿನ ಉಭಯ ಸದನ ಕರೆಯುವ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ ಎಂದು ಹೇಳಿದ್ದಾರೆ. 024–25ರ ಕೇಂದ್ರ ಬಜೆಟ್ ಅನ್ನು ಜುಲೈ 23, 2024 ರಂದು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Sat, 6 July 24