BIG NEWS: ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿಗೆ ಆ.18ರವರೆಗೆ ನ್ಯಾಯಾಂಗ ಬಂಧನ

ಎಸ್‌ಎಸ್‌ಸಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ನ್ಯಾಯಾಲಯವು ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿಗೆ ಆಗಸ್ಟ್ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

BIG NEWS: ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿಗೆ ಆ.18ರವರೆಗೆ ನ್ಯಾಯಾಂಗ ಬಂಧನ
Partha Chatterjee and Arpita Mukherjee
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 05, 2022 | 6:19 PM

ಶಿಕ್ಷಕರ ನೇಮಕಾತಿ  (SSC) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ನ್ಯಾಯಾಲಯವು ಪಾರ್ಥ ಚಟರ್ಜಿ (Partha Chatterjee) ಮತ್ತು ಅರ್ಪಿತಾ ಮುಖರ್ಜಿಗೆ ಆಗಸ್ಟ್ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದ ಆರೋಪಿಗಳಾದ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಜುಲೈ 23ರಂದು ಇಡಿ ಬಂಧಿಸಿದ್ದು ಅವರು ಇಲ್ಲಿಯವರೆಗೆ ಇಡಿ ವಶದಲ್ಲೇ ಇದ್ದಾರೆ. ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಚಟರ್ಜಿ ಅವರನ್ನು ಮಮತಾ ಬ್ಯಾನರ್ಜಿ ಟಿಎಂಸಿ ನೇತೃತ್ವದ ತಮ್ಮ ಸಚಿವ ಸಂಪುಟದಿಂದ ತೆಗೆದು ಹಾಕಿದ್ದಾರೆ. ಚಟರ್ಜಿ ಅವರು 15 ದಿನ ನಮ್ಮ ವಶದಲ್ಲಿದ್ದರು. ಅದರಲ್ಲಿ ಎರಡು ದಿನ ಸರ್ಕಾರಿ ಎಸ್ಎಸ್ ಕೆಎಂ ಆಸ್ಪತ್ರೆಗೆ ದಾಖಲಾಗುವ ಮೂಲಕ ಎರಡು ದಿನಗಳನ್ನು ಅವರು ವ್ಯರ್ಥ ಮಾಡಿದ್ದಾರೆ. ಕಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಚಟರ್ಜಿ ಅವರನ್ನು ಭುವನೇಶ್ವರದಲ್ಲಿರುವ ಏಮ್ಸ್ ಗೆ ಕರದೊಯ್ದು ಅಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಚಟರ್ಜಿ ಅವರಿಗೆ ಆರೋಗ್ಯ ಸಮಸ್ಯೆಯೇನೂ ಇಲ್ಲ ಎಂದು ಅಲ್ಲಿನ ವೈದ್ಯರು ಹೇಳಿದ್ದರು. ಮುಖರ್ಜಿ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಹಲವು ದಾಖಲೆ ಪತ್ರಗಳ ಜತೆ 49.8 ಕೋಟಿ ನಗದು, ದೊಡ್ಡ ಪ್ರಮಾಣದ ಚಿನ್ನಾಭರಣ, ಚಿನ್ನದ ಗಟ್ಟಿಯನ್ನು ಇಡಿ ವಶ ಪಡಿಸಿದೆ.

ಅರ್ಪಿತಾ ಮುಖರ್ಜಿ ಎಲ್ಐಸಿ ಪಾಲಿಸಿಗಳಿಗೆ ಪಾರ್ಥ ಚಟರ್ಜಿ ನಾಮಿನಿ

ಅರ್ಪಿತಾ ಮುಖರ್ಜಿ (Arpita Mukherjee) ಅವರ ಹೆಸರಲ್ಲಿ 31 ಎಲ್ಐಸಿ (LIC)  ಪಾಲಿಸಿ ಇದೆ. ಈ ಪಾಲಿಸಿಗಳ ನಾಮಿನಿ ಪಾರ್ಥ  ಚಟರ್ಜಿ ಆಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಅರ್ಪಿತಾ ಮತ್ತು ಪಾರ್ಥ ಚಟರ್ಜಿ 2012 ಜನವರಿ 1ರಂದು ಎಪಿಎ ಯುಟಿಲಿಟಿ ಸರ್ವೀಸಸ್​​​ನಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಆರೋಪಿಗಳ ಈ ಪಾಲುದಾರಿಕೆಯ ಸಂಸ್ಥೆಯ ಹೆಸರಿಗೆ ಆಸ್ತಿಯನ್ನು ತರಲಾಗಿತ್ತು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಕೆಲವು ಆಸ್ತಿಗಳನ್ನು ಆರೋಪಿಗಳು ನಗದು ಕೊಟ್ಟು ಖರೀದಿಸಿದ್ದಾರೆ. ಇದಕ್ಕಾಗಿ ಬಳಸಿದ ಹಣದ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ.

ಇದನ್ನೂ ಓದಿ
Image
National Handloom Day: ಆ.7ರಂದು 8ನೇ ರಾಷ್ಟ್ರೀಯ ಕೈಮಗ್ಗ ದಿನದ ಆಚರಣೆ: ಸಚಿವ ದರ್ಶನಾ ಜರ್ದೋಶ್
Image
ಕಾನ್ಸ್‌ಟೇಬಲ್ ಹಣೆಬರಹ ಬದಲಾಯಿಸಿಬಿಟ್ಟ 6 ರೂಪಾಯಿ ಲಾಟರಿ ಟಿಕೆಟ್!
Image
ನೂರಾರು ಪ್ರಯಾಣಿಕರಿದ್ದ ಅಮರನಾಥ್ ಎಕ್ಸ್ ಪ್ರೆಸ್ ರೈಲು ಹಾದಿ ಬಿಟ್ಟು ಬೇರೊಂದು ಟ್ರ್ಯಾಕ್​ನಲ್ಲಿ 3 ಕಿಮೀ ಸಂಚರಿಸಿತು! ಆಮೇಲೇನಾಯ್ತು?
Image
Freedom Fighters: ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು; ಇದು ನಿಮ್ಮೂರಿನಲ್ಲೇ ನಡೆದ ಸ್ವಾತಂತ್ರ್ಯ ಹೋರಾಟದ ಕೈಗನ್ನಡಿ

ಆರೋಪಿಗಳ ಈ ಪಾಲುದಾರಿಕೆಯ ಸಂಸ್ಥೆಯ ಹೆಸರಿಗೆ ಆಸ್ತಿಯನ್ನು ತರಲಾಗಿತ್ತು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಕೆಲವು ಆಸ್ತಿಗಳನ್ನು ಆರೋಪಿಗಳು ನಗದು ಕೊಟ್ಟು ಖರೀದಿಸಿದ್ದಾರೆ. ಇದಕ್ಕಾಗಿ ಬಳಸಿದ ಹಣದ ಮೂವ ಯಾವುದು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ.

ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ ಇಡಿ ಶೋಧ  ನಡೆಸಿದಾಗ ಎಡಿಎಸ್ಆರ್ ಬೋಲಾಪುರ್  ಕಚೇರಿಯಲ್ಲಿ  ನೋಂದಣಿ ಮಾಡಿದ ಒಪ್ಪಂದ ಪತ್ರ ಸಿಕ್ಕಿದೆ. ಈ ದಾಖಲೆಗಳನ್ನು ಇಡಿ ವಶಪಡಿಸಿಕೊಂಡಿದೆ. ಈ ದಾಖಲೆಗಳ ಪ್ರಕಾರ ಇವರಿಬ್ಬರೂ 2012ರಿಂದ ಪಾಲುದಾರರಾಗಿದ್ದಾರೆ. ಕೊಲ್ಕತ್ತಾದ ವಿಶೇಷ ನ್ಯಾಯಾಲಯ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಆಗಸ್ಟ್ 5ರ ವರೆಗೆ ಇಡಿ ವಶಕ್ಕೆ ನೀಡಿದೆ. ಜುಲೈ 22ರಂದು ಇಡಿ ಅರ್ಪಿತಾ ಮುಖರ್ಜಿ ಮನೆ ಮೇಲೆ ದಾಳಿ ನಡೆಸಿ 21.90 ಕೋಟಿ ನಗದು ವಶಪಡಿಸಿತ್ತು. ತನಿಖಾ ಸಂಸ್ಥೆ  56 ಲಕ್ಷ ಮೌಲ್ಯದ ವಿದೇಶಿ ಹಣ ಮತ್ತು 76ಲಕ್ಷ ಮೌಲ್ಯದ ಚಿನ್ನ ವಶಪಡಿಸಿದೆ.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 5:59 pm, Fri, 5 August 22

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ