ಚಲಿಸುತ್ತಿದ್ದ ರೈಲಿನಲ್ಲಿ ಹಾವೊಂದು ಪ್ರಯಾಣಿಕನನ್ನು ಕಚ್ಚಿರುವ ಘಟನೆ ಝಾನ್ಸಿಯಲ್ಲಿ ನಡೆದಿದೆ. ಝಾನ್ಸಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಯುವಕನಿಗೆ ಜನರಲ್ ಕೋಚ್‌ನಲ್ಲಿ ಹಾವು ಕಚ್ಚಿದೆ. ಇದಾದ ನಂತರ ಇಡೀ ಕೋಚ್‌ನಲ್ಲಿ ನೂಕುನುಗ್ಗಲು ಉಂಟಾಯಿತು. ಗ್ವಾಲಿಯರ್‌ನಲ್ಲಿ ರೈಲು ನಿಂತಾಗ, ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು.
30 ವರ್ಷದ ಭಗವಾಂದಾಸ್, ಮಧ್ಯಪ್ರದೇಶದ ಟಿಕಮ್‌ಗಢ ನಿವಾಸಿಯಾಗಿದ್ದು, ದೆಹಲಿಗೆ ಹೋಗಲು ಖಜುರಾಹೊ-ಝಾನ್ಸಿ ಮೆಮು ಮೂಲಕ ಭಾನುವಾರ ರಾತ್ರಿ ಝಾನ್ಸಿ ತಲುಪಿದ್ದರು. ಇಲ್ಲಿಂದ ದೆಹಲಿಗೆ ಇನ್ನೊಂದು ರೈಲು ಹಿಡಿಯಬೇಕಿತ್ತು. ದಾದರ್-ಅಮೃತಸರ ಎಕ್ಸ್‌ಪ್ರೆಸ್ ರಾತ್ರಿ 8.35 ಕ್ಕೆ 15 ನಿಮಿಷಗಳ ವಿಳಂಬದೊಂದಿಗೆ ಝಾನ್ಸಿ ತಲುಪಿದಾಗ, ಭಗವಾಂದಾಸ್ ರೈಲಿನ ಜನರಲ್ ಕೋಚ್‌ಗೆ ಹತ್ತಿದ್ದರು.
ರೈಲಿನಲ್ಲಿ ಹೆಚ್ಚಿನ ಜನಸಂದಣಿ ಇದ್ದ ಕಾರಣ, ಅವರು ಬಾಗಿಲಿನ ಹಿಂದೆ ನಿಂತರು. ಇದಾದ ನಂತರ ರಾತ್ರಿ 10 ಗಂಟೆಗೆ ದಬ್ರಾ-ಗ್ವಾಲಿಯರ್ ನಡುವೆ ರೈಲು ಓಡುತ್ತಿದ್ದಾಗ ಹಾವು ಕಚ್ಚಿದೆ. ಭಗವಾನದಾಸ್‌ನ ಕಿರುಚಾಟ ಕೇಳಿ ಇತರ ಪ್ರಯಾಣಿಕರ ಕಣ್ಣು ಹಾವಿನ ಮೇಲೆ ಬಿದ್ದ ತಕ್ಷಣ ಕೋಚ್‌ನಲ್ಲಿದ್ದವರೆಲ್ಲರೂ ಪ್ರಾಣ ಉಳಿಸಿಕೊಳ್ಳಲು ಇತ್ತ ಓಡತೊಡಗಿದರು.
झांसी में चलती ट्रेन में यात्री को सांप ने डसा! @AshwiniVaishnaw क्या क्या देखना पड़ेगा भाई !
झांसी से दिल्ली जा रही दादर-अमृतसर एक्सप्रेस (11057) एक्सप्रेस में रात 8.35 बजे में जनरल कोच में यात्री को सांप के डसने से पूरे कोच में अफरा-तफरी मच गई।#Jhansi #snake #passenger pic.twitter.com/WtnXCGQw9k
— Shekhar Upadhyay 🇮🇳 (@NewsUpadhyay) November 12, 2024
ಇದೇ ವೇಳೆ ಪ್ರಯಾಣಿಕರೊಬ್ಬರು ರೈಲ್ವೇ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿ ಘಟನೆಯ ಬಗ್ಗೆ ರೈಲ್ವೆ ಆಡಳಿತಕ್ಕೆ ಮಾಹಿತಿ ನೀಡಿ ಪ್ರಯಾಣಿಕರಿಗೆ ಸಹಾಯ ಕೋರಿದ್ದಾರೆ ಎಂದು ಪಿಆರ್‌ಒ ತಿಳಿಸಿದ್ದಾರೆ .
ಮತ್ತಷ್ಟು ಓದಿ:Viral: ದೇವರಂತೆ ಬಂದು ಹಾವಿನ ಪ್ರಾಣ ಉಳಿಸಿದ ಯುವಕ; ವಿಡಿಯೋ ವೈರಲ್
ರೈಲು 10.30 ಕ್ಕೆ ಗ್ವಾಲಿಯರ್ ತಲುಪಿದಾಗ, ಆರ್‌ಪಿಎಫ್ ಭಗವಾನ್‌ದಾಸ್‌ನನ್ನು ರೈಲಿನಿಂದ ಕೆಳಗಿಳಿಸಿ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ವೈದ್ಯಕೀಯ ಕಾಲೇಜಿಗೆ ಕಳುಹಿಸಿತು, ಅಲ್ಲಿ ಭಗವಾಂದಾಸ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ