ಗೋವಾ-ದೆಹಲಿ ಏರ್ ಇಂಡಿಯಾ ವಿಮಾನ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ
ಪ್ರಯಾಣಿಕರು ವಿಮಾನ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದರು. ನಂತರ ವಿಮಾನದಲ್ಲಿದ್ದ ಒಬ್ಬ ಸಿಬ್ಬಂದಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ, ಪ್ರಯಾಣಿಕರು ಅಪ್ರಚೋದಿತ, ಆಕ್ರಮಣಕಾರಿ ವರ್ತನೆಯನ್ನು ಮುಂದುವರೆಸಿದ್ದು ಅವರನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದೇವೆ
ದೆಹಲಿ: ಗೋವಾದಿಂದ (Goa) ಬಂದ ಏರ್ ಇಂಡಿಯಾ (Air India)ವಿಮಾನದಲ್ಲಿದ್ದ ಪುರುಷ ಪ್ರಯಾಣಿಕರೊಬ್ಬರು ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ. ಏರ್‌ಲೈನ್ಸ್ ಪ್ರಕಾರ ದೆಹಲಿ ವಿಮಾನ ನಿಲ್ದಾಣದಲ್ಲಿ (Delhi airport) ಇಳಿದ ನಂತರ ಆ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ.ಇತ್ತೀಚಿನ ತಿಂಗಳುಗಳಲ್ಲಿ, ವಿಮಾನದಲ್ಲಿ ಪ್ರಯಾಣಿಕರು ಸಿಬ್ಬಂದಿ ಜತೆ ಅಥವಾ ಸಹ ಪ್ರಯಾಣಿಕರ ಜತೆ ಕೆಟ್ಟದಾಗಿ ವರ್ತಿಸಿದ ಅನೇಕ ಘಟನೆಗಳು ನಡೆದಿವೆ. ಇತ್ತೀಚಿನ ಘಟನೆಯು AI882 ವಿಮಾನ ಗೋವಾದಿಂದ ದೆಹಲಿಗೆ ಹೋಗುವ ಮಾರ್ಗದಲ್ಲಿ ಸಂಭವಿಸಿದೆ.
ಪ್ರಯಾಣಿಕರು ವಿಮಾನ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದರು. ನಂತರ ವಿಮಾನದಲ್ಲಿದ್ದ ಒಬ್ಬ ಸಿಬ್ಬಂದಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ, ಪ್ರಯಾಣಿಕರು ಅಪ್ರಚೋದಿತ, ಆಕ್ರಮಣಕಾರಿ ವರ್ತನೆಯನ್ನು ಮುಂದುವರೆಸಿದ್ದು ಅವರನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದೇವೆ. ನಾವು ಸಹ ದೂರು ನೀಡಿದ್ದೇವೆ. ಘಟನೆಯು ನಿಯಂತ್ರಕಕ್ಕೆ ಬಂದಿದೆ ಎಂದು ಏರ್ ಇಂಡಿಯಾ ವಕ್ತಾರರು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಯು ನಮಗೆ ಅತ್ಯಂತ ಮಹತ್ವದ್ದಾಗಿದೆ. ಪ್ರಯಾಣಿಕರ ಈ ಅಶಿಸ್ತಿನ ವರ್ತನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸಂತ್ರಸ್ತ ಸಿಬ್ಬಂದಿಗೆ ನಾವು ಎಲ್ಲಾ ಬೆಂಬಲವನ್ನು ನೀಡುತ್ತೇವೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಏಪ್ರಿಲ್ 10 ರಂದು ದೆಹಲಿ-ಲಂಡನ್ ವಿಮಾನದಲ್ಲಿ ಇಬ್ಬರು ಮಹಿಳಾ ಕ್ಯಾಬಿನ್ ಸಿಬ್ಬಂದಿಗೆ ದೈಹಿಕ ಹಾನಿಯನ್ನುಂಟು ಮಾಡಿದ ವ್ಯಕ್ತಿಗೆ ಏರ್ ಇಂಡಿಯಾ ಎರಡು ವರ್ಷಗಳ ಹಾರಾಟದ ನಿಷೇಧವನ್ನು ವಿಧಿಸಿತು. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ನಿಯಮಗಳ ಅಡಿಯಲ್ಲಿ ಅಶಿಸ್ತಿನ ವಿಮಾನ ಪ್ರಯಾಣಿಕರು ವಿವಿಧ ಅವಧಿಗಳಿಗೆ ಹಾರಾಟದ ನಿಷೇಧವನ್ನು ಎದುರಿಸಬಹುದು.
ನಿಯಮಗಳ ಪ್ರಕಾರ, ಅಶಿಸ್ತಿನ ಪ್ರಯಾಣಿಕರ ವರ್ತನೆಯನ್ನು ಮೂರು ಹಂತಗಳಾಗಿ ವರ್ಗೀಕರಿಸಬಹುದು. ದೈಹಿಕ ಸನ್ನೆಗಳು, ಮೌಖಿಕ ಕಿರುಕುಳ ಮತ್ತು ಅ ಮದ್ಯಪಾನದಂತಹ ಅಶಿಸ್ತಿನ ನಡವಳಿಕೆಯನ್ನು ಹಂತ 1 ಎಂದು ವರ್ಗೀಕರಿಸಲಾಗಿದೆ. ಆದರೆ ದೈಹಿಕವಾಗಿ ನಿಂದಿಸುವ ನಡವಳಿಕೆಯಾದ ತಳ್ಳುವುದು, ಒದೆಯುವುದು ಅಥವಾ ಲೈಂಗಿಕ ಕಿರುಕುಳವನ್ನು ಹಂತ 2 ಎಂದು ವರ್ಗೀಕರಿಸಲಾಗಿದೆ.
ಇದನ್ನೂ ಓದಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಆರೋಪಿ ಶಂಕರ್ ಮಿಶ್ರಾಗೆ ಜಾಮೀನು
ವಿಮಾನದ ಕಾರ್ಯಾಚರಣಾ ವ್ಯವಸ್ಥೆಗಳಿಗೆ ಹಾನಿ, ಉಸಿರುಗಟ್ಟಿಸುವುದು ಮತ್ತು ಕೊಲೆಯ ಆಕ್ರಮಣದಂತಹ ದೈಹಿಕ ಹಿಂಸೆಯಂತಹ ಜೀವ-ಬೆದರಿಕೆಯ ವರ್ತನೆಯನ್ನು ಹಂತ 3 ಎಂದು ಪರಿಗಣಿಸಲಾಗುತ್ತದೆ. ಅಶಿಸ್ತಿನ ನಡವಳಿಕೆಯ ಮಟ್ಟವನ್ನು ಅವಲಂಬಿಸಿ, ಸಂಬಂಧಿತ ಏರ್‌ಲೈನ್‌ನಿಂದ ಸ್ಥಾಪಿಸಲಾದ ಆಂತರಿಕ ಸಮಿತಿಯು ಅಂಥಾ ಪ್ರಯಾಣಿಕರಿಗೆ ವಿಮಾನಯಾನ ನಿಷೇಧಿಸುವ ಅವಧಿಯನ್ನು ನಿರ್ಧರಿಸಬಹುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Tue, 30 May 23