Sign In

By signing in or creating an account, you agree with Associated Broadcasting Company's Terms & Conditions and Privacy Policy.

Bihar: ಬಿಹಾರದಲ್ಲಿ ಜಾತಿ ಆಧಾರಿತ ಸಮೀಕ್ಷೆಗೆ ಬ್ರೇಕ್​​ ಹಾಕಿದ ಪಾಟ್ನಾ ಹೈಕೋರ್ಟ್

Caste Based Survey: ಹಿಂದುಳಿದವರಿಗೆ ಸಹಾಯ ಮಾಡಲು ಈ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದ ಬಿಹಾರ ಸರ್ಕಾರದ ಜಾತಿ ಆಧಾರಿತ ಸಮೀಕ್ಷೆಯನ್ನು ನಡೆಸದಂತೆ ಇಂದು (ಮೇ.4) ಪಾಟ್ನಾ ಹೈಕೋರ್ಟ್ ತಡೆಹಿಡಿದಿದೆ.

Bihar: ಬಿಹಾರದಲ್ಲಿ ಜಾತಿ ಆಧಾರಿತ ಸಮೀಕ್ಷೆಗೆ ಬ್ರೇಕ್​​ ಹಾಕಿದ ಪಾಟ್ನಾ ಹೈಕೋರ್ಟ್
ನಿತೀಶ್ ಕುಮಾರ್​
Follow us
ಅಕ್ಷಯ್​ ಪಲ್ಲಮಜಲು​​
|

Updated on: May 04, 2023 | 3:17 PM

ಪಾಟ್ನಾ: ಬಿಹಾರದಲ್ಲಿ ಜಾತಿ ಆಧಾರಿತ ಸಮೀಕ್ಷೆಗೆ ( Bihar Caste Based Survey) ಮುಂದಾಗಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರಕ್ಕೆ ಹೈಕೋರ್ಟ್ ಶಾಕ್​​ ನೀಡಿದೆ. ಹಿಂದುಳಿದವರಿಗೆ ಸಹಾಯ ಮಾಡಲು ಈ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದ ಬಿಹಾರ ಸರ್ಕಾರದ ಜಾತಿ ಆಧಾರಿತ ಸಮೀಕ್ಷೆಯನ್ನು ನಡೆಸದಂತೆ ಇಂದು (ಮೇ.4) ಪಾಟ್ನಾ ಹೈಕೋರ್ಟ್ ತಡೆಹಿಡಿದಿದೆ. ನಿತೀಶ್ ಕುಮಾರ್ ಅವರ ಸರ್ಕಾರ ಇಂದು ಬೆಳಿಗ್ಗೆ ಜಾತಿ ಆಧಾರಿತ ಸಮೀಕ್ಷೆಯನ್ನು ಸಮರ್ಥಿಸಿಕೊಂಡಿದ್ದರು, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಅದರ ಅನುಷ್ಠಾನವನ್ನು ಬೆಂಬಲಿಸುತ್ತವೆ ಎಂದು ವಾದಿಸಿದರು. ಬಿಹಾರ ನಿವಾಸಿಗಳ ಆರ್ಥಿಕ ಸ್ಥಿತಿ ಮತ್ತು ಜಾತಿ ಎರಡರಲ್ಲೂ ದತ್ತಾಂಶವನ್ನು ಸಂಗ್ರಹಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ, ಇದು ಕೇಂದ್ರಕ್ಕೆ ಮಾತ್ರ ಇರುವುದು.

ಸಮೀಕ್ಷೆಯ ವಿರೋಧದ ಬಗ್ಗೆ ನಿತೀಶ್ ಕುಮಾರ್ ಅವರು ಹತಾಶೆ ವ್ಯಕ್ತಪಡಿಸಿದ್ದಾರೆ, ಅಗತ್ಯವಿರುವವರಿಗೆ ಇದು ಉತ್ತಮ ಯೋಜನೆಯಾಗಿದೆ. ಬಡವರ ಸಹಾಯಕ್ಕೆ ಈ ಕ್ರಮವನ್ನು ತರಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Bihar News: ಪತಿಯ ಸಾವಿನಿಂದ ಖಿನ್ನತೆ, ಮಗನ ಜೊತೆ ನೇಣಿಗೆ ಶರಣಾದ ತಾಯಿ

ಈ ಸಮೀಕ್ಷೆಯು ಬಡವರನ್ನು ಸಮಾಜ ಮುಖ್ಯವಾಹಿನಿಗೆ ತರಲು ಅಗತ್ಯವಿರುವ ಪ್ರಮುಖ ಕ್ರಮ ಈ ಸಮೀಕ್ಷೆಯಾಗಿತ್ತು ಎಂದು ಹೇಳಿದರು. ಬಿಹಾರದಲ್ಲಿ ಮೊದಲ ಸುತ್ತಿನ ಜಾತಿ ಸಮೀಕ್ಷೆಯು ಜನವರಿ 7 ಮತ್ತು 21ರ ನಡುವೆ ನಡೆದಿದ್ದು, ಎರಡನೇ ಸುತ್ತನ್ನು ಏಪ್ರಿಲ್ 15 ರಿಂದ ಮೇ 15 ರವರೆಗೆ ನಡೆಸಲು ನಿರ್ಧರಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ