ಒಂದರ ಬೆನ್ನಿಗೆ ಮತ್ತೊಂದು ಭಯಹುಟ್ಟಿಸುವ ಘಟನೆ; ಹೆದರಿ ಠಾಣೆಯಲ್ಲೇ ಶಾಂತಿಪೂಜೆ ಮಾಡಿಸಿದ ಪೊಲೀಸರು

ಇತ್ತೀಚೆಗೆ ಈ ಠಾಣೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾನ್​ಸ್ಟೆಬಲ್​ವೊಬ್ಬರಿಗೆ ಹಾವು ಕಚ್ಚಿತ್ತು. ಕಳೆದ ಈ ಠಾಣೆಯ ವ್ಯಾಪ್ತಿಯಲ್ಲೇ ಇಬ್ಬರು ಹುಡುಗಿಯರನ್ನು ಅಪಹರಣ ಮಾಡಲಾಗಿತ್ತು

ಒಂದರ ಬೆನ್ನಿಗೆ ಮತ್ತೊಂದು ಭಯಹುಟ್ಟಿಸುವ ಘಟನೆ; ಹೆದರಿ ಠಾಣೆಯಲ್ಲೇ ಶಾಂತಿಪೂಜೆ ಮಾಡಿಸಿದ ಪೊಲೀಸರು
ಪೊಲೀಸ್​ ಠಾಣೆಯಲ್ಲಿ ನಡೆದ ಶಾಂತಿ ಪೂಜೆ
TV9kannada Web Team

| Edited By: Lakshmi Hegde

Mar 09, 2022 | 11:36 AM

ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯ ಅಲ್ಲಗಡ್ಡಾ ಪಟ್ಟಣದಲ್ಲಿರುವ ಪೊಲೀಸರು ಠಾಣೆಯಲ್ಲಿಯೇ ಭಾನುವಾರ ಶಾಂತಿಪೂಜೆ ಮಾಡಿಸಿದ್ದಾರೆ. ಈ ಪೂಜೆಯ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಠಾಣೆಯಲ್ಲಿ, ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ಅಪಶಕುನದ, ಭಯಹುಟ್ಟಿಸುವ ಕೆಲವು ಘಟನೆಗಳು ನಡೆಯುತ್ತಿದೆ. ಅವುಗಳನ್ನು ತಡೆಗಟ್ಟುವ ಸಲುವಾಗಿ ಈ ಶಾಂತಿ ಪೂಜೆ ಮಾಡಿಸಲಾಗಿದೆ ಎಂದು ಹೇಳಲಾಗಿದೆ.  ಪುರೋಹಿತರನ್ನು ಠಾಣೆಗೆ ಕರೆಸಿ ಪೂಜೆ ಮಾಡಿಸಲಾಗಿದೆ. ಪುರೋಹಿತರು ಮಂತ್ರ ಹೇಳುತ್ತಿರುವ, ಪೊಲೀಸರು ಕೈಮುಗಿದು ನಿಂತಿರುವ, ಕೊನೆಯಲ್ಲಿ ತೀರ್ಥ-ಪ್ರಸಾದ ತೆಗೆದುಕೊಂಡ ದೃಶ್ಯಗಳನ್ನು ವಿಡಿಯೋದಲ್ಲಿ ನೋಡಬಹುದು.

ಇತ್ತೀಚೆಗೆ ಈ ಠಾಣೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾನ್​ಸ್ಟೆಬಲ್​ವೊಬ್ಬರಿಗೆ ಹಾವು ಕಚ್ಚಿತ್ತು. ಕಳೆದ ಈ ಠಾಣೆಯ ವ್ಯಾಪ್ತಿಯಲ್ಲೇ ಇಬ್ಬರು ಹುಡುಗಿಯರನ್ನು ಅಪಹರಣ ಮಾಡಲಾಗಿತ್ತು. ರಸ್ತೆ ಅಪಘಾತವೂ ನಡೆದಿತ್ತು. ಪಡಕಂಡ್ಲ ಬಳಿ ವ್ಯಕ್ತಿಯೊಬ್ಬ ಹಲವು ಜನರ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದ್ದ. ಈ ಪ್ರದೇಶಗಳಲ್ಲಿ ರಾಜಕೀಯ ದ್ವೇಷದ ಪ್ರಕರಣಗಳೂ ಹೆಚ್ಚುತ್ತಿವೆ.  ಹೀಗೆ ಕಳೆದ ಕೆಲವುದಿನಗಳಿಂದಲೂ ಒಂದಲ್ಲ ಒಂದು ಕೇಸ್​ಗಳು ನಡೆಯುತ್ತಲೇ ಇವೆ. ಅದೆಲ್ಲ ಪರಿಹಾರವಾಗಲಿ ಎಂಬ ಕಾರಣಕ್ಕೆ ಪೊಲೀಸರು ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಭಾಗದಲ್ಲಿ ಏನೋ ಅಗೋಚರ ಕೆಟ್ಟ ಶಕ್ತಿಯೊಂದು ಪ್ರಭಾವ ಬೀರಿದೆ ಎಂಬ ಮಾತುಗಳೂ ಹೆಚ್ಚಾಗಿದ್ದವು. ಹಾಗಾಗಿ ಸ್ಥಳೀಯ ಪುರೋಹಿತರನ್ನು ಠಾಣೆಗೆ ಕರೆಸಿ ಪೂಜೆ ನೆರವೇರಿಸಲಾಗಿದೆ. ಠಾಣೆಯ ಎಲ್ಲ ಸಿಬ್ಬಂದಿಯೂ ಇದರಲ್ಲಿ ಪಾಲ್ಗೊಂಡಿದ್ದರು. ಪೊಲೀಸ್​ ಸ್ಟೇಶನ್​ನಲ್ಲಿ ನಡೆದ ಪೂಜೆಯ ಬಗ್ಗೆ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಬಗ್ಗೆ ಹಿರಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

Puja in Andhra Pradesh

ಆಂಧ್ರಪ್ರದೇಶ ಠಾಣೆಯಲ್ಲಿ ಪೂಜೆ

ಇದನ್ನೂ ಓದಿ: ಮಂಡ್ಯ: ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ! ವೇದಿಕೆಯಲ್ಲಿ ಬಾಲಕನಿಗೆ ಮುತ್ತಿಟ್ಟ ಮಹಿಳಾ ನೃತ್ಯಗಾರರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada