ಉಕ್ರೇನ್ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಮ್ಮೆಲೇ ಇಲ್ಲಿನ ಕಾಲೇಜುಗಳಲ್ಲಿ ಪ್ರವೇಶಾತಿ ನೀಡಲು ಸಾಧ್ಯವೇ ಇಲ್ಲ
ಉಕ್ರೇನ್ನಿಂದ ಶಿಕ್ಷಣ ಅರ್ಧ ಪಡೆದು ವಾಪಸ್ ಬಂದಿರುವ ವಿದ್ಯಾರ್ಥಿಗಳಿಗೆ ಯಾವುದೇ ಸಹಾಯ ಮಾಡಲು, ಅವರಿಗೆ ಪ್ರವೇಶ ನೀಡುವ ವಿಚಾರದಲ್ಲಿ ವಿಶ್ವವಿದ್ಯಾಲಯಗಳು ಏಕಮುಖವಾಗಿ ಅಥವಾ ಪ್ರತ್ಯೇಕ ನಿರ್ಧಾರ ಕೈಗೊಳ್ಳಲು ಸಾಧ್ಯವೇ ಇಲ್ಲ ಎಂದು ಡಾ. ಮಾಧುರಿ ಕಾನಿಟ್ಕರ್ ಹೇಳಿದ್ದಾರೆ.
ಉಕ್ರೇನ್ನಿಂದ (Ukraine) ಇದೀಗ ವಾಪಸ್ ಬಂದಿರುವ ಭಾರತದ ವಿದ್ಯಾರ್ಥಿಗಳಿಗೆ, ಅವರ ಶಿಕ್ಷಣ ಮುಂದುವರಿಸಲು ಒಮ್ಮೆಲೇ ಭಾರತದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಸಿಗುವುದಿಲ್ಲ ಎಂದು ನಾಸಿಕ್ ಮೂಲದ ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (MUHS) ಉಪಕುಲಪತಿ ಡಾ. ಮಾಧುರಿ ಕಾನಿಟ್ಕರ್ (ನಿವೃತ್ತ ಲೆಫ್ಟಿನೆಂಟ್ ಜನರಲ್) ತಿಳಿಸಿದ್ದಾರೆ. ಆದರೆ ಅವರ ಕಲಿಕೆಯನ್ನು ಮುಂದುವರಿಸಲು ಹೇಗೆಲ್ಲ ಆಯ್ಕೆಗಳಗಳನ್ನು ನೀಡಬಹುದು ಎಂಬುದನ್ನು ಶಿಕ್ಷಣ ಕ್ಷೇತ್ರದ ಅಧಿಕಾರಿಗಳು ಅನ್ವೇಷಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರಷ್ಯಾ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್ನಿಂದ ಸಾವಿರಾರು ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ. ಆದರೆ ನಮ್ಮ ಕಾಲೇಜುಗಳಲ್ಲಿ ಅವರಿಗೆ ತತ್ಕ್ಷಣವೇ ಪ್ರವೇಶ ಕಲ್ಪಿಸಲು ಸಾಧ್ಯವೇ ಇಲ್ಲ. ಭಾರತದ ವೈದ್ಯಕೀಯ ಕಾಲೇಜುಗಳಿಗೆ ಮೆರಿಟ್ ಆಧಾರದಲ್ಲಿ ಪ್ರವೇಶ ಪಡೆದವರು ಇದ್ದಾರೆ. ಇಲ್ಲಿಯದೇ ಆದ ನಿಯಮಗಳು ಇವೆ. ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಆ ನಿಯಮಗಳನ್ನು ಸಡಿಲಗೊಳಿಸಲು ಸಾಧ್ಯವಿಲ್ಲ. ಇನ್ನು ಉಕ್ರೇನ್ನಿಂದ ಈಗ ಹಿಂದಿರುಗಿರುವ ವಿದ್ಯಾರ್ಥಿಗಳು ಅಲ್ಲಿನ ಯೂನಿರ್ವಸಿಟಿಗಳಲ್ಲಿ ಕಲಿತವರು. ಅಲ್ಲಿ ಪಠ್ಯಕ್ರಮ, ಬೋಧನಾ ವಿಧಾನಗಳಲ್ಲೆ ವಿಭಿನ್ನವಾಗಿದೆ. ಹಾಗಿದ್ದಾಗ್ಯೂ ಆ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಮತ್ತೆ ಏನಾದರೂ ವ್ಯವಸ್ಥೆ ಮಾಡುವವರೆಗೆ ಅವರ ಶಿಕ್ಷಣಕ್ಕೆ ಅನುಕೂಲವಾಗುವಂತೆ ನಾವೇನಾದರೂ ಮಾಡಬಹುದಾ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಾ. ಕಾನಿಟ್ಕರ್ ತಿಳಿಸಿದ್ದಾರೆ.
ಉಕ್ರೇನ್ನಿಂದ ಶಿಕ್ಷಣ ಅರ್ಧ ಪಡೆದು ವಾಪಸ್ ಬಂದಿರುವ ವಿದ್ಯಾರ್ಥಿಗಳಿಗೆ ಯಾವುದೇ ಸಹಾಯ ಮಾಡಲು, ಅವರಿಗೆ ಪ್ರವೇಶ ನೀಡುವ ವಿಚಾರದಲ್ಲಿ ವಿಶ್ವವಿದ್ಯಾಲಯಗಳು ಏಕಮುಖವಾಗಿ ಅಥವಾ ಪ್ರತ್ಯೇಕ ನಿರ್ಧಾರ ಕೈಗೊಳ್ಳಲು ಸಾಧ್ಯವೇ ಇಲ್ಲ. ಸಮಸ್ಯೆ ಪರಿಹಾರ ಮಾಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಒಂದಷ್ಟು ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಉಕ್ರೇನ್ನಿಂದ ಬಂದಿರುವವರಲ್ಲಿ ತಮ್ಮ ಶಿಕ್ಷಣದ ಬಗ್ಗೆ ಆತಂಕ ಇದ್ದೇ ಇರುತ್ತದೆ. ಅದನ್ನು ಪರಿಹರಿಸುವ ದೃಷ್ಟಿಯಿಂದ ನಾವೆಲ್ಲ ಪ್ರಯತ್ನ ಮಾಡುತ್ತಿದ್ದು, ಏನು ಸಾಧ್ಯವೋ ಅದನ್ನು ಆದಷ್ಟು ಬೇಗ ಮಾಡುತ್ತೇವೆ ಎಂದು ಡಾ. ಮಾಧುರಿ ತಿಳಿಸಿದ್ದಾರೆ. ಇನ್ನು ನಾವು ಈಗಾಗಲೇ ಮಹಾರಾಷ್ಟ್ರ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ವೆಬ್ಸೈಟ್ನಲ್ಲಿ ಒಂದು ಫಾರ್ಮ್ ಬಿಡುಗಡೆ ಮಾಡಿದ್ದೇವೆ ಮತ್ತು ಈ ವಿಚಾರದಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ತಿಳಿಸುವಂತೆ ಕೇಳಿದ್ದೇವೆ. ಈಗಾಗಲೇ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಈಗ ಎಷ್ಟು ವಿದೇಶಿಗರು ವಾಸಿಸುತ್ತಿದ್ದಾರೆ ಗೊತ್ತಾ? ಯಾವ ದೇಶದ ಪ್ರಜೆಗಳು ಇಲ್ಲಿ ಹೆಚ್ಚಿದ್ದಾರೆ?
Published On - 9:13 am, Wed, 9 March 22