Pee-Gate: ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಿ ಶಂಕರ್ ಮಿಶ್ರಾಗೆ 4 ತಿಂಗಳು ವಿಮಾನಯಾನ ನಿಷೇಧ

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕ ಶಂಕರ್ ಮಿಶ್ರಾಗೆ ಏರ್ ಇಂಡಿಯಾ ನಾಲ್ಕು ತಿಂಗಳ ವಿಮಾನಯಾನವನ್ನು ನಿಷೇಧ ಮಾಡಿದೆ.

Pee-Gate: ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಿ ಶಂಕರ್ ಮಿಶ್ರಾಗೆ 4 ತಿಂಗಳು ವಿಮಾನಯಾನ ನಿಷೇಧ
ಶಂಕರ್ ಮಿಶ್ರಾ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 19, 2023 | 5:05 PM

ದೆಹಲಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕ ಶಂಕರ್ ಮಿಶ್ರಾಗೆ (shankar mishra) ಏರ್ ಇಂಡಿಯಾ ನಾಲ್ಕು ತಿಂಗಳ ವಿಮಾನಯಾನವನ್ನು ನಿಷೇಧ ಮಾಡಿದೆ. ನವೆಂಬರ್ 26 ರಂದು ನ್ಯೂಯಾರ್ಕ್​ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಶಂಕರ್ ಮಿಶ್ರಾಗೆ ಏರ್‌ಲೈನ್ಸ್ ನಾಲ್ಕು ತಿಂಗಳ ಕಾಲ ನಿಷೇಧ ಹೇರಿದೆ. ಶಂಕರ್ ಮಿಶ್ರಾ ಅವರು ವಿಮಾನದಲ್ಲಿ 70 ವರ್ಷದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈತನ ಕ್ರೂರ ಕೃತ್ಯದ ಆರು ವಾರಗಳ ನಂತರ ಆತನನ್ನು ಕಳೆದ ವಾರ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.

ತ್ವರಿತ ಕ್ರಮ ಕೈಗೊಳ್ಳದ ಕಾರಣ ಏರ್ ಇಂಡಿಯಾ ಭಾರೀ ಟೀಕೆಗೆ ಗುರಿಯಾಗಿತ್ತು. ದೆಹಲಿಯಲ್ಲಿ ವಿಮಾನ ಇಳಿದಾಗ ಮಿಶ್ರಾ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಏರ್‌ಲೈನ್ಸ್ ಜನವರಿ 4 ರಂದು ಪೊಲೀಸ್ ದೂರು ದಾಖಲಿಸಿದೆ, ಎರಡೂ ಕಡೆಯವರು ವಿಷಯವನ್ನು ಇತ್ಯರ್ಥಪಡಿಸಿದ್ದಾರೆ ಎಂದು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: Air India: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ; ಕ್ಷಮೆ ಕೋರಿದ ಏರ್​ ಇಂಡಿಯಾ ಸಿಇಒ

ನ್ಯೂಯಾರ್ಕ್​​ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಏರ್​ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ ಆಸನ ವಿಭಾಗದಲ್ಲಿ ಕುಡಿದ ಅಮಲಿನಲ್ಲಿ ಶಂಕರ್ ಮಿಶ್ರಾ ಎಂಬ ವ್ಯಕ್ತಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಜನವರಿ 4ರಂದು ಸಂತ್ರಸ್ತ ಮಹಿಳೆ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕನ ವಿಚಾರ ಬಹಿರಂಗಪಡಿಸಿದ್ದರು. ವಿಮಾನದ ಸಿಬ್ಬಂದಿ ಕೂಡ ಉತ್ತಮವಾಗಿ ಸ್ಪಂದಿಸಿರಲಿಲ್ಲ ಎಂದು ದೂರಿದ್ದರು. ಈ ವಿಚಾರ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಆರೋಪ ಎದುರಿಸುತ್ತಿರುವ ಮುಂಬೈನ ವ್ಯಕ್ತಿ ಶಂಕರ್ ಮಿಶ್ರಾ ಅವರನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಈ ಮಧ್ಯೆ ಶಂಕರ್​ ಅನ್ನು ವೆಲ್ಸ್​ ಫಾರ್ಗೋ ಕಂಪನಿಯು  ಕೆಲಸದಿಂದ ವಜಾಗೊಳಿಸಿದೆ. ನಮ್ಮ ಉದ್ಯೋಗಿಗಳು ವೃತ್ತಿಪರ ಹಾಗೂ ವೈಯಕ್ತಿಕವಾಗಿ ಉತ್ತಮ ನಡವಳಿಕೆಯನ್ನು ಹೊಂದಿದ್ದಾರೆ, ಇವರ ಮೇಲಿನ ಆರೋಪಗಳು ಕಂಪನಿಗೆ ಕೆಟ್ಟ ಹೆಸರನ್ನು ತಂದಿದೆ ಹೀಗಾಗಿ ಅವರನ್ನು ಕೆಲಸದಿಂದ ವಜಾ ಮಾಡುತ್ತಿರುವುದಾಗಿ ಕಂಪನಿ ಹೇಳಿಕೆಯಲ್ಲಿ ತಿಳಿಸಿತ್ತು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Thu, 19 January 23