ಅಗ್ನಿಪಥ್ ಖಾಯಂ ಕೆಲಸವಲ್ಲ, ಅಂಥಾ ಯುವಕರನ್ನು ಯಾರು ಮದುವೆ ಆಗ್ತಾರೆ ಅಂತಿದ್ದಾರೆ ಜನ: ಜಯಂತ್ ಚೌಧರಿ

ಹಳ್ಳಿಗಳಲ್ಲಿ ಈಗ ಯಾರೂ ನಮ್ಮ ಮಕ್ಕಳನ್ನು ಮದುವೆಯಾಗುವುದಿಲ್ಲ' ಎಂದು ಜನರು ಹೇಳುತ್ತಾರೆ. ಇವು ಖಾಯಂ ಕೆಲಸ ಅಲ್ಲ. ಸರ್ಕಾರವು ಉದ್ದೇಶಪೂರ್ವಕವಾಗಿ ನೇಮಕಾತಿಯನ್ನು ವಿಳಂಬಗೊಳಿಸುತ್ತಿದೆ ಎಂದು ಜನರು ಹೇಳುತ್ತಿದ್ದಾರೆ...

ಅಗ್ನಿಪಥ್ ಖಾಯಂ ಕೆಲಸವಲ್ಲ, ಅಂಥಾ ಯುವಕರನ್ನು ಯಾರು ಮದುವೆ ಆಗ್ತಾರೆ ಅಂತಿದ್ದಾರೆ ಜನ: ಜಯಂತ್ ಚೌಧರಿ
ಜಯಂತ್ ಚೌಧರಿ
Edited By:

Updated on: Jun 17, 2022 | 9:50 PM

ದೆಹಲಿ : ಹಿಂಸಾಚಾರವನ್ನು ದೂರವಿಟ್ಟು ಸಂಘಟಿತರಾಗುವಂತೆ ಪ್ರತಿಭಟನಾಕಾರರನ್ನು ಒತ್ತಾಯಿಸಿದ ರಾಜ್ಯಸಭಾ ಸದಸ್ಯ ಜಯಂತ್ ಚೌಧರಿ (Jayant Chaudhary) ಅವರು ಅಗ್ನಿಪಥ್ ಯೋಜನೆಯನ್ನು (Agnipath) ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಅದು ಮಾತ್ರ ತರ್ಕಬದ್ಧ ಆಯ್ಕೆಯಾಗಿದೆ ಎಂದು ಆರ್​​ಎಲ್​​ಡಿ (RLD) ನಾಯಕ ಹೇಳಿದ್ದಾರೆ. ಈ ಬಗ್ಗೆ ಎನ್‌ಡಿಟಿವಿಯೊಂದಿಗೆ ಮಾತನಾಡಿದ ಚೌಧರಿ, “ಈಗ ಹತಾಶರಾಗಿರುವ” ಪ್ರತಿಭಟನಾ ಆಕಾಂಕ್ಷಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಸರ್ಕಾರವು ಸಂವೇದನಾಶೀಲವಾಗಿರಬೇಕು ಎಂದು ಹೇಳಿದರು. “2019 ರಿಂದ ಯಾವುದೇ ಸೇನಾ ನೇಮಕಾತಿ ನಡೆದಿಲ್ಲ. ಯುವಕರು ಈಗಾಗಲೇ ಹತಾಶರಾಗಿದ್ದಾರೆ. ನಾಲ್ಕು ವರ್ಷಗಳ ನೇಮಕಾತಿ ಯೋಜನೆಯು ಅದನ್ನು ಇನ್ನಷ್ಟು ಹದಗೆಡಿಸಿದೆ” ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ನೇತೃತ್ವದ ಮೈತ್ರಿಕೂಟದ ಭಾಗವಾದ ಚೌಧರಿ ಹೇಳಿದರು. ಹಳ್ಳಿಗಳಲ್ಲಿ ಈಗ ಯಾರೂ ನಮ್ಮ ಮಕ್ಕಳನ್ನು ಮದುವೆಯಾಗುವುದಿಲ್ಲ’ ಎಂದು ಜನರು ಹೇಳುತ್ತಾರೆ. ಇವು ಖಾಯಂ ಕೆಲಸ ಅಲ್ಲ. ಸರ್ಕಾರವು ಉದ್ದೇಶಪೂರ್ವಕವಾಗಿ ನೇಮಕಾತಿಯನ್ನು ವಿಳಂಬಗೊಳಿಸುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ದೀರ್ಘ ಅಂತರದ ಕಾರಣ ಹೆಚ್ಚು ಹತಾಶ ಆಕಾಂಕ್ಷಿಗಳು ಇರುತ್ತಾರೆ ಎಂದು ಸರ್ಕಾರ ಭಾವಿಸಿದೆ. ಯೋಜನೆ ಬಂದ ನಂತರ ಬೆಂಬಲ ಸಿಗಬಹುದು ಎಂದು ಅವರು ಭಾವಿಸಿದ್ದರು. ಆದರೆ ಇಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಸಂಭವಿಸಿದೆ ಎಂದು ಚೌಧರಿ ಹೇಳಿದ್ದಾರೆ.

ಜೂನ್ 14 ರಂದು ಘೋಷಿಸಲಾದ ಈ ಯೋಜನೆಯು ಹದಿನೇಳೂವರೆಯಿಂದ 21 ವರ್ಷ ವಯಸ್ಸಿನ ಯುವಕ-ಯುವತಿಯರನ್ನು ನಾಲ್ಕು ವರ್ಷಗಳವರೆಗೆ ಎಲ್ಲಾ ಮೂರು ಸೇವೆಗಳಿಗೆ ನೇಮಿಸಿಕೊಳ್ಳುತ್ತದೆ, ನಂತರ 15 ವರ್ಷಗಳ ನಿಯಮಿತ ಕಮಿಷನ್‌ಗೆ ಶೇಕಡಾ 25 ರನ್ನು ನೇಮಕ ಮಾಡಿಕೊಳ್ಳಬಹುದು. ಕೊವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳಿಂದ ಯಾವುದೇ ನೇಮಕಾತಿಗಳಿಲ್ಲದ ಕಾರಣ ಸರ್ಕಾರವು ಈ ವರ್ಷಕ್ಕೆ ಗರಿಷ್ಠ ವಯಸ್ಸಿನ ಮಿತಿಯನ್ನು 23 ಕ್ಕೆ ಏರಿಸಿದೆ.

ಶೇ 25 ಮಂದಿಯನ್ನು ಹೇಗೆ ಆಯ್ಕೆ ಮಾಡುತ್ತಾರೆ ಎಂಬುದರ ಮಾನದಂಡಗಳು ಸಹ ಸ್ಪಷ್ಟವಾಗಿಲ್ಲ. ಸರ್ಕಾರವು ಯೋಜನೆಯಡಿಯಲ್ಲಿ ಈ ವರ್ಷ ಸುಮಾರು 40,000 ನೇಮಕಾತಿಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಆದ್ದರಿಂದ ಮೂಲಭೂತವಾಗಿ ಸುಮಾರು 10,000 ಮಂದಿಗೆ ಮಾತ್ರ ಖಾಯಂ ಉದ್ಯೋಗಗಳು ಸಿಗುತ್ತವೆ. ಅದಕ್ಕೆ ಕೂಡಾ ಇನ್ನೊಂದು ನಾಲ್ಕು ವರ್ಷಗಳು ಕಾಯಬೇಕು.ಇದನ್ನು 2019 ಕ್ಕೆ ಹೋಲಿಸಿ ನೋಡಿ ಆಗ 80,000 ಜನರನ್ನು ನೇರವಾಗಿ ನಿಯಮಿತ ಕಮಿಷನ್‌ಗಾಗಿ ನೇಮಿಸಲಾಯಿತು.” ಈ ಯೋಜನೆಯನ್ನು “ದುಡುಕು ನಿರ್ಧಾರಗಳ” ಫಲಿತಾಂಶ ಎಂದು ಕರೆದ ಅವರು, “ನಾವು ಚೀನಾಕ್ಕೆ ಕಳುಹಿಸುತ್ತಿರುವ ಸಂಕಷ್ಟದ ಸಂಕೇತಗಳನ್ನು ನೋಡಿ” ಎಂದಿದ್ದಾರೆ.

ಇದನ್ನೂ ಓದಿ
ಅಗ್ನಿಪಥ್ ವಿರುದ್ಧ ಪ್ರತಿಭಟನೆ: ಹರ್ಯಾಣದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ, ದೆಹಲಿಯಲ್ಲಿ ಬಸ್ ಮೇಲೆ ಕಲ್ಲು ತೂರಾಟ
Agnipath scheme ಅಗ್ನಿಪಥ್ ನೇಮಕಾತಿ ಯೋಜನೆಯಡಿಯಲ್ಲಿ ಆಯ್ಕೆಯಾದವರಿಗೆ ಡಿಸೆಂಬರ್​​ನಲ್ಲಿ ತರಬೇತಿ ಆರಂಭ
ಅಗ್ನಿಪಥವೋ ಅಥವಾ ಅಗ್ನಿಕುಂಡವೋ -ಮತ್ತೊಂದು CAA, Farm laws ಆಗದಿದ್ದರೆ ಸಾಕು, ಆಗುಹೋಗುಗಳ ವಿಶ್ಲೇಷಣೆ ಇಲ್ಲಿದೆ
Agnipath Scheme Protest ಅಗ್ನಿಪಥ್ ಆಕ್ರೋಶ ತೀವ್ರ: ಸಿಕಂದರಾಬಾದ್​​​ನಲ್ಲಿ 1 ಸಾವು, 8 ಮಂದಿಗೆ ಗಾಯ; 200 ರೈಲುಗಳಿಗೆ ಹಾನಿ

ಇದು ವೆಚ್ಚ ಕಡಿತ ಯೋಜನೆ ಎಂಬ ವರದಿಯ ತರ್ಕವು ಅರ್ಥಪೂರ್ಣವಾಗಿದೆಯೇ? ಎಂದು ಕೇಳಿದಾಗ ಸರ್ಕಾರವು ಏನು ಮತ್ತು ಎಷ್ಟು ಉಳಿಸುತ್ತದೆ ಎಂಬುದರ ಕುರಿತು ಯಾವುದೇ ಡೇಟಾವನ್ನು ನೀಡಲಾಗಿಲ್ಲ.ಅವರಿಗೆ ಇಂಥಾ ಐಡಿಯಾಗಳನ್ನು ನೀಡಬೇಡಿ ಅವರು ಮತ್ತೊಂದು ಪ್ರಚಾರಕ್ಕಾಗಿರುವ ವ್ಯವಸ್ಥಿತ ಯೋಜನೆಯೊಂದಿಗೆ ಬರುತ್ತಾರೆ ಎಂದಿದ್ದಾರೆ ಚೌಧರಿ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 9:45 pm, Fri, 17 June 22