ರಷ್ಯಾ ಅಧ್ಯಕ್ಷ ಪುಟಿನ್ 73ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರಧಾನಿ ಮೋದಿ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 73ನೇ ಹುಟ್ಟುಹಬ್ಬದಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಪುಟಿನ್ ಅವರಿಗೆ ಕರೆ ಮಾಡಿದ ಮೋದಿ ಭಾರತ-ರಷ್ಯಾ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪ್ರಮುಖ ಕ್ಷೇತ್ರಗಳಲ್ಲಿ ಸಹಯೋಗವನ್ನು ಮತ್ತಷ್ಟು ವಿಸ್ತರಿಸಲು ಮೋದಿ ಪ್ರತಿಜ್ಞೆ ಮಾಡಿದ್ದಾರೆ. ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ರಷ್ಯಾದ ನಾಯಕರಿಗೆ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್ 73ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರಧಾನಿ ಮೋದಿ
Pm Modi With Putin

Updated on: Oct 07, 2025 | 7:48 PM

ನವದೆಹಲಿ, ಅಕ್ಟೋಬರ್ 7: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು (ಅಕ್ಟೋಬರ್ 7) ರಷ್ಯಾದ ನಾಯಕರ 73ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Putin) ಅವರೊಂದಿಗೆ ಫೋನ್​ನಲ್ಲಿ ಮಾತನಾಡಿದ್ದಾರೆ. ಪುಟಿನ್ ಜೊತೆಗಿನ ಮಾತುಕತೆಯ ಸಮಯದಲ್ಲಿ ಪ್ರಧಾನಿ ಮೋದಿ ರಷ್ಯಾದ ಅಧ್ಯಕ್ಷ ಪುಟಿನ್ ಅವರಿಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ನಿರಂತರ ಯಶಸ್ಸನ್ನು ಕೋರಿದರು.

ಈ ವೇಳೆ ಭಾರತ ಮತ್ತು ರಷ್ಯಾದ ನಡುವಿನ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಬೆಂಬಲಿಸುತ್ತಿರುವ ತಮ್ಮ ವೈಯಕ್ತಿಕ ಬಾಂಧವ್ಯ ಮತ್ತು ದೀರ್ಘಕಾಲದ ಸ್ನೇಹವನ್ನು ಪುನರುಚ್ಚರಿಸುವ ಮೂಲಕ ಇಬ್ಬರೂ ನಾಯಕರು ಆತ್ಮೀಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಇದನ್ನೂ ಓದಿ: ವಸಾಹತುಶಾಹಿ ಯುಗ ಮುಗಿಯಿತು, ಭಾರತ ದೈತ್ಯ ಆರ್ಥಿಕತೆ; ಟ್ರಂಪ್ ಸುಂಕದ ಬೆನ್ನಲ್ಲೇ ಪುಟಿನ್ ಮಹತ್ವದ ಹೇಳಿಕೆ

ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವುದು, ಜಾಗತಿಕ ಕ್ರಮಕ್ಕಾಗಿ ತಮ್ಮ ಹಂಚಿಕೆಯ ದೃಷ್ಟಿಕೋನವನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಬಹು ವಲಯಗಳಲ್ಲಿ ಸಹಕಾರವನ್ನು ಮತ್ತಷ್ಟು ಆಳಗೊಳಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.


23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗೆ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಈ ವೇಳೆ ತಿಳಿಸಿದರು. ಈ ವರ್ಷದ ಕೊನೆಯಲ್ಲಿ ನಡೆಯುವ ಈ ಶೃಂಗಸಭೆಯು ಎರಡೂ ದೇಶಗಳ ನಡುವಿನ ದೀರ್ಘಕಾಲೀನ ಪಾಲುದಾರಿಕೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ.

ಇದನ್ನೂ ಓದಿ: ಉಕ್ರೇನ್ ಯುದ್ಧದ ಶಾಂತಿಯುತ ಪರಿಹಾರಕ್ಕೆ ಕೊಡುಗೆ ನೀಡಲು ಭಾರತ ಸಿದ್ಧ; ಪುಟಿನ್​ಗೆ ಪ್ರಧಾನಿ ಮೋದಿ ಸಂದೇಶ

ಕಳೆದ ವಾರ ಪುಟಿನ್ ಅವರು ಭಾರತಕ್ಕೆ ತಮ್ಮ ಭೇಟಿಯನ್ನು ದೃಢಪಡಿಸಿದ್ದರು. “ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ಡಿಸೆಂಬರ್ ಆರಂಭದಲ್ಲಿ ಭಾರತಕ್ಕೆ ನಾನು ಭೇಟಿ ನೀಡಲಿದ್ದೇನೆ” ಎಂದು ಸುದ್ದಿಗಾರರಿಗೆ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ