ಗ್ಯಾಸ್ ಸಿಲಿಂಡರ್ ಬೆಲೆ ಇಳಿಸುವ ಮೂಲಕ ಪ್ರಧಾನಿ ಮೋದಿ ನವರಾತ್ರಿಯ ಖುಷಿ ಹೆಚ್ಚಿಸಿದ್ದಾರೆ: ಧರ್ಮೇಂದ್ರ ಪ್ರಧಾನ್
Dharmendra Pradhan: ಸರ್ಕಾರದ ಈ ನಿರ್ಧಾರದ ಕುರಿತು ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಕೇಂದ್ರ ಸರ್ಕಾರವು ಉಜ್ವಲ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮತ್ತೆ 100 ರೂ. ಇಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ನಿರ್ಧಾರದಿಂದ ದೇಶದ ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರ ನವರಾತ್ರಿ ಮತ್ತು ಇತರ ಹಬ್ಬಗಳ ಹೊಳಪು ಹೆಚ್ಚಿದೆ.
ದೆಹಲಿ ಅಕ್ಟೋಬರ್ 05: ಪಿಎಂ ಉಜ್ವಲ ಯೋಜನೆಯ (PM Ujjwala Yojana) ಫಲಾನುಭವಿಗಳಿಗೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಸಿಗುವ ಸಬ್ಸಿಡಿ (LPG price subsidy) ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. 200 ರೂನಷ್ಟು ನೀಡಲಾಗುತ್ತಿದ್ದ ಸಬ್ಸಿಡಿಯನ್ನು 300 ರುಪಾಯಿಗೆ ಏರಿಸಲಾಗಿದೆ. ಕೇಂದ್ರ ಸಂಪುಟ ಬುಧವಾರ ತೆಗೆದುಕೊಂಡ ನಿರ್ಧಾರಗಳಲ್ಲಿ ಇದೂ ಒಂದಾಗಿದೆ. ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್‌ಪಿಜಿ ಸಬ್ಸಿಡಿ ಏರಿಸಿರುವ ವಿಚಾರವನ್ನು ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರದ ಕುರಿತು ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಕೇಂದ್ರ ಸರ್ಕಾರವು ಉಜ್ವಲ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮತ್ತೆ 100 ರೂ. ಇಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ನಿರ್ಧಾರದಿಂದ ದೇಶದ ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರ ನವರಾತ್ರಿ ಮತ್ತು ಇತರ ಹಬ್ಬಗಳ ಹೊಳಪು ಹೆಚ್ಚಿದೆ. ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ, ರಾಖಿ ಉಡುಗೊರೆಯಾಗಿ 200 ರೂಪಾಯಿ ರಿಯಾಯಿತಿ ಮತ್ತು ನಿನ್ನೆಯ ಕ್ಯಾಬಿನೆಟ್ ನಿರ್ಧಾರದಲ್ಲಿ 100 ರೂಪಾಯಿ ಕಡಿಮೆ ಮಾಡಿ ನಂತರ ಈಗ ಒಟ್ಟಾರೆ ಎಲ್‌ಪಿಜಿ ಉಜ್ವಲ ಫಲಾನುಭವಿಗಳಿಗೆ 500 ರೂಪಾಯಿಗಳಷ್ಟು ಅಗ್ಗವಾಗಿದೆ ಎಂದು ಹೇಳಿದರು.
उज्ज्वला लाभार्थियों के लिए गैस सिलिंडर के दाम में फिर 100₹ कटौती कर के प्रधानमंत्री @narendramodi जी ने करोड़ों माताओं-बहनों के लिए नवरात्रि और अन्य त्योहारों की रौनक़ बढ़ाई है।
प्रति सिलिंडर 200₹ की सब्सिडी, राखी पर 200₹ की कटौती की सौग़ात और कल कैबिनेट के निर्णय में 100₹… pic.twitter.com/owXC0sA0Nk
— Dharmendra Pradhan (@dpradhanbjp) October 5, 2023
ಇದರೊಂದಿಗೆ 2014ರಲ್ಲಿ ಗ್ಯಾಸ್ ಸಿಲಿಂಡರ್‌ಗಳು ಲಭ್ಯವಿದ್ದ ದರದಲ್ಲಿಯೇ ಇಂದು 2023ರಲ್ಲಿ ಉಜ್ವಲಾ ತಾಯಂದಿರು ಮತ್ತು ಸಹೋದರಿಯರಿಗೆ ಬಹುತೇಕ ಅದೇ ದರದಲ್ಲಿ ಗ್ಯಾಸ್ ಸಿಲಿಂಡರ್ ಲಭ್ಯವಾಗಲಿದೆ ಎಂದು ಹೇಳಿದರು. ಈ ನಿರ್ಧಾರವು ಬಡವರು, ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳು ಮತ್ತು ವಂಚಿತ ವರ್ಗಗಳ ಹಿತಾಸಕ್ತಿ, ಸ್ವಾಭಿಮಾನ ಮತ್ತು ಘನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರದ ಸೂಕ್ಷ್ಮತೆ ಮತ್ತು ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಪಿಎಂ ಉಜ್ವಲ ಯೋಜನೆ ಅಡಿ ಎಲ್ಪಿಜಿಗೆ ಸಬ್ಸಿಡಿ ಮೊತ್ತ 200 ರೂನಿಂದ 300 ರೂಗೆ ಹೆಚ್ಚಳ
ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ನಿನ್ನೆ ಅಂದರೆ ಅಕ್ಟೋಬರ್ 4 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಸಭೆ ನಡೆದಿದ್ದು, ಇದರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಹಾಯಧನದ ಮೊತ್ತವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಏನಿದು ಪಿಎಂ ಉಜ್ವಲ ಯೋಜನೆ?
ಪ್ರತಿಯೊಂದು ಮನೆಗೂ ಎಲ್‌ಪಿಜಿ ಸಂಪರ್ಕ ಕಲ್ಪಿಸಬೇಕೆಂಬ ಸರ್ಕಾರದ ಮಹದ್ಗುರಿ ಹಿನ್ನೆಲೆಯಲ್ಲಿ ಪಿಎಂ ಉಜ್ವಲ ಯೋಜನೆಯನ್ನು ರೂಪಿಸಲಾಗಿದೆ. 2016ರಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಎಲ್‌ಪಿಜಿ ಸಂಪರ್ಕ ಕಲ್ಪಿಸುವುದರೊಂದಿಗೆ ಯೋಜನೆ ಚಾಲನೆಗೊಂಡಿತು. 2021ರಲ್ಲಿ ಎರಡನೇ ಹಂತದ ಉಜ್ವಲ ಸ್ಕೀಮ್ ಅನ್ನು ಚಾಲನೆಗೆ ತರಲಾಯಿತು. ಕೆಲಸಕ್ಕೆಂದು ಬೇರೆ ರಾಜ್ಯಗಳಿಗೆ ವಲಸೆ ಹೋದ ಕುಟುಂಬದವರಿಗೂ ಕೂಡ ಯೋಜನೆ ಸಿಗುವಂತೆ ಮಾಡಲಾಗಿದೆ.
ಉಚಿತವಾಗಿ ಎಲ್‌ಪಿಜಿ ಸಂಪರ್ಕದ ಜೊತೆಗೆ ಮೊದಲ ಸಿಲಿಂಡರ್ ಕೂಡ ಉಚಿತವಾಗಿ ಸಿಗುತ್ತದೆ. ಈಗ ಪ್ರತೀ ಸಿಲಿಂಡರ್‌ಗೆ 300 ರೂನಷ್ಟು ಸಬ್ಸಿಡಿ ಸಿಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ