ರೈಲು ಪ್ರಯಾಣಿಕರು ಒಂದೊಮ್ಮೆ ಮನೆಯಲ್ಲೇ ಔಷಧಿ ಮರೆತು ಹೋದರೆ ಇನ್ಮುಂದೆ ಚಿಂತಿಸಬೇಕಿಲ್ಲ

|

Updated on: Nov 14, 2024 | 8:04 AM

ಒಂದೊಮ್ಮೆ ರೈಲು ಪ್ರಯಾಣಿಕರು ಮನೆಯಲ್ಲೇ ಔಷಧಿಯನ್ನು ಮರೆತುಬಂದಿದ್ದರೆ ಚಿಂತಿಸಬೇಕಿಲ್ಲ, ಅದಕ್ಕೆ ಪರಿಹಾರವನ್ನು ರೈಲ್ವೆ ಇಲಾಖೆ ನೀಡಲಿದೆ. ಪ್ರಯಾಣಕ್ಕಾಗಿ ಪ್ಯಾಕಿಂಗ್ ಮಾಡುವಾಗ ಕೆಲವೊಮ್ಮೆ ಅಗತ್ಯ ವಸ್ತುಗಳು ಮರೆತೇ ಹೋಗುತ್ತವೆ ಅದರಲ್ಲಿ ಔಷಧಿ ಕೂಡ ಒಂದು

ರೈಲು ಪ್ರಯಾಣಿಕರು ಒಂದೊಮ್ಮೆ ಮನೆಯಲ್ಲೇ ಔಷಧಿ ಮರೆತು ಹೋದರೆ ಇನ್ಮುಂದೆ ಚಿಂತಿಸಬೇಕಿಲ್ಲ
ರೈಲ್ವೆ ನಿಲ್ದಾಣ
Follow us on

ಒಂದೊಮ್ಮೆ ರೈಲು ಪ್ರಯಾಣಿಕರು ಮನೆಯಲ್ಲೇ ಔಷಧಿಯನ್ನು ಮರೆತುಬಂದಿದ್ದರೆ ಚಿಂತಿಸಬೇಕಿಲ್ಲ, ಅದಕ್ಕೆ ಪರಿಹಾರವನ್ನು ರೈಲ್ವೆ ಇಲಾಖೆ ನೀಡಲಿದೆ. ಪ್ರಯಾಣಕ್ಕಾಗಿ ಪ್ಯಾಕಿಂಗ್ ಮಾಡುವಾಗ ಕೆಲವೊಮ್ಮೆ ಅಗತ್ಯ ವಸ್ತುಗಳು ಮರೆತೇ ಹೋಗುತ್ತವೆ ಅದರಲ್ಲಿ ಔಷಧಿ ಕೂಡ ಒಂದು. ಬೆಳಗ್ಗೆ ತಿಂಡಿ ತಿಂದಾಗ ಅಥವಾ ರಾತ್ರಿ ಊಟ ಮಾಡಿದ ಬಳಿಕ ಮಾತ್ರೆ ತೆಗೆದುಕೊಳ್ಳಬೇಕಿತ್ತು ಎಂಬುದು ನೆನಪಾಗುತ್ತದೆ. ಆಗ ಒಂದೊಮ್ಮೆ ಮಾತ್ರೆ ತೆಗೆದುಕೊಳ್ಳದಿದ್ದರೆ ಏನಾಗಬಹುದು ಎನ್ನುವ ಆತಂಕವೂ ಶುರುವಾಗುತ್ತದೆ. ಆದರೆ ಇನ್ನು ಅದಕ್ಕೆ ಚಿಂತಿಸಬೇಕಿಲ್ಲ.

ಭಾರತೀಯ ರೈಲ್ವೆಯು ದೇಶಾದ್ಯಂತ 18 ನಿಲ್ದಾಣಗಳಲ್ಲಿ ವಿಶೇಷ ವ್ಯವಸ್ಥೆಯನ್ನು ಮಾಡಲಿದೆ. ಜನೌಷಧಿ ಕೇಂದ್ರಗಳನ್ನು ತೆರೆಯಲಿದೆ. ಈ ಕೇಂದ್ರಗಳಲ್ಲಿ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ಸೇರಿವೆ. ಈ ಹಿಂದೆ ಪ್ರಾಯೋಗಿಕ ಯೋಜನೆಯಾಗಿ 61 ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅವು ಯಶಸ್ವಿಯಾಗಿ ನಡೆಯುತ್ತಿವೆ.

ಈ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ಔಷಧಗಳು ಲಭ್ಯವಿರುತ್ತವೆ
ಲಲಿತ್‌ಪುರ, ಬಾದಶಹನಗರ, ಉತ್ತರ ಪ್ರದೇಶದ ಬರೇಲಿ, ಬಿಹಾರದ ಸಮಸ್ತಿಪುರ್, ದುರ್ಗಾಪುರ, ಬಾರ್ಮರ್, ರಾಜಸ್ಥಾನದ ಫಲ್ನಾ, ಗುಜರಾತಿನ ಚಂದ್ಲೋಡಿಯಾ, ರಾಜ್‌ಕೋಟ್, ವಾಪಿ, ಛತ್ತೀಸ್‌ಗಢದ ಬಿಲಾಸ್‌ಪುರ್, ಮಧ್ಯಪ್ರದೇಶದ ಕಟ್ನಿ, ಪಶ್ಚಿಮ ಬಂಗಾಳದ ನೇತಾಜಿ, ತೆಲಂಗಾಣದ ಕಚೇಗೌಡ, ತ್ರಿಪುರಾದ ಅಗರ್ತಲ , ತಮಿಳುನಾಡಿನ ನಾಗಕೋಯಿಲ್, ಕರ್ನಾಟಕದಲ್ಲಿ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ತೆರೆಯಲಾಗುವುದು.

ಮತ್ತಷ್ಟು ಓದಿ: ಝಾನ್ಸಿ: ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನಿಗೆ ಕಚ್ಚಿದ ಹಾವು, ಹಠಾತ್ ಕಾಲ್ತುಳಿತ

1963 ಔಷಧಗಳು ಇಲ್ಲಿ ಲಭ್ಯವಿದೆ
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಉದ್ದೇಶವು ಈ ಕೇಂದ್ರಗಳ ಮೂಲಕ ಎಲ್ಲಾ ಜನರಿಗೆ, ವಿಶೇಷವಾಗಿ ಬಡವರಿಗೆ, ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು ಲಭ್ಯವಾಗುವಂತೆ ಮಾಡುವುದು, ಆ ಮೂಲಕ ಆರೋಗ್ಯದ ವೆಚ್ಚವನ್ನು ಕಡಿಮೆ ಮಾಡುವುದು. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಅಡಿಯಲ್ಲಿ ವಿವಿಧ ಉತ್ಪನ್ನಗಳು 1963 ಔಷಧಗಳು ಮತ್ತು 293 ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಒಳಗೊಂಡಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ