AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಹಲ್ಲುಜ್ಜುವಾಗ ಆಕಸ್ಮಿಕವಾಗಿ ಬ್ರಶ್ ನುಂಗಿದ ಮಹಿಳೆ

ಪುಣೆಯ 40 ವರ್ಷದ ಮಹಿಳೆ ತನ್ನ ನಾಲಿಗೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಟೂತ್ ಬ್ರಷ್ ಅನ್ನು ನುಂಗಿದ ಅಪರೂಪದ ಘಟನೆ ನಡೆದಿದೆ. ಈ ಪ್ರಕರಣವು ಮಹಾರಾಷ್ಟ್ರದಲ್ಲಿ ಈ ರೀತಿಯ ಮೊದಲ ಪ್ರಕರಣವಾಗಿದೆ. ಇದು ಇಡೀ ದೇಶದ ವೈದ್ಯರನ್ನು ದಿಗ್ಭ್ರಮೆಗೊಳಿಸಿದೆ.

Viral News: ಹಲ್ಲುಜ್ಜುವಾಗ ಆಕಸ್ಮಿಕವಾಗಿ ಬ್ರಶ್ ನುಂಗಿದ ಮಹಿಳೆ
ಟೂತ್ ಬ್ರಷ್
ಸುಷ್ಮಾ ಚಕ್ರೆ
|

Updated on: Nov 13, 2024 | 7:39 PM

Share

ಪುಣೆ: ಮಹಾರಾಷ್ಟ್ರದ ಪುಣೆಯ ಮಹಿಳೆಯೊಬ್ಬರು ನಾಲಿಗೆಯನ್ನು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ 20 ಸೆಂ.ಮೀ ಉದ್ದದ ಟೂತ್ ಬ್ರಷ್ ಅನ್ನು ನುಂಗಿದ್ದಾರೆ. ಈ ಘಟನೆ ಮಹಾರಾಷ್ಟ್ರದಲ್ಲಿ ಈ ರೀತಿ ನಡೆದ ಮೊದಲ ಪ್ರಕರಣವಾಗಿದೆ. ಇದು ಇಡೀ ದೇಶದ ವೈದ್ಯಕೀಯ ತಜ್ಞರನ್ನು ದಿಗ್ಭ್ರಮೆಗೊಳಿಸಿದೆ. ಪುಣೆಯ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ತಕ್ಷಣ ಆಪರೇಷನ್ ಮಾಡಿ ಬ್ರಶ್ ಅನ್ನು ಹೊರಗೆ ತೆಗೆದು, ಆಕೆ ಉಸಿರುಗಟ್ಟಿ ಸಾಯುವುದರಿಂದ ರಕ್ಷಿಸಲಾಯಿತು.

ಕಳೆದ ವರ್ಷ ಟೂತ್ ಬ್ರಷ್ ಅನ್ನು ನುಂಗಿ ಸ್ಪ್ಯಾನಿಷ್ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೀಗ ಭಾರತದಲ್ಲಿ ಕೂಡ ಅಂತಹದ್ದೇ ಘಟನೆ ನಡೆದಿದೆ. ಪುಣೆಯ ಮಹಿಳೆಯೊಬ್ಬರು ನಾಲಿಗೆಯನ್ನು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ 20 ಸೆಂ.ಮೀ ಉದ್ದದ ಟೂತ್ ಬ್ರಷ್ ಅನ್ನು ನುಂಗಿದ್ದಾರೆ.

ಇದನ್ನೂ ಓದಿ: ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!

“ಮೊದಲಿಗೆ ಇದು ಅಸಾಧ್ಯವೆಂದು ತೋರುತ್ತಿದೆ” ಎಂದು ಆಪರೇಷನ್​ಗೆ ಹಾಜರಾದ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಅಭಿಜೀತ್ ಕರದ್ ಅವರು ಪುಣೆ ಮಿರರ್‌ಗೆ ಪ್ರತಿಕ್ರಿಯಿಸಿ, ಮಹಿಳೆಯು ಟೂತ್ ಬ್ರಷ್ ಅನ್ನು ಹೇಗೆ ನುಂಗಿರಬಹುದು ಎಂದು ಆಶ್ಚರ್ಯಪಟ್ಟಿದ್ದರು.

ಟೂತ್ ಬ್ರಷ್ ನುಂಗುವಿಕೆ ವಿಶ್ವಾದ್ಯಂತ ಬಹಳ ಅಪರೂಪವಾಗಿದೆ. ಈ ರೀತಿಯ 30ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ಟೂತ್ ಬ್ರಶ್ ನುಂಗುವವರು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಸ್ಕಿಜೋಫ್ರೇನಿಯಾ, ಬುಲಿಮಿಯಾ ಅಥವಾ ಅನೋರೆಕ್ಸಿಯಾದಿಂದ ಬಳಲುತ್ತಿರುವವರು ಕೂಡ ಆಗಿರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Video: ಸರ್ಕಾರಿ ಕಾರಿನ ಮೇಲೆ ಹತ್ತಿ ಯುವತಿಯ ಅಶ್ಲೀಲ ನೃತ್ಯ; ವಿಡಿಯೋ ವೈರಲ್​​​

ಜನರು ನಾಣ್ಯಗಳಂತಹ ಸಣ್ಣ ವಸ್ತುಗಳನ್ನು ನುಂಗುವ ಪ್ರಕರಣಗಳು ಆಗಾಗ ನಡೆಯುತ್ತಿರುತ್ತದೆ. ಆದರೆ, ಈ ರೀತಿ ಬೃಹತ್ ಟೂತ್ ಬ್ರಷ್ ಅನ್ನು ನುಂಗಿರುವ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ದಾಖಲಾದ ವಿಲಕ್ಷಣ ಪ್ರಕರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ