PM Modi Mother : ತಾಯಿ ಆರೋಗ್ಯದಲ್ಲಿ ಸುಧಾರಣೆ, ದೆಹಲಿಗೆ ತೆರಳಿದ ಮೋದಿ

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 28, 2022 | 7:47 PM

Heeraben Modi News Live Updates in Kannada: ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಅಹಮದಾಬಾದ್​ನ ಯುಎನ್​ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಿಯವರ ತಾಯಿಯ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ಕ್ಷಣಕ್ಷಣದ ಅಪ್​ಡೇಟ್ ಇಲ್ಲಿದೆ.

PM Modi Mother : ತಾಯಿ ಆರೋಗ್ಯದಲ್ಲಿ  ಸುಧಾರಣೆ, ದೆಹಲಿಗೆ ತೆರಳಿದ ಮೋದಿ
Heeraben Modi

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ತಾಯಿ ಹೀರಾಬೆನ್ ಮೋದಿ (Heeraben Modi) ಆರೋಗ್ಯದಲ್ಲಿ ಏರುಪೇರಾಗಿದ್ದು, ಅಹಮದಾಬಾದ್​ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಹಮದಾಬಾದ್​ನ ಯುಎನ್​ ಮೆಹ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯನ್ನು ನೋಡಲು ಮೋದಿ ಆಸ್ಪತ್ರೆಯತ್ತ ತೆರಳಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ, ಹೀರಾಬೆನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಯುಎನ್​ ಮೆಹ್ತಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಮತ್ತು ಕುಟುಂಬದವರ ಕಾರು ಮೈಸೂರಿನ ಕಡಕೊಳ ಬಳಿ ಮಂಗಳವಾರ ಅಪಘಾತಕ್ಕೀಡಾಗಿತ್ತು. ಅವರು ಸದ್ಯ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಮೋದಿಯವರ ತಾಯಿಯ ಆರೋಗ್ಯವೂ ಹದಗೆಟ್ಟಿದೆ.  ಪ್ರಧಾನಿಯವರ ತಾಯಿಯ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ಕ್ಷಣಕ್ಷಣದ ಅಪ್​ಡೇಟ್ ಇಲ್ಲಿದೆ.

LIVE NEWS & UPDATES

The liveblog has ended.
  • 28 Dec 2022 05:56 PM (IST)

    PM Modi Mother News Live: ತಾಯಿ ಆರೋಗ್ಯದಲ್ಲಿ ಸುಧಾರಣೆ, ದೆಹಲಿಗೆ ತೆರಳಿದ ಮೋದಿ

    ಪ್ರಧಾನಿ ನರೇಂದ್ರ ಮೋದಿ ಅವರು ಯುಎನ್ ಮೆಹ್ತಾ ಆಸ್ಪತ್ರೆಯಿಂದ ದೆಹಲಿಗೆ ತೆರಳಿದ್ದಾರೆ. ಅವರು ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಸುಮಾರು ಒಂದೂವರೆ ಗಂಟೆಗಳವರೆಗೆ ತಾಯಿ ಜೊತೆಗೆ ಸಮಯ ಕಳೆದಿದ್ದಾರೆ. ಇದೇ ವೇಳೆ ವೈದ್ಯರಿಂದ ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

  • 28 Dec 2022 05:33 PM (IST)

    PM Modi Mother News Live: ಪ್ರಧಾನಿ ಮೋದಿ ತಾಯಿ ಆರೋಗ್ಯ ಸುಧಾರಣೆ; ವೈದ್ಯರು ಮಾಹಿತಿ

    ಪ್ರಧಾನಿ ಮೋದಿ ತಾಯಿ ಆರೋಗ್ಯ ಸುಧಾರಿಸುತ್ತಿದೆ ಎಂದು ಯುಎನ್ ಮೆಹ್ತಾ ಆಸ್ಪತ್ರೆಯ ವೈದ್ಯರು ಈ ಮಾಹಿತಿಯನ್ನು ನೀಡಿದ್ದಾರೆ. ಸದ್ಯಕ್ಕೆ ಮೋದಿ ಅವರ ತಾಯಿ ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • 28 Dec 2022 05:28 PM (IST)

    PM Modi Mother News Live: ಮೈಸೂರು ವಿಮಾನ ನಿಲ್ದಾಣದಿಂದ ಅಹಮದಾಬಾದ್‌ಗೆ ಪ್ರಯಾಣ ಬೆಳಸಲಿರುವ ಮೋದಿ ಸಹೋದರನ ಕುಟುಂಬ

    ಮೋದಿ ತಾಯಿ ಆರೋಗ್ಯ ಏರುಪೇರು ಹಿನ್ನೆಲೆ, ಮೋದಿ ಸಹೋದರರ ಕುಟುಂಬವು ವಿಶೇಷ ವಿಮಾನದಲ್ಲಿ ಇಂದು ಹೋಗಲಿದ್ದಾರೆ. ಮೈಸೂರು ವಿಮಾನ ನಿಲ್ದಾಣದಿಂದ ಅಹಮದಾಬಾದ್‌ಗೆ ಪ್ರಯಾಣ ಮಾಡಲಿದ್ದಾರೆ. ಮೈಸೂರು ಗೋವಾ ಮಾರ್ಗವಾಗಿ‌ ಅಹಮದಾಬಾದ್‌ಗೆ ಪ್ರಯಾಣ ಮಾಡಲಿದ್ದಾರೆ. ಸದ್ಯ ಮೈಸೂರಿನಲ್ಲಿರುವ ಮೋದಿ ಸಹೋದರ ಪ್ರಹ್ಲಾದ್ ಮೋದಿ ಅವರ ಮಗ ಸೊಸೆ ಮೊಮ್ಮಗ, ಮಗಳು ಅಳಿಯ ಹೋಗಲಿದ್ದಾರೆ.

  • 28 Dec 2022 04:01 PM (IST)

    PM Modi Mother News Live: ಸಮಯಕ್ಕೆ ಮೊದಲೇ ಆಸ್ಪತ್ರೆಗೆ ತಲುಪಿದ ಮೋದಿ

    ಪ್ರಧಾನಿ ಮೋದಿ ಅವರ ಸಮಯಕ್ಕೆ ಮೊದಲೇ ಆಸ್ಪತ್ರೆ ತಲುಪಿದ್ದಾರೆ.  ಸಂಜೆ 4 ಗಂಟೆ ಪ್ರಧಾನಿ ಮೋದಿ ಅವರು ಆಸ್ಪತ್ರೆಗೆ ಬರಲಿದ್ದಾರೆ ಎಂದ ಹೇಳಲಾಗಿತ್ತು. ಇದೀಗ ಅಹಮದಾಬಾದ್ ವಿಮಾನ ನಿಲ್ದಾಣ ತಲುಪಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ಯುಎನ್ ಮೆಹ್ತಾ ಆಸ್ಪತ್ರೆಗೆ ಪ್ರಧಾನಿ ಮೋದಿ ತೆರಳಿದ್ದಾರೆ.

  • 28 Dec 2022 03:26 PM (IST)

    Heeraben Modi Live Updates: ಹೀರಾಬೆನ್ ಚೇತರಿಕೆಗೆ ರಾಹುಲ್ ಗಾಂಧಿ ಹಾರೈಕೆ

    ‘ತಾಯಿ ಮತ್ತು ಮಗನ ನಡುವಿನ ಪ್ರೀತಿ ಶಾಶ್ವತ ಮತ್ತು ಅಮೂಲ್ಯವಾದುದು. ಮೋದಿ ಜೀ, ಈ ಕಷ್ಟದ ಸಮಯದಲ್ಲಿ ನನ್ನ ಪ್ರೀತಿ ಮತ್ತು ಬೆಂಬಲ ನಿಮ್ಮೊಂದಿಗಿದೆ. ನಿಮ್ಮ ತಾಯಿ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

  • 28 Dec 2022 03:20 PM (IST)

    Heeraben Modi Live Updates: ಆಸ್ಪತ್ರೆಗೆ ಧಾವಿಸಿದ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್

    ಗುಜರಾತ್ ಮುಖ್ಯಮಂತ್ರಿ ಸಿಎಂ ಭೂಪೇಂದ್ರ ಪಟೇಲ್ ಅವರು ಯುಎನ್ ಮೆಹ್ತಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹೀರಾಬೆನ್ ಆನಾರೋಗ್ಯದ ಸುದ್ದಿ ತಿಳಿದ ಮುಖ್ಯಮಂತ್ರಿಗಳು ತಕ್ಷಣ ಆಸ್ಪತ್ರೆಗೆ ಆಗಮಿಸಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಸದ್ಯದ ಮಾಹಿತಿ ಪ್ರಕಾರ, ಹೀರಾಬೆನ್ ಅವರ ಆರೋಗ್ಯ ಸ್ಥಿರವಾಗಿದೆ.

  • 28 Dec 2022 03:16 PM (IST)

    Heeraben Modi Live Updates: ದೆಹಲಿಯಿಂದ ಅಹಮದಾಬಾದ್​ನತ್ತ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಗುಜರಾತ್​ಗೆ ಹೊರಟಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಅವರು ಅಹಮದಾಬಾದ್ ತಲುಪಲಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ನೇರವಾಗಿ ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ತಲುಪಲಿದ್ದಾರೆ.

  • 28 Dec 2022 03:13 PM (IST)

    Heeraben Modi Live Updates: ಹೀರಾಬೆನ್​ ಚೇತರಿಕೆಗೆ ಮೋದಿ ಅಭಿಮಾನಿಗಳ ಪ್ರಾರ್ಥನೆ

    ಹೀರಾಬೆನ್ ಅನಾರೋಗ್ಯದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರ್ಥನೆಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ಮೋದಿ ಮತ್ತು ಹೀರಾಬೆನ್ ಒಟ್ಟಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಮೂಲಕ ಜನರು ಪ್ರಾರ್ಥಿಸುತ್ತಿದ್ದಾರೆ.

  • 28 Dec 2022 03:10 PM (IST)

    Heeraben Modi Live Updates: ಅಹಮದಾಬಾದ್​​ನಲ್ಲಿ ಬಿಗಿ ಬಂದೋಬಸ್ತ್

    ಪ್ರಧಾನಿ ನರೇಂದ್ರ ಮೋದಿ ಅವರು ತಾಯಿಯ ಆರೋಗ್ಯ ವಿಚಾರಿಸಲು ಶೀಘ್ರದಲ್ಲೇ ಅಹಮದಾಬಾದ್‌ಗೆ ಆಗಮಿಸಲಿದ್ದಾರೆ. ಹೀಗಾಗಿ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಯುಎನ್ ಮೆಹ್ತಾ ಆಸ್ಪತ್ರೆವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

  • 28 Dec 2022 02:23 PM (IST)

    Heeraben Modi Live Updates: ಆರೋಗ್ಯ ಸ್ಥಿರವಾಗಿದೆ; ಯುಎನ್​ ಮೆಹ್ತಾ ಆಸ್ಪತ್ರೆ

    ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಗುಜರಾತ್​ನ ಅಹಮದಾಬಾದ್​ನಲ್ಲಿರುವ ಯುಎನ್​ ಮೆಹ್ತಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

  • 28 Dec 2022 02:18 PM (IST)

    Heeraben Modi Live Updates: ಹೀರಾಬೆನ್ ಆರೋಗ್ಯ ವಿಚಾರಿಸಿದ ಗುಜರಾತ್ ಶಾಸಕರು

    ಮೋದಿ ತಾಯಿಯ ಅನಾರೋಗ್ಯದ ಸುದ್ದಿ ತಿಳಿದ ಬೆನ್ನಲ್ಲೇ ಗುಜರಾತ್​​ನ ಅನೇಕ ಶಾಸಕರು ಯುಎನ್ ಮೆಹ್ತಾ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

  • 28 Dec 2022 02:13 PM (IST)

    PM Modi Mother News Live: ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ಆಸ್ಪತ್ರೆಗೆ ದಾಖಲು

    ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅಹಮದಾಬಾದ್​ನ ಯುಎನ್​ ಮೆಹ್ತಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • Published On - Dec 28,2022 2:11 PM

    Follow us