PM Modi in Hyderabad: ಹೈದರಾಬಾದಿನಲ್ಲಿ ಯೋಗಿ ಆದಿತ್ಯನಾಥರನ್ನು ಹೊಗಳಿ, KCR ಕುಟುಂಬವಾದಕ್ಕೆ ಛೀಮಾರಿ ಹಾಕಿದ ಪ್ರಧಾನಿ ಮೋದಿ! ಇನ್ನೂ ಏನು ಹೇಳಿದರು?

| Updated By: ಸಾಧು ಶ್ರೀನಾಥ್​

Updated on: May 26, 2022 | 5:47 PM

K Chandrashekhar Rao: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರ ಕೆಟಿ ರಾಮ ರಾವ್ ಅವರು ಶಿರ್ಸಿಲಾ ಶಾಸಕರು ಮತ್ತು ಅಪ್ಪನ ಸಂಪುಟದಲ್ಲಿ ಸಚಿವರಾಗಿದ್ದಾರೆ. ಇನ್ನು ಕೆಸಿಆರ್ ಪುತ್ರಿ ಕಲವಕುಂಟಲ ಕವಿತಾ ನಿಜಾಮಾಬಾದಿನ ಸಂಸದೆಯಾಗಿದ್ದರು. ಈಗ ಅವರು ನಿಜಾಮಾಬಾದಿನಿಂದ ತೆಲಂಗಾಣ ಮೇಲ್ಮನೆಗೆ ನೇಮಕಗೊಂಡಿದ್ದಾರೆ. ಹಾಗೆಯೇ, KCR ಸೋದರ ಸಂಬಂಧಿ ಹರೀಶ್ ರಾವ್ ಸಿದ್ದಪೇಟ್ ಶಾಸಕರಾಗಿದ್ದಾರೆ. ಮತ್ತು ತೆಲಂಗಾಣದ ಹಣಕಾಸು ಸಚಿವರೂ ಆಗಿದ್ದಾರೆ.

PM Modi in Hyderabad: ಹೈದರಾಬಾದಿನಲ್ಲಿ ಯೋಗಿ ಆದಿತ್ಯನಾಥರನ್ನು ಹೊಗಳಿ, KCR ಕುಟುಂಬವಾದಕ್ಕೆ ಛೀಮಾರಿ ಹಾಕಿದ ಪ್ರಧಾನಿ ಮೋದಿ! ಇನ್ನೂ ಏನು ಹೇಳಿದರು?
ತೆಲಂಗಾಣದಲ್ಲಿ ಯೋಗಿ ಆದಿತ್ಯನಾಥರನ್ನು ಹೊಗಳಿ, ಕೆಸಿಆರ್ ವೈಜ್ಞಾನಿಕವಾದ ಕ್ಕೆ ಛೀಮಾರಿ ಹಾಕಿದ ಪ್ರಧಾನಿ ಮೋದಿ! ಇನ್ನೂ ಏನು ಹೇಳಿದರು?
Follow us on

ಹೈದರಾಬಾದ್: ನರೇಂದ್ರ ಮೋದಿ ಪ್ರಧಾನಿ ಪಟ್ಟ ಅಲಂಕರಿಸಿ ಇಂದಿಗೆ 8 ವರ್ಷ ಸಂದಿದೆ. ಈ ಸಂದರ್ದಭದಲ್ಲಿ ಅವರಿಂದು ತೆಲಂಗಾಣ ಪ್ರವಾಸ (Telangana) ಮಾಡಿದ್ದಾರೆ. ತೆಲಂಗಾಣಕ್ಕೆ ಹೋಗಿ ಯೋಗಿ ಆದಿತ್ಯನಾಥರನ್ನು (Uttar Pradesh chief minister Yogi Aditya nath) ಹೊಗಳಿದ ಪ್ರಧಾನಿ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (K Chandrashekhar Rao) ಅವರು ಪಾಲಿಸಿಕೊಂಡು ಬಂದಿರುವ ಕುಟುಂಬವಾದಕ್ಕೆ ಛೀಮಾರಿ ಹಾಕಿದ್ದಾರೆ (PM Modi).

ಮೊದಲ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಯೋಗಿ ಆದಿತ್ಯನಾಥರಿಗೆ ಯಾರೋ ಹೇಳಿದ್ದರಂತೆ ಒಂದು ನಿರ್ದಿಷ್ಟ ಸ್ಥಳಕ್ಕೆ ಹೋಗಬಾರದು ಎಂದು. ಅದರ ಸ್ಥಳ ಮಹಿಮೆ ಹೇಗಿದೆಯೆಂದರೆ ಅಲ್ಲಿಗೆ ಹೋದವರು ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿಲ್ಲ ಎಂದು ತೆಲಂಗಾಣದಲ್ಲಿ ಯಾರೋ ಎಚ್ಚರಿಸಿದ್ದರಂತೆ. ಆದರೆ ವಿಜ್ಞಾನದಲ್ಲಿ ಅಪಾರ ನಂಬಿಕೆಯಿರುವ ಯೋಗಿ ಸೀದಾ ಆ ಸ್ಥಳಕ್ಕೆ (Noida) ಹೋಗಿ ಬಂದರು. ಜೊತೆಗೆ ಮತ್ತೆ ಮುಖ್ಯಮಂತ್ರಿಯೂ ಆಗಿದ್ದಾರೆ. ಆದರೆ ಮೂಢನಂಬಿಕೆಗಳನ್ನು (superstition) ಪಸರಿಸುವವರಿಂದ ತೆಲಂಗಾಣವನ್ನು ನಾವು ಕಾಪಾಡಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವೈಜ್ಞಾನಿಕವಾದ ವರ್ಸಸ್ ಕುಟುಂಬವಾದ!

ಹೀಗೆ ಮಾತನಾಡಿದ ಪ್ರಧಾನಿ ಮೋದಿ ಸ್ಪಷ್ಟವಾಗಿ ತೆಲಂಗಾಣ ಮುಖ್ಯಮಂತ್ರಿ ಮತ್ತು ಅವರ ಮೂಢನಂಬಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದು ಎಂಬುದು ಸ್ಪಷ್ಟವಾಗಿತ್ತು. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಮೂಢನಂಬಿಕೆಗೆ ಜೋತುಬೀಳುವುದು ಜಾಸ್ತಿ. ತೆಲಂಗಾಣ ಜನರ ಧಾರ್ಮಿಕ ನಂಬುಗೆಗಳಿಗೆ ಎಳ್ಳುನೀರು ಬಿಟ್ಟಿದ್ದ ಕೆಸಿಆರ್ ಆಗ ಮೂಢನಂಬಿಕೆಯನ್ನು ಪಾಲಿಸಿದ್ದರು. ವಾಸ್ತು ಬಗ್ಗೆ ಜಾಸ್ತಿ ಒಲವು ಹೊಂದಿದ್ದ ಕೆಸಿಆರ್ 2016ರಲ್ಲಿ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಇದಾದ ಮೇಲೆ ಕೆಸಿಆರ್ ಕುಟುಂಬವಾದವನ್ನೂ ಪ್ರಸ್ತಾಪಿಸಿದ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಕುಟುಂಬದಲ್ಲಿ ಪರಿವಾರವಾದ (pariwarwad) ತುಂಬಿತುಳುಕುತ್ತಿದೆ ಎಂದರು. ಅದೇ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬಂದರೆ ತೆಲಂಗಾಣವನ್ನು ಟೆಕ್ನಾಲಾಜಿಕಲ್ ಹಬ್ (technological hub) ಮಾಡುವುದಾಗಿ ತಮ್ಮ ವೈಜ್ಞಾನಿಕವಾದ ಮಂಡಿಸಿದರು.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅತ್ತ ಪ್ರಧಾನಿ ಮೋದಿ ಹೈದರಾಬಾದಿನಲ್ಲಿದ್ದರೆ ಶಿಷ್ಟಾಚಾರವನ್ನು ನಿರ್ಲಕ್ಷ್ಯಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಇಲ್ಲಿ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೇ ಗೌಡರ ಜೊತೆ ತೃತೀಯ ರಂದ ರಚನೆ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ. ಈ ಹಿಂದೆಯೂ ಕೆಸಿಆರ್ ಅವರು ಪ್ರಧಾನಿ ಮೋದಿ ಅವರನ್ನು ತೆಲಂಗಾನ ಪ್ರವಾಸದ ವೇಳೆ ಭೇಟಿ ಮಾಡಿರಲಿಲ್ಲ.

ಇದನ್ನೂ ಓದಿ: ಮತ್ತೆ ತೃತೀಯ ರಂಗ ರಚನೆಗೆ ಜೋತು ಬಿದ್ದರಾ? ತೆಲಂಗಾಣ ಸಿಎಂ – ದೇವೇಗೌಡರ ಭೇಟಿ ತೃತೀಯ ರಂಗ ರಚನೆ ಮೊದಲ ಹಂತ ಎಂದ ಹೆಚ್ಡಿ ಕುಮಾರಸ್ವಾಮಿ

ಗಮನಾರ್ಹವೆಂದರೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರ ಕೆಟಿ ರಾಮ ರಾವ್ ಅವರು ಶಿರ್ಸಿಲಾ ಶಾಸಕರು ಮತ್ತು ಅಪ್ಪನ ಸಂಪುಟದಲ್ಲಿ ಸಚಿವರಾಗಿದ್ದಾರೆ. ಇನ್ನು ಕೆಸಿಆರ್ ಪುತ್ರಿ ಕಲವಕುಂಟಲ ಕವಿತಾ ನಿಜಾಮಾಬಾದಿನ ಸಂಸದೆಯಾಗಿದ್ದರು. ಈಗ ಅವರು ನಿಜಾಮಾಬಾದಿನಿಂದ ತೆಲಂಗಾಣ ಮೇಲ್ಮನೆಗೆ ನೇಮಕಗೊಂಡಿದ್ದಾರೆ. ಹಾಗೆಯೇ, KCR ಸೋದರ ಸಂಬಂಧಿ ಹರೀಶ್ ರಾವ್ ಸಿದ್ದಪೇಟ್ ಶಾಸಕರಾಗಿದ್ದಾರೆ. ಮತ್ತು ತೆಲಂಗಾಣದ ಹಣಕಾಸು ಸಚಿವರೂ ಆಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಗುರುವಾರ (ಮೇ 26) ಹೈದರಾಬಾದ್​ಗೆ ಭೇಟಿ ನೀಡಿ, ಭಾರತೀಯ ವಾಣಿಜ್ಯ ಸಂಸ್ಥೆಯ (Indian School of Business – ISB) 20ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಪ್ರಧಾನಿ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಮುಖ್ಯಮಂತ್ರಿಯನ್ನು ಸ್ವಾಗತಿಸಬೇಕಾದ್ದು ಶಿಷ್ಟಾಚಾರ. ಆದರೆ ಈ ಬಾರಿಯೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್ ಈ ಶಿಷ್ಟಾಚಾರ ಉಲ್ಲಂಘಿಸಿ, ಬೆಂಗಳೂರಿಗೆ ತೆರಳಿದ್ದಾರೆ. 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ರಾಜಕೀಯ ಚಟುವಟಿಕೆ ಚುರುಕುಗೊಳಿಸಿರುವ ಕೆಸಿಆರ್, ಬಿಜೆಪಿ ವಿರುದ್ಧ ಕಾಂಗ್ರೆಸ್ಸೇತರ ಪಕ್ಷಗಳನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಕೆಸಿಆರ್, ಎರಡನೇ ಬಾರಿಗೆ ಮೋದಿ ಭೇಟಿಯನ್ನು ತಪ್ಪಿಸಿದ್ದಾರೆ. ಕಳೆದ ಫೆಬ್ರುವರಿ 5ರಂದು ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಅನಾವರಣಗೊಳಿಸಲೆಂದು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್​ಗೆ ಬಂದಿದ್ದರು. ಅಂದೂ ಸಹ ಮೋದಿ ಅವರನ್ನು ಕೆಸಿಆರ್ ಭೇಟಿಯಾಗಿರಲಿಲ್ಲ.

Published On - 5:37 pm, Thu, 26 May 22