ಕಾಂಗ್ರೆಸ್ ದೇಶದ 60 ವರ್ಷಗಳನ್ನು ವ್ಯರ್ಥ ಮಾಡಿದೆ, 3-4 ತಲೆಮಾರುಗಳ ಜೀವನವನ್ನು ನಾಶಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಬಿಹಾರದ ಚಂಪಾರಣ್ನಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, 21ನೇ ಶತಮಾನದಲ್ಲಿ ಭಾರತವು ಇಂಡಿಯಾ ಮೈತ್ರಿಕೂಟದ ಪಾಪದ ಜತೆ ಮುಂದುವರೆಯಲು ಸಾಧ್ಯವಿಲ್ಲ ಎಂದರು.
60 ವರ್ಷಗಳಲ್ಲಿ ಈ ಜನರು ದೊಡ್ಡ ಅರಮನೆಗಳನ್ನು ನಿರ್ಮಿಸಿದ್ದಾರೆ ಮತ್ತು ಸ್ವಿಸ್ ಬ್ಯಾಂಕ್‌ನಲ್ಲಿ ಖಾತೆಗಳನ್ನು ತೆರೆದಿದ್ದಾರೆ, ನಿಮ್ಮ ಮಕ್ಕಳಿಗೆ ಓದಲು ಶಾಲೆ ಇರಲಿಲ್ಲ, ಆದರೆ ಅವರ ಮಕ್ಕಳು ವಿದೇಶದಲ್ಲಿ ಓದುವುದನ್ನು ಮುಂದುವರೆಸಿದರು. ಬಡವರು ತೊಂದರೆ ಮತ್ತು ಕಷ್ಟದಲ್ಲಿದ್ದರು, ಆದರೆ ಅದರಿಂದ ಯಾವುದೇ ವ್ಯತ್ಯಾಸವಾಗಲಿಲ್ಲ ಎಂದು ಹೇಳಿದರು.
ಮೋದಿ ವಿಡಿಯೋ
#WATCH | Bihar: Addressing a public rally in East Champaran, PM Narendra Modi says, “…In 60 years these people have built big palaces and opened accounts in Swiss bank. Your children did not have a school to study, but their children continued studying abroad. The poor were in… pic.twitter.com/7ZlgPL4MUK
— ANI (@ANI) May 21, 2024
ತೇಜಸ್ವಿ ಯಾದವ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ, ಬೆಳ್ಳಿ ಚಮಚದೊಂದಿಗೆ ಜನಿಸಿದವರಿಗೆ ಕಠಿಣ ಪರಿಶ್ರಮದ ಬಗ್ಗೆ ತಿಳಿದಿಲ್ಲ. ಜಂಗಲ್ ರಾಜ್‌ನ ಉತ್ತರಾಧಿಕಾರಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ, ಈ ಚುನಾವಣೆಯಲ್ಲಿ ಮೋದಿಯನ್ನು ನಿಂದಿಸುವುದನ್ನು ಬಿಟ್ಟು ಈ ಜನರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಧಾನಿ ಟೀಕಿಸಿದರು.
ಮತ್ತಷ್ಟು ಓದಿ: 6 ರಾಜ್ಯಗಳಲ್ಲಿ ಚುನಾವಣಾ ಪ್ರಚಾರ: ಯುಪಿ-ಬಿಹಾರದಲ್ಲಿ ಮೋದಿ, ಒಡಿಶಾದಲ್ಲಿ ಅಮಿತ್ ಶಾ
ಮೇ 25 ರಂದು ಆರನೇ ಹಂತದ ಮತದಾನ ನಡೆಯಲಿದೆ. ಜೂನ್ 1ರಂದು ಏಳನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ, ಇದುವರೆಗೆ ಐದು ಹಂತದ ಚುನಾವಣೆಗಳು ಪೂರ್ಣಗೊಂಡಿವೆ. ಲೋಕಸಭೆ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯುತ್ತಿದ್ದು, ಜೂನ್ 4 ರಂದು ಮತ ಎಣಿಕೆಯನ್ನು ನಿಗದಿಪಡಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Tue, 21 May 24