Lok Sabha Elections 2024: ಮುಂಬೈನ ಮತದಾನ ಕೇಂದ್ರದ ಶೌಚಾಲಯದಲ್ಲಿ ಬೂತ್​ ಏಜೆಂಟ್​ ಶವವಾಗಿ ಪತ್ತೆ

ಲೋಕಸಭಾ ಚುನಾವಣೆಯ ಐದು ಹಂತಗಳ ಮತದಾನ ಪೂರ್ಣಗೊಂಡಿದೆ. ಮುಂಬೈನ ಮತದಾನ ಕೇಂದ್ರ ಶೌಚಾಲಯದಲ್ಲಿ ಬೂತ್ ಏಜೆಂಟ್​ ಶವವಾಗಿ ಪತ್ತೆಯಾಗಿದ್ದಾರೆ.

Lok Sabha Elections 2024: ಮುಂಬೈನ ಮತದಾನ ಕೇಂದ್ರದ ಶೌಚಾಲಯದಲ್ಲಿ ಬೂತ್​ ಏಜೆಂಟ್​ ಶವವಾಗಿ ಪತ್ತೆ
ಪ್ರಾತಿನಿಧಿಕ ಚಿತ್ರ
Follow us
ನಯನಾ ರಾಜೀವ್
|

Updated on: May 21, 2024 | 11:59 AM

ಮುಂಬೈನ ಮತದಾನ ಕೇಂದ್ರದ ಶೌಚಾಲಯದಲ್ಲಿ ಬೂತ್​ ಏಜೆಂಟ್​ ಶವವಾಗಿ ಪತ್ತೆಯಾಗಿದ್ದಾರೆ. ಶಿವಸೇನಾ (ಯುಬಿಟಿ) ಮತಗಟ್ಟೆ ಏಜೆಂಟ್ ಮನೋಹರ್ ನಲ್ಗೆ (62) ಮುಂಬೈನ ವರ್ಲಿ ಪ್ರದೇಶದಲ್ಲಿನ ಮತಗಟ್ಟೆಯ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮುಂಬೈನ ಎನ್‌ಎಂ ಜೋಶಿ ಮಾರ್ಗ್ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಎಡಿಆರ್‌ನಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಮುಂಬೈ ಪೊಲೀಸರು ಈ ಮಾಹಿತಿ ನೀಡಿದ್ದಾರೆ.

ಐದನೇ ಹಂತದ ಲೋಕಸಭೆ ಚುನಾವಣೆಗೆ ಸೋಮವಾರ ರಾಜ್ಯಾದ್ಯಂತ 13 ಸ್ಥಾನಗಳಿಗೆ ಮತದಾನ ನಡೆದಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಐದನೇ ಹಂತದಲ್ಲಿ ಇವಿಎಂ ಅಸಮರ್ಪಕ ಕಾರ್ಯ, ಪಕ್ಷದ ಕಾರ್ಯಕರ್ತರ ನಡುವಿನ ಘರ್ಷಣೆ ಮತ್ತು ಮತಗಟ್ಟೆಗಳಲ್ಲಿ ಸೌಲಭ್ಯಗಳ ಕೊರತೆಯು ಕೂಡ ಮುಖ್ಯವಾಗಿತ್ತು.

ಮತ್ತಷ್ಟು ಓದಿ: ಲೋಕಸಭಾ ಚುನಾವಣೆ, ಇನ್ನೆರಡು ಹಂತಗಳು ಬಾಕಿ, ಒಟ್ಟು ಎಷ್ಟು ರಾಜ್ಯಗಳು, ಕ್ಷೇತ್ರಗಳಿಗೆ ನಡೆಯಲಿದೆ ಮತದಾನ?

ಶೌಚಾಲಯಕ್ಕೆ ಹೋಗುವ ಮೊದಲು ತುಂಬಾ ಆಯಾಸದಿಂದ ಅವರು ಬಳಲುತ್ತಿದ್ದರು, ಹೃದಯಾರಘಾತದಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ನಗರದಾದ್ಯಂತ ಇರುವ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗ ಸೂಕ್ತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಸೇನಾ (ಯುಬಿಟಿ) ಕಾರ್ಯಕರ್ತರು ಆರೋಪಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ