ನಿಖರ ಭವಿಷ್ಯಕ್ಕೆ ಖ್ಯಾತವಾದ ಫಲೋದಿ ಬೆಟ್ಟಿಂಗ್ ಮಾರ್ಕೆಟ್ ಎಲ್ಲಿದೆ? ಈ ಚುನಾವಣೆಗೆ ಸಟ್ಟಾ ಬಜಾರ್ ನುಡಿದ ಭವಿಷ್ಯವೇನು?

Phalodi Satta Bazar prediction for Lok Sabha elections: ರಾಜಸ್ಥಾನದ ಫಲೋದಿ ಸಟ್ಟಾ ಬಜಾರ್ ಬೆಟ್ಟಿಂಗ್ ಮಾರುಕಟ್ಟೆಗೆ ಖ್ಯಾತವಾಗಿದೆ. ಜೋಧಪುರ್ ಸಮೀಪ ಇರುವ ಈ ಊರಿನಲ್ಲಿ ಬೆಟ್ಟಿಂಗ್ ದಂದೆ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಮಳೆಯಿಂದ ಹಿಡಿದು ಕ್ರಿಕೆಟ್, ಚುನಾವಣೆವರೆಗೂ ಹಲವು ರೀತಿಯ ಬೆಟ್ಟಿಂಗ್ ಇಲ್ಲಿ ನಡೆಯುತ್ತದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಭಾರೀ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಪಂಟರ್​ಗಳ ಬೆಟ್ಟಿಂಗ್ ಆಗಿದೆ.

ನಿಖರ ಭವಿಷ್ಯಕ್ಕೆ ಖ್ಯಾತವಾದ ಫಲೋದಿ ಬೆಟ್ಟಿಂಗ್ ಮಾರ್ಕೆಟ್ ಎಲ್ಲಿದೆ? ಈ ಚುನಾವಣೆಗೆ ಸಟ್ಟಾ ಬಜಾರ್ ನುಡಿದ ಭವಿಷ್ಯವೇನು?
ಫಲೋದಿ ಬೆಟ್ಟಿಂಗ್ ಮಾರ್ಕೆಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2024 | 1:46 PM

ನವದೆಹಲಿ, ಮೇ 21: ಇತ್ತೀಚೆಗೆ ಮಾಧ್ಯಮಗಳಲ್ಲಿ ಸಟ್ಟಾ ಬಜಾರ್ ಅಥವಾ ಬೆಟ್ಟಿಂಗ್ ಮಾರ್ಕೆಟ್ ಸದ್ದು ಮಾಡುತ್ತಿದೆ. ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆಗಳ ರೀತಿಯಲ್ಲಿ ನಿಖರವಾಗಿ ಭವಿಷ್ಯ ನುಡಿಯುವುದರಲ್ಲಿ ಸಟ್ಟಾ ಬಜಾರ್ ಖ್ಯಾತವಾಗಿದೆ. ಅಂದಹಾಗೆ ಭಾರತದಲ್ಲಿ ಬೆಟ್ಟಿಂಗ್ ನಿಷೇಧವಾದರೂ ರಹಸ್ಯವಾಗಿ ಈ ಮಾರುಕಟ್ಟೆ ಕಾರ್ಯನಿರ್ವಹಿಸುತ್ತದೆ. ರಾಜಸ್ಥಾನದ ಜೋಧಪುರದಿಂದ 160 ಕಿಮೀ ದೂರದಲ್ಲಿರುವ ಫಲೋದಿ ಎಂಬಲ್ಲಿ ಈ ರಹಸ್ಯ ಸಟ್ಟಾ ಬಜಾರ್ (Phalodi satta bazar) ಇದೆ. ಇಲ್ಲಿರುವುದು ರಹಸ್ಯವಲ್ಲ, ಓಪನ್ ಸೀಕ್ರೆಟ್ ಎನ್ನುತ್ತಾರೆ ಸ್ಥಳೀಯರು. ಮಳೆಯಿಂದ ಹಿಡಿದು ರಾಜಕೀಯವರೆಗೆ ನಾನಾ ವಿಚಾರಗಳ ಬಗ್ಗೆ ಇಲ್ಲಿ ಬೆಟ್ಟಿಂಗ್ ನಡೆಯುತ್ತದೆ. ವರ್ಷಕ್ಕೆ 20 ಕೋಟಿ ರೂ ಮೊತ್ತದಷ್ಟು ಬೆಟ್ಟಿಂಗ್ ಆಗುತ್ತದೆ.

ಫಲೋದಿಯಲ್ಲಿ ಇರುವ ಜನಸಂಖ್ಯೆ ಆರು ಲಕ್ಷ. ಈ ಪೈಕಿ 1,200 ಮಂದಿ ಬೆಟ್ಟಿಂಗ್ ದಂದೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ದಂದೆಯ ಹೊರಗಿನವರು ಈ ಮಾರುಕಟ್ಟೆಗೆ ನುಸುಳಲು ಆಗುವುದಿಲ್ಲ. ಅಷ್ಟರಮಟ್ಟಿಗೆ ಬಿಗಿ ಮಾಡಿರುತ್ತಾರೆ. ವಾಟ್ಸಾಪ್, ಪ್ರೈವೇಟ್ ವೆಬ್​ಸೈಟ್​ಗಳ ಮೂಲಕ ಇವರು ಕಾರ್ಯಾಚರಿಸುತ್ತಾರೆ. ಫಲೋದಿಯಲ್ಲಿ ಸಟ್ಟಾ ಬಜಾರ್ ಯಾವಾಗ ಆರಂಭವಾಯಿತು ಎಂಬುದೂ ಕೂಡ ರಹಸ್ಯವಾಗಿ ಉಳಿದಿದೆ.

ಈ ಬಜಾರ್​ನಲ್ಲಿ ಬುಕಿಗಳು ಆಫರ್ ಇರಿಸುತ್ತಾರೆ. ಪಂಟರ್​ಗಳು ಬೆಟ್ಟಿಂಗ್ ಕಟ್ಟುತ್ತಾರೆ. ಇವರ ನೆಟ್ವರ್ಕ್ ದೇಶಾದ್ಯಂತ ಇರುತ್ತದೆ. ಚುನಾವಣೆ ಸಂದರ್ಭದಲ್ಲಿ ಪ್ರಮುಖ ಪ್ರದೇಶಗಳಲ್ಲಿನ ಜಾತಿವಾರು ಅಂಶ ಇತ್ಯಾದಿ ಎಲ್ಲ ಮಾಹಿತಿ ಕಲೆ ಹಾಕಿ ಯಾರು ಗೆಲ್ಲಬಹುದು ಎಂದು ಒಂದು ಅಂದಾಜಿಗೆ ಬರುತ್ತಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ, ಇನ್ನೆರಡು ಹಂತಗಳು ಬಾಕಿ, ಒಟ್ಟು ಎಷ್ಟು ರಾಜ್ಯಗಳು, ಕ್ಷೇತ್ರಗಳಿಗೆ ನಡೆಯಲಿದೆ ಮತದಾನ?

ಸಟ್ಟಾ ಬಜಾರ್ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು?

ಫಲೋದಿ ಸಟ್ಟಾ ಬಜಾರ್ ಪ್ರಕಾರ ಬಿಜೆಪಿ 300 ಆಸುಪಾಸಿನ ಸಂಖ್ಯೆಯಷ್ಟು ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ ಪಕ್ಷ 40-42 ಸ್ಥಾನಗಳನ್ನು ಮಾತ್ರ ಗೆಲ್ಲಬಹುದು ಎಂದಿದೆ. ಮೇ 13ಕ್ಕೆ ಮಾಡಲಾಗಿರುವ ಅಂದಾಜು ಇದು.

ರಾಷ್ಟ್ರಮಟ್ಟದಲ್ಲಿ ಇರುವ ಬೆಟ್ಟಿಂಗ್ ಮಾರುಕಟ್ಟೆ ಪ್ರಕಾರ ಬಿಜೆಪಿ 280ರಿಂದ 290 ಸ್ಥಾನ ಗೆಲ್ಲಬಹುದು. ಕಾಂಗ್ರೆಸ್​ಗೆ 70ರಿಂದ 85 ಸ್ಥಾನ ಸಿಕ್ಕಬಹುದು.

ಈಗಾಗಲೇ ಐದು ಹಂತದ ಚುನಾವಣೆ ಮುಗಿದಿದ್ದು, ಇನ್ನೆರಡು ಹಂತದ ಮತದಾನ ಬಾಕಿ ಇದೆ. ದಿನಗಳುರುಳಿದಂತೆ ಬೆಟ್ಟಿಂಗ್ ದಿಕ್ಕು ತುಸು ಬದಲಾದರೂ ಆಗಬಹುದು.

ಇದನ್ನೂ ಓದಿ: 21ನೇ ಶತಮಾನದಲ್ಲಿ ಭಾರತವು ಇಂಡಿಯಾ ಮೈತ್ರಿಕೂಟದ ಪಾಪಗಳೊಂದಿಗೆ ಮುಂದುವರೆಯಲು ಸಾಧ್ಯವಿಲ್ಲ: ಮೋದಿ

ನಿಖರ ಭವಿಷ್ಯಕ್ಕೆ ಹೆಸರಾದ ಫಲೋದಿ ಬಜಾರ್

ಫಲೋದಿ ಸಟ್ಟಾ ಬಜಾರ್ ಈ ಹಿಂದೆ ಚುನಾವಣಾ ಫಲಿತಾಂಶಗಳ ಬಗ್ಗೆ ಮಾಡಿರುವ ಅಂದಾಜುಗಳು ಬಹುತೇಕ ವಾಸ್ತವಕ್ಕೆ ಸಮೀಪ ಇವೆ. ಹೀಗಾಗಿ, ಬಹಳಷ್ಟು ಜನರ ಕಣ್ಣು ಈ ಮಾರುಕಟ್ಟೆಯ ಮೇಲೆ ನೆಟ್ಟಿದೆ.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ