6 ರಾಜ್ಯಗಳಲ್ಲಿ ಚುನಾವಣಾ ಪ್ರಚಾರ: ಯುಪಿ-ಬಿಹಾರದಲ್ಲಿ ಮೋದಿ, ಒಡಿಶಾದಲ್ಲಿ ಅಮಿತ್ ಶಾ
Lok Sabha Elections 2024: ಲೋಕಸಭಾ ಚುನಾವಣೆಯ ಐದು ಹಂತಗಳು ಮುಕ್ತಾಯಗೊಂಡಿವೆ. ಕೊನೆಯ ಎರಡು ಹಂತ ಮತದಾನ ಮೇ 25 ಮತ್ತು ಜೂನ್ 1 ರಂದು ನಡೆಯಲಿದೆ. ಪ್ರಧಾನಿ ಮೋದಿ ಮತ್ತು ಜೆಪಿ ನಡ್ಡಾ ತಲಾ ಎರಡು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಒಡಿಶಾದ ಉಸ್ತುವಾರಿ ವಹಿಸಿಕೊಳ್ಳಲಿದ್ದು, ರಕ್ಷಣಾ ಸಚಿವ ರಾಜನಾಥ್ ಜಾರ್ಖಂಡ್‌ಗೆ ಭೇಟಿ ನೀಡಲಿದ್ದಾರೆ.
ಲೋಕಸಭಾ ಚುನಾವಣೆ(Lok Sabha Election) ಆರಂಭವಾಗಿದ್ದು, ಇನ್ನೆರಡು ಹಂತಗಳು ಬಾಕಿ ಇವೆ, ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಂತಹ ಹಿರಿಯ ನಾಯಕರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಪ್ರಧಾನಿ ಮೋದಿ ಇಂದು ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬಿಹಾರದ ಪೂರ್ವ ಚಂಪಾರಣ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ ಪ್ರಧಾನಿ ಮೋದಿಯವರ ಮೊದಲ ಸಾರ್ವಜನಿಕ ಸಭೆ ನಡೆಯಲಿದೆ.
ಬಿಹಾರದ ಮಹಾರಾಜ್‌ಗಂಜ್‌ನಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಪ್ರಧಾನಿ ಚುನಾವಣಾ ರ್ಯಾಲಿಯನ್ನು ನಡೆಸಲಿದ್ದಾರೆ. ಬಿಹಾರದಲ್ಲಿ ಎರಡು ರ್ಯಾಲಿಗಳ ನಂತರ ಪ್ರಧಾನಿ ಮೋದಿ ಉತ್ತರ ಪ್ರದೇಶಕ್ಕೆ ತೆರಳಲಿದ್ದಾರೆ. ಬಿಜೆಪಿ ಬಿಡುಗಡೆ ಮಾಡಿದ ಕಾರ್ಯಕ್ರಮಗಳ ಪ್ರಕಾರ, ಪ್ರಧಾನಿ ಮೋದಿ ಮಧ್ಯಾಹ್ನ 3.45 ಕ್ಕೆ ಪ್ರಯಾಗರಾಜ್‌ನಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ತೆರಳಲಿದ್ದಾರೆ.
ಮತ್ತಷ್ಟು ಓದಿ: PM Modi: ಜೂ.10ಕ್ಕೆ ಒಡಿಶಾದಲ್ಲಿ ಬಿಜೆಪಿಯ ಸಿಎಂ ಪ್ರಮಾಣವಚನ ಸ್ವೀಕಾರ ಖಚಿತ; ಪ್ರಧಾನಿ ಮೋದಿ ವಿಶ್ವಾಸ
ವಾರಾಣಸಿಯಲ್ಲಿ ಸಂಜೆ 5.30ರ ಸುಮಾರಿಗೆ ನಾರಿ ಶಕ್ತಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಧಾನಿ ಮೋದಿ ಹೊರತುಪಡಿಸಿ, ಗೃಹ ಸಚಿವ ಅಮಿತ್ ಶಾ ಒಡಿಶಾದಲ್ಲಿ ಬಿಜೆಪಿಯ ಪ್ರಚಾರದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
ಪಕ್ಷವು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಮಿತ್ ಶಾ ಮಂಗಳವಾರ ಒಡಿಶಾದಲ್ಲಿ ನಾಲ್ಕು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಬಲ್‌ಪುರ ಲೋಕಸಭಾ ಕ್ಷೇತ್ರದಿಂದ ಶಾ ಅವರ ರಾಜಕೀಯ ಕಾರ್ಯಕ್ರಮಗಳು ಆರಂಭವಾಗಲಿವೆ. ಇಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಆಯೋಜಿಸಲಾಗಿರುವ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಲಿದ್ದಾರೆ.
ಸಂಬಲ್‌ಪುರದ ನಂತರ, ಅಮಿತ್ ಶಾ ಮಧ್ಯಾಹ್ನ 12.30 ರಿಂದ ಕೆಂಡುಜಾರ್ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಇದಾದ ನಂತರ ಧೆಂಕನಲ್ ಲೋಕಸಭೆಗೆ ತೆರಳಲಿದ್ದಾರೆ. ಮಧ್ಯಾಹ್ನ ಸುಮಾರು 2:15 ರಿಂದ ಇಲ್ಲಿ ಚುನಾವಣಾ ರ ್ಯಾಲಿ ನಡೆಯಲಿದೆ. ದಿನದ ಕೊನೆಯ ಚುನಾವಣಾ ರ್ಯಾಲಿಯನ್ನು ಪುರಿಯಲ್ಲಿ ಪ್ರಸ್ತಾಪಿಸಲಾಗಿದೆ. ಸಂಜೆ 4 ಗಂಟೆಯಿಂದ ಪುರಿಯ ನಯಾಗಢದಲ್ಲಿ ಚುನಾವಣಾ ರ್ಯಾಲಿ ನಡೆಸಲಿದ್ದಾರೆ.
ನಡ್ಡಾ ಹರ್ಯಾಣ ಮತ್ತು ದೆಹಲಿಯಲ್ಲಿ ರೋಡ್ ಶೋ ಜೊತೆಗೆ ಸಾರ್ವಜನಿಕ ಸಭೆಯನ್ನೂ ನಡೆಸಲಿದ್ದಾರೆ. ನಡ್ಡಾ ರೋಹ್ಟಕ್ ಜಿಲ್ಲೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಇದಾದ ಬಳಿಕ ಜಿಂದ್ ಜಿಲ್ಲೆಯಲ್ಲೂ ರೋಡ್ ಶೋ ನಡೆಸುವ ಯೋಜನೆ ಇದೆ.
ನಡ್ಡಾ ಅವರು ರಾತ್ರಿ 8 ಗಂಟೆಗೆ ವಾಯುವ್ಯ ದೆಹಲಿಯಲ್ಲಿ ಚುನಾವಣಾ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಪ್ರಮುಖ ಬಿಜೆಪಿ ನಾಯಕರಲ್ಲದೆ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಾರ್ಖಂಡ್ ಪ್ರವಾಸದಲ್ಲಿದ್ದಾರೆ. ರಾಜನಾಥ್ ಅವರು ಮಧ್ಯಾಹ್ನ 12.35 ರಿಂದ ಬೊಕಾರೊದಲ್ಲಿ ಧುಲು ಮಹತೋ ಪರವಾಗಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಿಜೆಪಿಯ ಬಿರುಸಿನ ಚುನಾವಣಾ ಪ್ರಚಾರದ ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಮತದಾರರ ಓಲೈಕೆಯಲ್ಲಿ ನಿರತವಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ರ್ಯಾಲಿ ಮತ್ತು ರೋಡ್ ಶೋ ನಡೆಸಬಹುದು. ಪಕ್ಷ ತನ್ನ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ