Weather Today: ಕೇರಳದ 3 ಜಿಲ್ಲೆಗಳಿಗೆ ರೆಡ್ ಅಲರ್ಟ್; ತಮಿಳುನಾಡಿನಲ್ಲೂ ಇನ್ನೆರರಡು ದಿನ ಮಳೆ

Kerala Rains: ತಮಿಳುನಾಡು, ಪುದುಚೇರಿಯಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಮೇ 22ರಂದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ. ಕೇರಳದಲ್ಲಿ ಮಳೆಯ ಆರ್ಭಟ ಹೆಚ್ಚಾಗಿರುವುದರಿಂದ ಅಧಿಕಾರಿಗಳು ಆಸ್ಪತ್ರೆಗಳನ್ನು ಅಲರ್ಟ್‌ನಲ್ಲಿ ಇರಿಸಿದ್ದಾರೆ. ಈಗಾಗಲೇ ವಿಪತ್ತು ನಿರ್ವಹಣಾ ತಂಡಗಳು ಕೆಲವೆಡೆ ಕಾರ್ಯಾಚರಣೆ ನಡೆಸುತ್ತಿವೆ.

Weather Today: ಕೇರಳದ 3 ಜಿಲ್ಲೆಗಳಿಗೆ ರೆಡ್ ಅಲರ್ಟ್; ತಮಿಳುನಾಡಿನಲ್ಲೂ ಇನ್ನೆರರಡು ದಿನ ಮಳೆ
ಮಳೆImage Credit source: istock
Follow us
|

Updated on: May 20, 2024 | 10:56 PM

Rain Updates: ತಿರುವನಂತಪುರಂ: ಮೇ 24ರವರೆಗೆ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದ ನಂತರ ಕೇರಳದಲ್ಲಿ (Kerala Rains) ಹೈ ಅಲರ್ಟ್ ಮಾಡಲಾಗಿದೆ. ಇಂದು ಮತ್ತು ನಾಳೆ (ಮಂಗಳವಾರ) ಪಥನಾಂತಿಟ್ಟ, ಕೊಟ್ಟಾಯಂ, ಆಲಪ್ಪುಳ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ.

ಕೇರಳ ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಮತ್ತು ಮಣ್ಣು ಕುಸಿತದ ಸಾಧ್ಯತೆಗಳಿರುವುದರಿಂದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಕಚೇರಿಗಳಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ. ತಮಿಳುನಾಡು, ಪುದುಚೇರಿಯಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯೊಂದಿಗೆ ಹಲವು ಅಥವಾ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ತಮಿಳುನಾಡಿನ ಕೆಲವು ಭಾಗಗಳಲ್ಲಿ ಇಂದು ತೀವ್ರ ಮಳೆಯಾಗಿದ್ದರೂ ಸಹ, ಪ್ರಾದೇಶಿಕ ಹವಾಮಾನ ಕೇಂದ್ರ, ಚೆನ್ನೈ, ಮೇ 22ರ ಸುಮಾರಿಗೆ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ವ್ಯವಸ್ಥೆಯು ರಚನೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಮುಂದಿನ 5 ದಿನಗಳಲ್ಲಿ (ಮೇ 24ರವರೆಗೆ) ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ಗುಡುಗು ಮತ್ತು ಮಿಂಚುಗಳೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Karnataka Rain: ರಾಜ್ಯದಲ್ಲಿ ಮೇ 22ರವರೆಗು ಮಳೆ, 17 ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

ಕೇರಳದ ಯಾವ ಪ್ರದೇಶಗಳಲ್ಲಿ ಮಳೆ?:

ನೀಲಗಿರಿ, ಕೊಯಮತ್ತೂರು, ತಿರುಪ್ಪೂರ್, ಥೇಣಿ, ದಿಂಡಿಗಲ್, ಪುದುಕೊಟ್ಟೈ, ತಂಜಾವೂರು ಜಿಲ್ಲೆಗಳಲ್ಲಿ ಮತ್ತು ಥೇಣಿ, ವಿರುಧುನಗರ, ತೆಂಕಶಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೇ 22ರ ಸುಮಾರಿಗೆ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ ಮತ್ತು ಇದು ಆರಂಭದಲ್ಲಿ ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವ ಜಿಲ್ಲೆಗಳಲ್ಲಿ ರೆಡ್ ಅಲರ್ಟ್?:

ಮೇ 21: ಪಥನಾಂತಿಟ್ಟ, ಕೊಟ್ಟಾಯಂ, ಇಡುಕ್ಕಿ ಮೇ 22: ಪಥನಾಂತಿಟ್ಟ ಈ ಜಿಲ್ಲೆಗಳಲ್ಲಿ 204.4 ಮಿಮೀ ಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Tamil Nadu Rains: ತಮಿಳುನಾಡಿನಲ್ಲಿ ಭಾರೀ ಮಳೆ; ಸಿಡಿಲು ಬಡಿದು ಇಬ್ಬರು ಸಾವು

ಆರೆಂಜ್ ಅಲರ್ಟ್:

ಮೇ 21: ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ತ್ರಿಶೂರ್ ಮೇ 22: ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಮೇ 23: ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
ಡಿಸಿಎಂಗಳ ಬಗ್ಗೆ ಕೇಳಿದಾಗ ರಾಜಣ್ಣ ವರಿಷ್ಠರು ತೆಪ್ಪಗಿರಲು ಹೇಳಿದ್ದಾರೆಂದರು
ಡಿಸಿಎಂಗಳ ಬಗ್ಗೆ ಕೇಳಿದಾಗ ರಾಜಣ್ಣ ವರಿಷ್ಠರು ತೆಪ್ಪಗಿರಲು ಹೇಳಿದ್ದಾರೆಂದರು