AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಣಾಸಿಗೆ ಇಂದು ಪ್ರಧಾನಿ ನರೇಂದ್ರ ಮೋದಿ: ಪ್ರಯಾಗ್​ರಾಜ್-ವಾರಣಾಸಿ ಹೆದ್ದಾರಿ ಕಾಮಗಾರಿಗೆ ಚಾಲನೆ

ಸ್ವಕ್ಷೇತ್ರ, ವಾರಣಾಸಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ನ.30) ಭೇಟಿ ನೀಡಲಿದ್ದು, ವಾರಣಾಸಿ-ಪ್ರಯಾಗ್​ರಾಜ್​ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಗಂಗಾ ನದಿಯ ತಟದಲ್ಲಿ ನಡೆಯಲಿರುವ ದೀಪೋತ್ಸವದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.

ವಾರಣಾಸಿಗೆ ಇಂದು ಪ್ರಧಾನಿ ನರೇಂದ್ರ ಮೋದಿ: ಪ್ರಯಾಗ್​ರಾಜ್-ವಾರಣಾಸಿ ಹೆದ್ದಾರಿ ಕಾಮಗಾರಿಗೆ ಚಾಲನೆ
ಪ್ರಧಾನಿ ಭೇಟಿಯ ಮುನ್ನಾ ದಿನವಾದ ಭಾನುವಾರ ದೀಪ ಬೆಳಗಿ ಸಂಭ್ರಮಿಸಿದ ವಾರಣಾಸಿ ನಿವಾಸಿಗಳು
Ghanashyam D M | ಡಿ.ಎಂ.ಘನಶ್ಯಾಮ
|

Updated on: Nov 30, 2020 | 10:41 AM

Share

ದೆಹಲಿ: ಸ್ವಕ್ಷೇತ್ರ, ಉತ್ತರ ಪ್ರದೇಶದ ವಾರಣಾಸಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ನ.30) ಭೇಟಿ ನೀಡಲಿದ್ದು, ವಾರಣಾಸಿ-ಪ್ರಯಾಗ್​ರಾಜ್​ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಗಂಗಾ ನದಿಯ ತಟದಲ್ಲಿ ನಡೆಯಲಿರುವ ದೀಪೋತ್ಸವದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಭೇಟಿಗೆ ನಗರವು ಸಜ್ಜಾಗಿದೆ. ಶ್ವಾನದಳದೊಂದಿಗೆ ಬೀದಿಬೀದಿಗಳಲ್ಲಿ ಸಂಚರಿಸುತ್ತಿರುವ ಭದ್ರತಾ ಸಿಬ್ಬಂದಿ ದಡದಲ್ಲಿ ನಿಂತಿರುವ ದೋಣಿಗಳ ತಪಾಸಣೆ ನಡೆಸುತ್ತಿದ್ದಾರೆ. ರಾಜಘಾಟ್​ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತಿ ಇಂಚನ್ನೂ ಜಾಲಾಡುತ್ತಿದ್ದಾರೆ.

ವಾರಣಾಸಿ ಭೇಟಿ ಸಂದರ್ಭ ಪ್ರಧಾನಿ ಹಾಂದಿಯಾ (ಪ್ರಯಾಗ್​ರಾಜ್) – ರಾಜ್​ತಲಾಬ್ (ವಾರಣಾಸಿ) ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು 6 ಲೇನ್​ಗೆ ವಿಸ್ತರಿಸುವ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ₹ 2447 ಕೋಟಿ ಅಂದಾಜು ವೆಚ್ಚದ ಈ ಕಾಮಗಾರಿ ಪೂರ್ಣಗೊಂಡ ನಂತರ, 73 ಕಿ.ಮೀ. ಅಂತರದದ ಪ್ರಯಾಗ್​ರಾಜ್ ಮತ್ತು ವಾರಣಾಸಿ ನಡುವಣ ಪ್ರಯಾಣದ ಅವಧಿ ಸುಮಾರು 1 ಗಂಟೆಯಷ್ಟು ಕಡಿಮೆಯಾಗಲಿದೆ ಎಂದು ಪ್ರಧಾನಿ ಕಚೇರಿ ಹೇಳಿಕೆ ತಿಳಿಸಿದೆ.

ಇಂದು ಕಾರ್ತೀಕ ಮಾಸದ ಹುಣ್ಣಿಮೆಯ ಪ್ರಯುಕ್ತ ವಾರಣಾಸಿಯಲ್ಲಿ ಸಂಪ್ರದಾಯದಂತೆ ದೇವ ದೀಪಾವಳಿ ಉತ್ಸವ ನಡೆಯಲಿದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಧಾನಿ, ರಾಜ್​ಘಾಟ್​ನಲ್ಲಿ ಹಣತೆಯೊಂದನ್ನು ಹಚ್ಚಲಿದ್ದಾರೆ. ನಂತರ ಗಂಗೆಯ ಎರಡೂ ತಟಗಳಲ್ಲಿ 11 ಲಕ್ಷ ಹಣತೆಗಳನ್ನು ಬೆಳಗಲಾಗುತ್ತದೆ.

ಪ್ರವಾಸದ ವೇಳೆ ಕಾಶಿ ವಿಶ್ವನಾಥ ದೇಗುಲ ಪಥ ಕಾಮಗಾರಿಯ ಸ್ಥಳಪರಿಶೀಲಿಸಲಿದ್ದಾರೆ. ಪುರಾತನ ಸ್ಮಾರಕ ಸಾರನಾಥದಲ್ಲಿ ನಡೆಯಲಿರುವ ಧ್ವನಿ-ಬೆಳಕು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: 100 ವರ್ಷಗಳ ಹಿಂದೆ ಕಳುವಾಗಿದ್ದ ಅನ್ನಪೂರ್ಣಾ ವಿಗ್ರಹ ಮರಳಿ ಭಾರತಕ್ಕೆ: ಮನ್​ ಕಿ ಬಾತ್​ನಲ್ಲಿ ಮೋದಿ ಖುಷಿ

Follow Us
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ