ಆಪರೇಷನ್ ಸಿಂದೂರ್​ ಯಶಸ್ವಿ: ಭಾರತೀಯ 3 ಸೇನೆ, ತಂತ್ರಜ್ಞರು, ಅಧಿಕಾರಿಗಳಿಗೆ ಮೋದಿ ಸೆಲ್ಯೂಟ್

ಆಪರೇಷನ್ ಸಿಂಧೂರ, ಭಾರತ, ಪಾಕಿಸ್ತಾನದ ಕದನ ವಿರಾಮದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಬಹಳ ಕಠಿಣವಾದ ಮಾತುಗಳನ್ನಾಡಿದ ಪ್ರಧಾನಿ, ನೇರವಾಗಿ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಕ್ ಕೊಟ್ಟಿದ್ದಾರೆ. ಇನ್ನು ಅಪರೇಷನ್ ಯಶಸ್ವಿಗೆ ಕಾರಣವಾರ ದೇಶದ ಮೂರು ಸೇನಾಪಡೆ, ತಂತ್ರಜ್ಞರು ಮತ್ತು ಅಧಿಕಾರಿಗಳಿಗೆ ಸೆಲ್ಯೂಟ್​ ಎಂದಿದ್ದಾರೆ.

ಆಪರೇಷನ್ ಸಿಂದೂರ್​ ಯಶಸ್ವಿ: ಭಾರತೀಯ 3 ಸೇನೆ, ತಂತ್ರಜ್ಞರು, ಅಧಿಕಾರಿಗಳಿಗೆ ಮೋದಿ ಸೆಲ್ಯೂಟ್
Narendra Modi

Updated on: May 12, 2025 | 9:15 PM

ನವದೆಹಲಿ, (ಮೇ 12) : ಆಪರೇಷನ್ ಸಿಂದೂರ್ (Operation Sindoor) ಯಶಸ್ವಿ ಕಾರ್ಯಾಚರಣೆ ಮತ್ತು ಪಾಕಿಸ್ತಾನದ ವಾಯುನೆಲೆಗಳ ಮೇಲೆ ಭಾರತದ ದಾಳಿ ಸೇರಿದಂತೆ ಹಲವು ವಿಷಯಗಳು ಕುರಿತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶವನ್ನು ಉದ್ದೇಶಿಸಿ ಮಾತಾಡಿದರು. ಈ ವಳೆ ಹಲವಾರ ವಿಚಾರಗಳ ಬಗ್ಗೆ ತಿಳಿಸಿದ್ದು, ಅದರಲ್ಲೂ ಮುಖ್ಯವಾಗಿ ಈ ಆಪರೇಷನ್ ಸಿಂದೂರವನ್ನು ದೇಶದ ಹೆಣ್ಣುಮಕ್ಕಳಿಗೆ ಸಮರ್ಪಣೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಭಾರತೀಯ ಮೂರು ಸೇನೆಗಳು, ತಂತ್ರಜ್ಞರು ಮತ್ತು ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಮ್ಮ ದೇಶದ ಮಹಿಳೆಯರ ಸಿಂದೂರವನ್ನು ಅಳಿಸಿದ್ರೆ ಏನಾಗುತ್ತೆ ಎಂದು ಆಪರೇಷನ್ ಸಿಂದೂರ ಮೂಲಕ ಉತ್ತರ ನೀಡಲಾಗಿದೆ. ಮೇ 6ರ ರಾತ್ರಿ, ಮೇ 7ರ ಬೆಳಗಿನ ಜಾವ ಆಪರೇಷನ್ ಸಿಂದೂರ ಕಾರ್ಯಚರಣೆ ನಡೆಸಲಾಯ್ತು. ನಾವು ನೇರವಾಗಿ ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಲಾಯ್ತು. ಭಾರತ ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ ಪಾಕಿಸ್ತಾನ ಕಲ್ಪನೆಯೂ ಮಾಡಿಕೊಂಡಿರಲಿಲ್ಲ. ಪಾಕಿಸ್ತಾನ ತನ್ನ ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿತು. ಇವುಗಳನ್ನು ನಾಶಪಡಿಸುವ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಲಾಗಿದೆ ಎಂದರು.

ಇದನ್ನೂ ಓದಿ: Operation Sindoor: ದೇಶದ ಹೆಣ್ಣುಮಕ್ಕಳಿಗೆ ‘ಆಪರೇಷನ್ ಸಿಂಧೂರ’ ಅರ್ಪಿಸಿದ ಪ್ರಧಾನಿ ಮೋದಿ

ಡ್ರೋನ್ ಮತ್ತು ಕ್ಷಿಪಣಿ ದಾಳಿಯೂ ಭಯೋತ್ಪಾದಕ ಚಟುವಟಿಕೆ ಎಂದು ಹೇಳಿದರು. ಭಯೋತ್ಪಾದಕ ಪ್ರಧಾನ ಕಚೇರಿಯನ್ನೇ ಭಾರತ ನೆಲಸಮಗೊಳಿಸಿದೆ. ಉಗ್ರರ ವಿದ್ಯಾಲಯಗಳಾಗಿದ್ದ ತಾಣಗಳನ್ನು ಭಾರತ ಉಡೀಸ್ ಮಾಡಿದೆ. ಭಾರತ ಪ್ರತೀಕಾರದಿಂದ ಪಾಕಿಸ್ತಾನ ಕಂಗಾಲು ಆಗಿತ್ತು. ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ಭಾರತದ ಶಾಲಾ ಕಾಲೇಜು, ಮಸೀದಿ, ಗುರುದ್ವಾರ, ಚರ್ಚ್, ನಾಗರೀಕರ ನಿವಾಸಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಪಾಕ್‌ನಿಂದ ಹಾರಿ ಬಂದ ಡ್ರೋನ್‌ಗಳನ್ನು ಆಕಾಶದಲ್ಲಿಯೇ ಭಾರತ ನಾಶ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿದರು.

ಇದನ್ನೂ ಓದಿ
ಭಯೋತ್ಪಾದನೆ ಜೊತೆ ಮಾತುಕತೆ ಇಲ್ಲ: ಪಾಕ್​​ಗೆ ಮೋದಿ ಎಚ್ಚರಿಕೆ
ದೇಶದ ಹೆಣ್ಣುಮಕ್ಕಳಿಗೆ ‘ಆಪರೇಷನ್ ಸಿಂಧೂರ’ ಅರ್ಪಿಸಿದ ಪ್ರಧಾನಿ ಮೋದಿ
ಉಗ್ರರಲ್ಲಿ ನಡುಕ ಹುಟ್ಟಿಸಿದ್ದೇವೆ: ಪ್ರಧಾನಿ ನರೇಂದ್ರ ಮೋದಿ
ಮೂರು ಕಂಪನಿಗಳಿಂದ ಸ್ಪೈ ಸೆಟಿಲೈಟ್ ನಿರ್ಮಾಣ; ಸರ್ಕಾರದಿಂದ ತರಾತುರಿ

ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪಾಕ್ ಸೊಕ್ಕನ್ನು ಅಡಗಿಸಲಾಗಿದೆ. ಭಾರತ ಪ್ರತೀಕಾರಕ್ಕೆ ಬೆಚ್ಚಿದ ಪಾಕಿಸ್ತಾನ ಹಲವು ರಾಷ್ಟ್ರಗಳ ಮುಂದೆ ಹೋಗಿತ್ತು. ಭಾರತದ ಡಿಸಿಎಂಒಗೆ ಕರೆ ಮಾಡುವ ಮುನ್ನವೇ ಪಾಕಿಸ್ತಾನದ ಮೇಲೆ ದಾಳಿ ನಡೆಸಲಾಗಿತ್ತು ಎಂದು ಹೇಳಿದ ಮೋದಿ, ಭಾರತೀಯ ಮೂರು ಸೇನೆಗಳು, ತಂತ್ರಜ್ಞರು ಮತ್ತು ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ