ಅಮೆರಿಕದ ವಿಮಾನವೊಂದು ಮೇ 10ರಂದು ಪಾಕಿಸ್ತಾನಕ್ಕೆ ಬಂದಿದ್ದು ಯಾಕೆ? ಭಾರತದ ದಾಳಿಗಳಿಂದ ಅಮೆರಿಕವೂ ಬೆಚ್ಚಿತ್ತಾ?
US department of Energy deploys aircraft in Pakistan: ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸುವ ಪಾಕಿಸ್ತಾನಕ್ಕೆ ಭಾರತವು ಆಪರೇಷನ್ ಸಿಂದೂರದ ಮೂಲಕ ತಕ್ಕ ಶಾಸ್ತಿ ಮಾಡಿದೆ. ಭಾರತದ ದೈತ್ಯ ಮಿಲಿಟರಿ ಶಕ್ತಿಯು ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದೆ. ಅಲ್ಲಿಯ ಮಿಲಿಟರಿ ನೆಲೆಗಳನ್ನು ಭಾರತದ ಕ್ಷಿಪಣಿಗಳು ಚಿಂದಿ ಉಡಾಯಿಸಿವೆ. ಪರಮಾಣು ಶಸ್ತ್ರ ಸಂಗ್ರಹ ಇರುವ ಜಾಗದ ರಕ್ಷಣೆಗೆ ಅಮೆರಿಕದಿಂದ ಒಂದು ವಿಮಾನ ಬರಬೇಕಾಯಿತಂತೆ.

ನವದೆಹಲಿ, ಮೇ 12: ಆಪರೇಷನ್ ಸಿಂದೂರದ ವೇಳೆ ಭಾರತವು ಹಲವು ಮಿಲಿಟರಿ ಮತ್ತು ಪರಮಾಣ ನೆಲೆಗಳ (Pakistan military and nuclear base) ಮೇಲೆ ನಿಖರ ದಾಳಿ ಮಾಡಿತ್ತು. ಭಾರತದ ಕ್ಷಿಪಣಿ ದಾಳಿಗಳಿಗೆ ನೂರ್ ಖಾನ್ ಏರ್ಬೇಸ್ ಹಾನಿಗೊಂಡಿತು. ಭಾರತದ ಈ ಬಾಹುಬಲದಿಂದ ಪಾಕಿಸ್ತಾನ ಮಾತ್ರವಲ್ಲ ಅಮೆರಿಕವೂ ಬೆಚ್ಚಿತು ಎಂದೆನ್ನಲಾಗುತ್ತಿದೆ. ಪಾಕಿಸ್ತಾನದ ಪರಮಾಣ ಸಂಗ್ರಹ ಇದ್ದ ನೆಲೆಗಳನ್ನು ಗುರಿಯಾಗಿಸಿ ಭಾರತ ಮೇ 9ರಂದು ದಾಳಿ ಮಾಡಿತು. ಅದಾದ ಬಳಿಕ ಮೇ 10ರಂದು ಅಮೆರಿಕದ ವಿಮಾನವೊಂದು ಪಾಕಿಸ್ತಾನದ ಪರಮಾಣ ನೆಲೆಗೆ ಹಾರಿ ಬಂದಿತಂತೆ. ಹಾಗೊಂದು ಸುದ್ದಿಯನ್ನು ಇಂಡಿಯನ್ ಡಿಫೆನ್ಸ್ ರಿಸರ್ಚ್ ವಿಂಗ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ನೂರ್ ಖಾನ್ ವಾಯುನೆಲೆ, ಕಿರಾಣ ಹಿಲ್ಸ್ ನೆಲೆಯಲ್ಲಿ ಪರಮಾಣ ಶಸ್ತ್ರಾಸ್ತ್ರ ಸಂಗ್ರಹ ಇರುವ ಶಂಕೆ ಇದೆ. ಕಿರಾಣ ಹಿಲ್ಸ್ ಮೇಲೆ ದಾಳಿ ಮಾಡಿಲ್ಲ ಎಂದು ಭಾರತದ ಡಿಜಿಎಂಒ ಹೇಳಿದ್ಧಾರೆ. ಆದರೆ, ಯಾವ ಪರಮಾಣು ಕೇಂದ್ರವನ್ನು ಭಾರತ ಗುರಿ ಮಾಡಿತು ಎಂಬುದು ಸ್ಪಷ್ಟವಾಗಿಲ್ಲ. ವರದಿ ಪ್ರಕಾರ ಭಾರತವು ನಿಶ್ಚಿತವಾಗಿ ಪಾಕಿಸ್ತಾನದ ಪರಮಾಣ ಶಸ್ತ್ರ ಕೇಂದ್ರವನ್ನು ಗುರಿ ಮಾಡಿತ್ತು ಎಂದು ಹೇಳಲಾಗುತ್ತಿದೆ. ಡಿಜಿಎಂಒ ಅವರು ಪತ್ರಿಕಾಗೋಷ್ಠಿ ವೇಳೆ, ಪಾಕಿಸ್ತಾನದ 10 ಮಿಲಿಟರಿ ಬೇಸ್ಗಳ ಮೇಲೆ ದಾಳಿ ಮಾಡಲಾಯಿತು ಎಂದಷ್ಟೇ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಪ್ಯಾಲೆಸ್ಟೈನ್, ಪಾಕ್ ಬೆಂಬಲಿಸಿ ಕರಪತ್ರ ಹಂಚಿದ ದೇಶದ್ರೋಹಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ಸ್ಥಳೀಯ ನಾಗರಿಕರು
ಪಾಕಿಸ್ತಾನದ ರಕ್ಷಣೆಗೆ ಅಮೆರಿಕ ದಾವಿಸಿ ಬಂದಿದ್ದು ಯಾಕೆ?
ಅಮೆರಿಕದ ಎನರ್ಜಿ ಇಲಾಖೆಯು ವಿಶ್ವದ ಪರಮಾಣ ಕೇಂದ್ರಗಳ ಸುರಕ್ಷತೆಯನ್ನು ಗಮನಿಸುವ ಒಂದು ಏಜೆನ್ಸಿಯಾಗಿದೆ. ಭಾರತವು ಮೇ 9ರಂದು ಪಾಕಿಸ್ತಾನದ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ್ದು ಅಮೆರಿಕದ ಎನರ್ಜಿ ಡಿಪಾರ್ಟ್ಮೆಂಟ್ ಅನ್ನು ಎಚ್ಚರಿಸಿದೆ. ದಾಳಿಗೆ ಪರಮಾಣ ಕೇಂದ್ರ ಹಾನಿಯಾದರೆ ಅದರಿಂದ ಭಾರೀ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಇದನ್ನು ತಪ್ಪಿಸಲು ಅಮೆರಿಕದಿಂದ ವಿಮಾನವೊಂದು ಹಾರಿ ಬಂದಿತು ಎನ್ನಲಾಗಿದೆ.
ಐಡಿಆರ್ಡಬ್ಲ್ಯು ವರದಿಯಲ್ಲಿ ಮೇ 10ರಂದು ಫ್ಲೈಟ್ರಾಡಾರ್24ನಲ್ಲಿ ಫ್ಲೈಟ್ ಟ್ರ್ಯಾಕಿಂಗ್ ಡಾಟಾವನ್ನು ಪರಿಶೀಲಿಸಲಾಗಿದೆ. ಅಂದು, ಎನರ್ಜಿ ಡಿಪಾರ್ಟ್ಮೆಂಟ್ಗೆ ಸೇರಿದ ಬೀಚ್ಕ್ರಾಫ್ಟ್ ಎನ್111ಎಸ್ಝಡ್ ವಿಮಾನವು ಪಾಕಿಸ್ತಾನದ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿ ಬಳಿ ಕಾಣಿಸಿಕೊಂಡಿತು.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು 26 ಮಂದಿ ಪ್ರವಾಸಿಗರನ್ನು ಬಲಿ ಪಡೆದ ಘಟನೆ ಬಳಿಕ ಭಾರತ ಮೇ 7ರಂದು ಆಪರೇಷನ್ ಸಿಂದೂರ ನಡೆಸಿತು. ಇದರಲ್ಲಿ ಪಾಕಿಸ್ತಾನದ 9 ಸ್ಥಳಗಳಲ್ಲಿ 24 ಕ್ಷಿಪಣಿಗಳ ದಾಳಿ ಮಾಡಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಯಿತು. ಈ ಒಂದು ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಉಗ್ರರು ಹತರಾಗಿರಬಹುದು ಎಂದು ಭಾರತದ ಸೇನೆ ಹೇಳಿಕೊಂಡಿದೆ.
ಇದನ್ನೂ ಓದಿ: ಭಾರತದ ದಾಳಿಯಿಂದ ನಲುಗಿದ್ದ ಪಾಕಿಸ್ತಾನದಲ್ಲಿ ಭೂಕಂಪ
ಸಿಂದೂರ ಕಾರ್ಯಾಚರಣೆ ಬಳಿಕ ನಡೆದ ಎರಡು ದೇಶಗಳ ನಡುವಿನ ಚಕಮಕಿಯಲ್ಲಿ ಪಾಕಿಸ್ತಾನವು ನೂರಾರು ಡ್ರೋನ್ಗಳು, ಕ್ಷಿಪಣಿಗಳನ್ನು ಭಾರತಕ್ಕೆ ನುಗ್ಗಿಸಲು ಯತ್ನಿಸಿದೆ. ಆದರೆ, ಭಾರತದ ಡಿಫೆನ್ಸ್ ಸಿಸ್ಟಂ ಬಹುತೇಕ ಎಲ್ಲವನ್ನೂ ಸಮರ್ಥವಾಗಿ ತಡೆದಿದೆ. ಇದಕ್ಕೆ ಪ್ರತಿಯಾಗಿ ಭಾರತವು 10 ಮಿಲಿಟರಿ ನೆಲೆಗಳ ಮೇಲೆ ಪ್ರಿಸಿಶನ್ ಸ್ಟ್ರೈಕ್ ನಡೆಸಿದೆ. ಅದರಲ್ಲೂ ನೂರ್ ಖಾನ್ ಏರ್ ಬೇಸ್ ಮೇಲೆ ಮಾಡಿದ ದಾಳಿಯು ಪಾಕಿಸ್ತಾನವನ್ನು ಕಂಗೆಡಿಸಿತು ಎನ್ನಲಾಗಿದೆ. ಮೇ 10ರಂದು ಎರಡು ದೇಶಗಳ ಮಧ್ಯೆ ಕದನ ವಿರಾಮ ಏರ್ಪಟ್ಟಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




