ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Uddhav Thackeray) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಮುಂಬೈನಲ್ಲಿ(Mumbai) ನಡೆದ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ.ಮಂಗಳವಾರ ಮುಂಬೈನ ಐಎನ್‌ಎಸ್ ಶಿಕ್ರಾ ಹೆಲಿಪೋರ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಸಚಿವ ಆದಿತ್ಯ ಠಾಕ್ರೆ ಅವರು ಬರಮಾಡಿಕೊಂಡರು.ಅಲ್ಲಿಂದ ಮೊದಲ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಮತ್ತು ಪ್ರಧಾನಿ ರಾಜಭವನಕ್ಕೆ ಬಂದಿದ್ದಾರೆ. ಅಲ್ಲಿಂದ ಪ್ರಧಾನಿ ಮತ್ತು ಮುಖ್ಯಮಂತ್ರಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ಗೆ (BKC) ಹೋಗಲಿದ್ದು ಅಲ್ಲಿ ಅವರು ಎರಡನೇ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಲಿದ್ದಾರೆ. ವಿಐಪಿಗಳ ಸಂಚಾರವು ನಗರದಲ್ಲಿ ಟ್ರಾಫಿಕ್ ಚಲನೆಗೆ ಹೊಡೆತ ನೀಡುವ ಸಾಧ್ಯತೆಯಿರುವುದರಿಂದ ಮುಂಬೈ ಪೊಲೀಸರು ಸಂಚಾರ ಸಲಹೆಗಳನ್ನು ನೀಡಿದ್ದಾರೆ. ಉಪನಗರಗಳಲ್ಲಿನ ವ್ಯಾಪಾರ ಜಿಲ್ಲೆಯಾದ ಬಿಕೆಸಿಯಲ್ಲಿ ನಡೆದ ಕಾರ್ಯಕ್ರಮದ ನಂತರ ಮೋದಿ ನವದೆಹಲಿಗೆ ತೆರಳುತ್ತಾರೆ. ಸಂಜೆ ನಾಲ್ಕು ಗಂಟೆಗೆ ಪ್ರಧಾನಿಯವರು ಮುಂಬೈನ ರಾಜಭವನದಲ್ಲಿ ಜಲ್ ಭೂಷಣ್ ಬಿಲ್ಡಿಂಗ್ ಮತ್ತು ಗ್ಯಾಲರಿ ಆಫ್ ರೆವಲ್ಯೂಷನರೀಸ್ ಉದ್ಘಾಟಿಸಲಿದ್ದಾರೆ. ಅವರು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ‘ಮುಂಬೈ ಸಮಾಚಾರ’ದ ‘ದ್ವಿಶತಾಬ್ದಿ ಮಹೋತ್ಸವ’ (200 ನೇ ವಾರ್ಷಿಕೋತ್ಸವದ ಆಚರಣೆಗ) ಉದ್ದೇಶಿಸಿ ಮಾತನಾಡಲಿದ್ದಾರೆ.
ಶಿವಸೇನಾ ಬೇರ್ಪಟ್ಟ ನಂತರ ಮತ್ತು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸಿ ನಂತರ ಇಬ್ಬರು ನಾಯಕರ ನಡುವಿನ ಸಂಬಂಧಗಳು ಹದಗೆಟ್ಟವು. ಅಂದಿನಿಂದ, ಮಹಾರಾಷ್ಟ್ರ ಮುಖ್ಯಮಂತ್ರಿ ವಿವಿಧ ಸಂದರ್ಭಗಳಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವರ್ಷದ ಏಪ್ರಿಲ್ 25 ರಂದು, ಉದ್ಧವ್ ಠಾಕ್ರೆ ಅವರು ಮುಂಬೈನಲ್ಲಿ ಪ್ರಧಾನಿ ಮೋದಿಯವರಿಗೆ ಮೊದಲ ಲತಾ ಮಂಗೇಶ್ಕರ್ ಪ್ರಶಸ್ತಿಯನ್ನು ಪ್ರದಾನ ಮಾಡಿದ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಪ್ರಧಾನಿ ಪಾಲ್ಗೊಳ್ಳುವ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಹಾಜರಾಗುವುದನ್ನು ಇಬ್ಬರು ವ್ಯಕ್ತಿಗಳ ನಡುವಿನ ಹಗ್ಗಜಗ್ಗಾಟದಂತೆ ನೋಡಲಾಗುತ್ತಿದೆ. ಇದೀಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಮಾಡಿದ ಕಾಮೆಂಟ್‌ಗಳ ಕುರಿತು ಬಿಜೆಪಿ ವಿರುದ್ಧ ಮುಖ್ಯಮಂತ್ರಿ ತೀವ್ರ ವಾಗ್ದಾಳಿ ನಡೆಸಿದ ಒಂದು ವಾರದ ನಂತರ ಇದು ಬಂದಿದೆ ರಾಜ್ಯಸಭಾ ಚುನಾವಣೆಯಲ್ಲಿ ತನ್ನ ಎರಡನೇ ಅಭ್ಯರ್ಥಿಯ ಸೋಲಿನ ಬಗ್ಗೆ ಶಿವಸೇನಾ ಎನ್‌ಸಿಪಿಯೊಂದಿಗೆ ಅಸಮಾಧಾನಗೊಂಡಿದೆ ಎಂಬ ವರದಿಗಳ ಮಧ್ಯೆಯೇ ಈ ಕಾರ್ಯಕ್ರಮ ಬಂದಿದೆ. ಆದಾಗ್ಯೂ, ಮುಖ್ಯಮಂತ್ರಿಗಳು ಪ್ರಧಾನಿಯನ್ನು ಸ್ವೀಕರಿಸುವುದು ಶಿಷ್ಟಾಚಾರದ ವಿಷಯವಾಗಿದೆ. ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಎರಡೂ ಪಕ್ಷಗಳು ಹೇಳುತ್ತವೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:40 pm, Tue, 14 June 22