ಅಹ್ಮದಾಬಾದ್​ಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದ ನೀರಜ್​ ಚೋಪ್ರಾರನ್ನು ಸರಣಿ ಟ್ವೀಟ್​ ಮೂಲಕ ಹೊಗಳಿದ ಪ್ರಧಾನಿ ಮೋದಿ

ನೀರಜ್​ ಚೋಪ್ರಾ ಮಕ್ಕಳಿಗೆ ಶೇಕ್​ ಹ್ಯಾಂಡ್ ಮಾಡಿ, ಅವರೊಂದಿಗೆ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ಡಿಡಿ ನ್ಯೂಸ್​​ ಶೇರ್​ ಮಾಡಿಕೊಂಡಿತ್ತು. ಅದನ್ನು ಕೂಡ ಪ್ರಧಾನಿ ಮೋದಿ ರೀಟ್ವೀಟ್​ ಮಾಡಿದ್ದಾರೆ.

ಅಹ್ಮದಾಬಾದ್​ಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದ ನೀರಜ್​ ಚೋಪ್ರಾರನ್ನು ಸರಣಿ ಟ್ವೀಟ್​ ಮೂಲಕ ಹೊಗಳಿದ ಪ್ರಧಾನಿ ಮೋದಿ
ನೀರಜ್​ ಚೋಪ್ರಾ ಮತ್ತು ಪ್ರಧಾನಿ ಮೋದಿ
Follow us
TV9 Web
| Updated By: Lakshmi Hegde

Updated on: Dec 06, 2021 | 7:47 AM

ಒಲಿಂಪಿಕ್ಸ್​​ನಲ್ಲಿ ಜಾವಲಿನ್​ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ನಿನ್ನೆ ಗುಜರಾತ್​​ನ ಅಹ್ಮದಾಬಾದ್​ನಲ್ಲಿರುವ ಸಂಸ್ಕಾರಧಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿಗೆ ಆಗಮಿಸಿದ್ದ ಸುಮಾರು 75 ಶಾಲೆಗಳ ಮಕ್ಕಳ ಬಳಿ ಸಂವಾದ ನಡೆಸಿದರು. ಹಾಗೇ, ಜಾವಲಿನ್​ ಎಸೆತದ ತರಬೇತಿ ಕೂಡ ನೀಡಿದರು. ಆಟಗಳನ್ನು ಆಡುವ ಮೂಲಕ ಸದಾ ಫಿಟ್​ ಆಗಿರಿ ಎಂಬ ಸಲಹೆಯನ್ನೂ ಕೊಟ್ಟರು.  ಇದೇವೇಳೆ ಮಕ್ಕಳೊಂದಿಗೆ ಸೇರಿ ಆರ್ಚರಿ, ವಾಲಿಬಾಲ್​, ಜಾವಲಿನ್​ ಎಸೆತದ ಆಟಗಳನ್ನು ಆಡಿದರು. 

ಹೀಗೆ ಸಂಸ್ಕಾರಧಾಮ ಭೇಟಿ ನೀಡಿ ಮಕ್ಕಳೊಂದಿಗೆ ಕಾಲ ಕಳೆದು, ಅವರೊಂದಿಗೆ ಸಂವಾದ ನಡೆಸಿದ ನೀರಜ್​ ಚೋಪ್ರಾರನ್ನು ಪ್ರಧಾನಿ ಮೋದಿ ಸರಣಿ ಟ್ವೀಟ್​ ಮೂಲಕ ಹೊಗಳಿದ್ದಾರೆ. ಚಿಕ್ಕ ಮಕ್ಕಳ ಬಳಿ ಹೋಗಿ, ಅವರಲ್ಲಿ ಆಟ ಮತ್ತು ಫಿಟ್ನೆಸ್​ ಅರಿವು ಮೂಡಿಸುವ ಮೂಲಕ ನೀರಜ್​ ಚೋಪ್ರಾ ಒಂದು ಒಳ್ಳೆಯ ಉಪಕ್ರಮ ತೆಗೆದುಕೊಂಡಿದ್ದಾರೆ. ಇಂಥ ಪ್ರಯತ್ನಗಳನ್ನು ಮಾಡಿದರೆ ಮಕ್ಕಳಲ್ಲಿ ಆಟ ಮತ್ತು ವ್ಯಾಯಾಮದ ಬಗ್ಗೆ ಆಸಕ್ತಿ ಮೂಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ಹಾಗೇ, ನಿನ್ನೆ ನೀರಜ್​ ಚೋಪ್ರಾ ತಾವು ಸಂಸ್ಕೃತಧಾಮಕ್ಕೆ ಭೇಟಿಕೊಟ್ಟಿದ್ದಾಗಿ ಮಾಡಿಕೊಂಡಿದ್ದ ಟ್ವೀಟ್​​ನ್ನೂ ರೀಟ್ವೀಟ್​ ಮಾಡಿಕೊಂಡಿದ್ದಾರೆ.

ಹಾಗೇ, ನೀರಜ್​ ಚೋಪ್ರಾ ಮಕ್ಕಳಿಗೆ ಶೇಕ್​ ಹ್ಯಾಂಡ್ ಮಾಡಿ, ಅವರೊಂದಿಗೆ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ಡಿಡಿ ನ್ಯೂಸ್​​ ಶೇರ್​ ಮಾಡಿಕೊಂಡಿತ್ತು. ಅದನ್ನು ಕೂಡ ರೀಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಇದನ್ನು ನೋಡಿದರೆ ಖಂಡಿತ ನಿಮಗೆಲ್ಲರಿಗೂ ಸಂತೋಷವಾಗದೆ ಇರದು. ಇದೇ ಕ್ರಮ ಮುಂದುವರಿಸೋಣ ಮತ್ತು ನಮ್ಮ ಯುವಜನತೆ ಕ್ರೀಡೆಯಲ್ಲಿ ಮಿಂಚುವಂತೆ ಪ್ರೇರೇಪಿಸೋಣ ಎಂದಿದ್ದಾರೆ. ಹಾಗೇ, ನೀರಜ್​ ಚೋಪ್ರಾ ಸಣ್ಣ ಬಾಲಕನಿಗೆ ಜಾವಲಿನ್​ ಎಸೆತದ ಟ್ರೇನಿಂಗ್​ ಕೊಟ್ಟ ವಿಡಿಯೋವೊಂದನ್ನು ಸಂಸ್ಕಾರಧಾಮ ಶೇರ್​ ಮಾಡಿಕೊಂಡಿದ್ದು, ಅದನ್ನು ಕೂಡ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ. ಅದ್ಭುತ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

ಯುವಜನರಿಗೆ ವ್ಯಾಯಾಮ ಚಟುವಟಿಕೆಗಳು ಮತ್ತು ಸಮತೋಲಿತ ಆಹಾರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರಧಾನಿ ಪ್ರಾರಂಭಿಸಿರುವ, ಯುವಜನರು, ಮಕ್ಕಳೊಂದಿಗೆ ಕ್ರೀಡಾಪಟುಗಳ ಸಂವಾದ ಕಾರ್ಯಕ್ರಮ ನೀರಜ್​ ಚೋಪ್ರಾ ಉದ್ಘಾಟಿಸಿದ್ದಾರೆ.  ನಂತರ ಟ್ವೀಟ್​ ಮಾಡಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ಶ್ರೀ ವಿಷ್ಣುಸಹಸ್ರನಾಮದಲ್ಲಿ ಶ್ರೀ ರಾಮ ರಾಮ ರಾಮೇತಿ ಶ್ಲೋಕದ ಮಹಿಮೆ, ಇದೊಂದು ಮಂತ್ರ ಶ್ರೀ ವಿಷ್ಣುಸಹಸ್ರನಾಮಕ್ಕೆ ಸಮ ಹೇಗೆ?

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ