AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಭಾರತಕ್ಕೆ ಭೇಟಿಕೊಡಲಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​; ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗಿ

India-Russia Summit: ಇಂದು ಸಂಜೆ 5.30ರ ಹೊತ್ತಿಗೆ ಪ್ರಧಾನಿ ಮೋದಿ ಮತ್ತು ವ್ಲಾಡಿಮಿರ್​ ಪುಟಿನ್​ ಶೃಂಗ ಮಾತುಕತೆ ಶುರು ಮಾಡಲಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.

ಇಂದು ಭಾರತಕ್ಕೆ ಭೇಟಿಕೊಡಲಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​; ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗಿ
ವ್ಲಾಡಿಮಿರ್​ ಪುಟಿನ್​ ಮತ್ತು ಪ್ರಧಾನಿ ಮೋದಿ
TV9 Web
| Updated By: Lakshmi Hegde|

Updated on:Dec 06, 2021 | 8:15 AM

Share

ದೆಹಲಿ: ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್( Vladimir Putin) ನವದೆಹಲಿಗೆ ಆಗಮಿಸಿಲಿದ್ದು, 21ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ(India-Russia Summit)ಯಲ್ಲಿ ಭಾಗವಹಿಸಲಿದ್ದಾರೆ. ಕೊರೊನಾ ವೈರಸ್​ ಸಾಂಕ್ರಾಮಿಕ ಶುರುವಾದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಮತ್ತು ಪುಟಿನ್ ಮುಖಾಮುಖಿ ಭೇಟಿಯಾಗುತ್ತಿದ್ದಾರೆ. ಈ ಭೇಟಿ ವೇಳೆ, ರಕ್ಷಣೆ, ವ್ಯಾಪಾರ, ಹೂಡಿಕೆ, ಇಂಧನ ಮತ್ತು ತಂತ್ರಜ್ಞಾನದಂಥ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಲು ಭಾರತ-ರಷ್ಯಾ  ಸಿದ್ಧವಾಗಿವೆ. 

ಇಂದು ಸಂಜೆ 5.30ರ ಹೊತ್ತಿಗೆ ಪ್ರಧಾನಿ ಮೋದಿ ಮತ್ತು ವ್ಲಾಡಿಮಿರ್​ ಪುಟಿನ್​ ಶೃಂಗ ಮಾತುಕತೆ ಶುರು ಮಾಡಲಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ. ನಂತರ ಪುಟಿನ್​ ಸಂಜೆ 9.30ರ ವಿಮಾನಕ್ಕೆ ದೆಹಲಿಯಿಂದ ವಾಪಸ್​ ತೆರಳಲಿದ್ದಾರೆ. ಇನ್ನು  ಭಾರತ-ರಷ್ಯಾ ಜಂಟಿ ಉದ್ಯಮ, ಅಮೇಠಿಯ ಕೊರ್ವಾದಲ್ಲಿ 5 ಲಕ್ಷಕ್ಕೂ ಅಧಿಕ ರೈಫಲ್​ಗಳ ಉತ್ಪಾದನೆ ಮಾಡುವ 5000 ಕೋಟಿ ರೂ.ಮೌಲ್ಯದ ಎಕೆ ಕಲಾಶ್ನಿಕೋವ್​ ರೈಫಲ್ಸ್​ ಒಪ್ಪಂದವನ್ನು ಇತ್ತೀಚೆಗಷ್ಟೇ ಭಾರತ ತೆರವುಗೊಳಿಸಿದೆ. ಈ ಒಪ್ಪಂದ ದೀರ್ಘಕಾಲದಿಂದ ಬಾಕಿ ಇತ್ತು. ಕೆಲವೇ ದಿನಗಳ ಹಿಂದೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಇನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್ ರಷ್ಯಾದ ಸಹವರ್ತಿ ಲಾವ್ರೋವ್​ ಜತೆ ಮಾತುಕತೆ ನಡೆಸಲಿದ್ದು, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ರಷ್ಯಾದ ರಕ್ಷಣಾ ಸಚಿವ ಶೋಯ್ಗು ಅವರೊಂದಿಗೆ, ಭಾರತ-ರಷ್ಯಾ ಅಂತರ್-ಸರ್ಕಾರಿ ಆಯೋಗದ ಮಿಲಿಟರಿ-ತಾಂತ್ರಿಕ ಸಹಕಾರದ ಚೌಕಟ್ಟಿನ ಅಡಿಯಲ್ಲಿ ಮಾತುಕತೆ ನಡೆಸುವರು. ಅದಾದ ಬಳಿಕ ಬೆಳಗ್ಗೆ 11.30ಕ್ಕೆ ಎರಡೂ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಸೇರಿ 2+2 ಸಂವಾದ ನಡೆಸುವರು.

ಸೆಪ್ಟೆಂಬರ್ 2019 ರಲ್ಲಿ ವ್ಲಾಡಿವೋಸ್ಟಾಕ್‌ಗೆ ಮೋದಿಯವರ ಭೇಟಿಯ ಸಂದರ್ಭದಲ್ಲಿ ಕೊನೆಯ ವಾರ್ಷಿಕ ಶೃಂಗಸಭೆಯನ್ನು ನಡೆಸಲಾಯಿತು. ನವೆಂಬರ್ 2019 ರಲ್ಲಿ ಬ್ರೆಸಿಲಿಯಾದಲ್ಲಿ ಬ್ರಿಕ್ಸ್ ಶೃಂಗಸಭೆಯ ಕುರಿತು ಚರ್ಚಿಸಿದ ನಂತರ ಉಭಯ ನಾಯಕರ ನಡುವಿನ ಮೊದಲ ಮುಖಾಮುಖಿ ಸಭೆ ಇದಾಗಿದೆ. ಏಪ್ರಿಲ್ 28 ರಂದು 2+2 ಸಂವಾದವನ್ನು ಪ್ರಾರಂಭಿಸಲು ಮೋದಿ ಮತ್ತು ಪುಟಿನ್ ಅವರು ದೂರವಾಣಿ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದರು. ಭಾರತವು ಪ್ರಸ್ತುತ 2+2 ಸಚಿವರ ಮಾತುಕತೆಗಳನ್ನು ಆಸ್ಟ್ರೇಲಿಯಾ, ಜಪಾನ್ ಮತ್ತು ಯುಎಸ್‌ನೊಂದಿಗೆ ಮಾತ್ರ ಹೊಂದಿದೆ.

ಇದನ್ನೂ ಓದಿ: ಅಹ್ಮದಾಬಾದ್​ಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದ ನೀರಜ್​ ಚೋಪ್ರಾರನ್ನು ಸರಣಿ ಟ್ವೀಟ್​ ಮೂಲಕ ಹೊಗಳಿದ ಪ್ರಧಾನಿ ಮೋದಿ

Published On - 8:14 am, Mon, 6 December 21