ದೆಹಲಿ: ನಾಳೆ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಹೊಸ ಇಲಾಖೆಯನ್ನೇ ಸೃಷ್ಟಿಸಲಾಗಿದೆ. ಕೇಂದ್ರ ಸರ್ಕಾರದಿಂದ ಹೊಸದಾಗಿ ಸಹಕಾರ ಇಲಾಖೆ ಸೃಷ್ಟಿಸಿದ್ದು, ದೇಶದ ಸಹಕಾರ ಚಳವಳಿ ಬಲಪಡಿಸಲು ಹೊಸ ಇಲಾಖೆ ರೂಪಿಸಲಾಗಿದೆ. ಹೊಸ ಇಲಾಖೆಗೆ ನಾಳೆ ಪ್ರಧಾನಿ ಮೋದಿ ಸಚಿವರನ್ನು ನೇಮಿಸಲಿದ್ದಾರೆ. ಈಸಿ ಆಫ್ ಡೂಯಿಂಗ್ ಗೆ ಸಹಕಾರ ಇಲಾಖೆ ಸೃಷ್ಟಿಸಲಾಗಿದೆ.
ದೇಶದಲ್ಲಿ ಸಹಕಾರ ಕ್ಷೇತ್ರವನ್ನು ಅತ್ಯಂತ ತಳಮಟ್ಟದಿಂದ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಈ ಹೊಸ ಇಲಾಖೆಯನ್ನು ಆರಂಭಿಸಿದೆ. ಸಹಕಾರ ಇಲಾಖೆಗೆ ಪ್ರತ್ಯೇಕ ನೀತಿ ನಿಯಮಗಳನ್ನು ರೂಪಿಸಿ, ಆಡಳಿತಕ್ಕೆ ಸಂಬಂಧಿಸಿದ ರೂಪು ರೇಷೆಗಳನ್ನುಅಭಿವೃದ್ಧಿಪಡಿಸಲಿದೆ. ಭಾರತದಂತಹ ಗ್ರಾಮೀಣ ಹಿನ್ನೆಲೆಯ ದೇಶದಲ್ಲಿ ಸಹಕಾರ ಪದ್ಧತಿಯ ಆಧಾರದ ಮೇಲೆ ರೂಪುಗೊಂಡಿರುವ ಆರ್ಥಿಕ ವ್ಯವಸ್ಥೆಯನ್ನು ಕೇಂದ್ರೀಕರಿಸಿಕೊಂಡು ಕೇಂದ್ರ ಸರ್ಕಾರ ಹೊಸದಾಗಿ ಸಹಕಾರ ಇಲಾಖೆಯನ್ನು ಸೃಜಿಸಿದೆ.
ಜತೆಗೆ ಅಂತರಾಜ್ಯ ಸಹಕಾರಿ ಸಂಘಗಳನ್ನು ಇನ್ನಷ್ಟು ಬಲಗೊಳಿಸುವ ಮಹತ್ವಾಕಾಂಕ್ಷೆಯೂ ಹೊಸ ಇಲಾಖೆಯ ಸೃಷ್ಟಿಯ ಹಿಂದೆ ಇದೆ ಎಂದು ಹೇಳಲಾಗಿದೆ. ಸಮುದಾಯಗಳನ್ನು ಒಳಗೊಂಡ ಅಭಿವೃದ್ಧಿ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ದೇಶದಲ್ಲಿ ಮುನ್ನೆಲೆಗೆ ತರುವ ಉದ್ದೇಶವೂ ಈ ಇಲಾಖೆಗೆ ಇದೆ. ರೈತ ಸಮುದಾಯ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಯತ್ತ ಸಹಕಾರ ಇಲಾಖೆಯ ಗಮನ ಇರಿಸುವ ಗುರಿ ಹೊಂದಲಾಗಿದೆ.
ಇದನ್ನೂ ಓದಿ:
ಮೋದಿ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ಗುರುವಾರದ ವಿಸ್ತರಣೆಯಲ್ಲಿ ಕರ್ನಾಟಕಕ್ಕೆ ಸಿಗಬಹುದೇ ಹೆಚ್ಚಿನ ಸ್ಥಾನ?
ಪಂಚ ರಾಜ್ಯ ಚುನಾವಣೆ ಮೇಲೆ ಕಣ್ಣಿಟ್ಟು ಗುರುವಾರ ಬೆಳಗ್ಗೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಮಣೆ
(PM Narendra Modi Cabinet Expansion started new Ministry of Co Operation to New push to cooperative movement )
Published On - 10:34 pm, Tue, 6 July 21