ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಸೋಮವಾರ) ಕಾಂಗ್ರೆಸ್ (Congress) ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಮೇಲೆ ತುರ್ತು ಪರಿಸ್ಥಿತಿಯನ್ನು “ಕಪ್ಪು ಚುಕ್ಕೆ” ಎಂದು ಬಣ್ಣಿಸಿದ್ದಾರೆ. 18ನೇ ಲೋಕಸಭೆಯ ಮೊದಲ ಅಧಿವೇಶನದ ಮೊದಲು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಾಳೆ (ಜೂನ್ 25) ಭಾರತದ ಪ್ರಜಾಪ್ರಭುತ್ವದ ಮೇಲೆ ಉಂಟಾದ ತುರ್ತು ಪರಿಸ್ಥಿತಿಯ ಕಳಂಕ 50 ವರ್ಷಗಳನ್ನು ಸೂಚಿಸುತ್ತದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಇದನ್ನು 100 ಬಾರಿಯಾದರೂ ಹೇಳಿದ್ದಾರೆ. 5 ವರ್ಷಗಳ ಹಿಂದೆ ಎನ್ಡಿಎ ಸರ್ಕಾರವೂ ತುರ್ತು ಪರಿಸ್ಥಿತಿ ರೀತಿಯದ್ದೇ ಪರಿಸ್ಥಿತಿಯನ್ನು ಉಂಟುಮಾಡಿತ್ತು. ತುರ್ತು ಪರಿಸ್ಥಿತಿಯನ್ನು ಘೋಷಿಸದೆ ನೀವು ಈ ರೀತಿ ವರ್ತಿಸುತ್ತಿದ್ದೀರಿ. ಇದನ್ನು ತಂದು ಎಷ್ಟು ದಿನ ಆಡಳಿತ ನಡೆಸಲು ನೀವು ಪ್ಲಾನ್ ಮಾಡುತ್ತಿದ್ದೀರಿ?” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
PM Modi made a longer than usual customary address today. Clearly, even after moral and political defeat, the arrogance remains !
The nation was hoping that Modi ji would say something on many important issues.
🔹He will show some sympathy towards the youth regarding the paper… pic.twitter.com/GvdLOGCXCy
— Mallikarjun Kharge (@kharge) June 24, 2024
ಪ್ರಧಾನಿ ಮೋದಿ ಅವರು ಪ್ರಸ್ತುತವಾದ ವಿಷಯಗಳ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಅಗತ್ಯಕ್ಕಿಂತ ಹೆಚ್ಚಾಗಿ “ಸಾಮಾನ್ಯ ಪದಗಳನ್ನು” ಬಳಸಿದ್ದಾರೆ ಎಂದು ಖರ್ಗೆ ಟೀಕಿಸಿದ್ದಾರೆ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ “ನೀಟ್ ಮತ್ತು ಇತರ ಪ್ರವೇಶ ಪರೀಕ್ಷೆಗಳಲ್ಲಿ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಅವರು ಯುವಕರ ಬಗ್ಗೆ ಸ್ವಲ್ಪ ಸಹಾನುಭೂತಿಯನ್ನು ತೋರಿಸುತ್ತಾರೆ. ಆದರೆ ತಮ್ಮ ಸರ್ಕಾರದ ಭ್ರಷ್ಟಾಚಾರಕ್ಕೆ ಅವರು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಭಾರತದ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಲು ಪ್ರತಿಪಕ್ಷಗಳು ಕೂಡ ನಮ್ಮೊಂದಿಗೆ ನಿಲ್ಲುವ ವಿಶ್ವಾಸವಿದೆ: ಮೋದಿ
“ಮೋದಿಯವರು ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತದ ಬಗ್ಗೆ ಮೌನವಾಗಿದ್ದಾರೆ. ಮಣಿಪುರವು ಕಳೆದ 13 ತಿಂಗಳಿನಿಂದ ಹಿಂಸಾಚಾರದ ಹಿಡಿತದಲ್ಲಿದೆ. ಆದರೆ ಮೋದಿಯವರು ಆ ಬಗ್ಗೆ ಮಾತನಾಡಲಿಲ್ಲ ಅಥವಾ ಇತ್ತೀಚಿನ ಹಿಂಸಾಚಾರದ ಬಗ್ಗೆ ಅವರು ತಮ್ಮ ಇಂದಿನ ಭಾಷಣದಲ್ಲಿ ಯಾವುದೇ ಕಾಳಜಿಯನ್ನು ವ್ಯಕ್ತಪಡಿಸಲಿಲ್ಲ.” ಎಂದು ಖರ್ಗೆ ಪೋಸ್ಟ್ ಮಾಡಿದ್ದಾರೆ.
ಅಸ್ಸಾಂನಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆಯೂ ಖರ್ಗೆ ಪ್ರಸ್ತಾಪಿಸಿದ್ದಾರೆ. “ಅಸ್ಸಾಂ ಮತ್ತು ಈಶಾನ್ಯದಲ್ಲಿ ಪ್ರವಾಹಗಳಿವೆ, ಹಣದುಬ್ಬರ, ರೂಪಾಯಿ ಕುಸಿತ, ಎಕ್ಸಿಟ್ ಪೋಲ್-ಸ್ಟಾಕ್ ಮಾರ್ಕೆಟ್ ಹಗರಣದ ಬಗ್ಗೆ ಮೋದಿ ಸರ್ಕಾರ ಮೌನ ತಾಳಿದೆ. ಮೋದಿ ಸರ್ಕಾರವು ಮುಂದಿನ ಜನಗಣತಿಯನ್ನು ದೀರ್ಘಕಾಲದವರೆಗೆ ಬಾಕಿ ಇರಿಸಿದೆ ಎಂದು ಖರ್ಗೆ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Robert Vadra: ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಸವಾಲು ಹಾಕುತ್ತಾರೆ; ರಾಬರ್ಟ್ ವಾದ್ರಾ
ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಅವರು 50 ವರ್ಷಗಳಷ್ಟು ಹಳೆಯ ತುರ್ತು ಪರಿಸ್ಥಿತಿಯನ್ನು ಜನರಿಗೆ ನೆನಪಿಸುತ್ತಿದ್ದಾರೆ. ಆದರೆ, ಕಳೆದ 10 ವರ್ಷಗಳ ಅಘೋಷಿತ ತುರ್ತು ಪರಿಸ್ಥಿತಿಯನ್ನು ಮರೆತಿದ್ದಾರೆ ಎಂದು ಹೇಳಿದ್ದಾರೆ. ಅದನ್ನು ದೇಶದ ಜನರು ಕೊನೆಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಇಂದು ಸಂಸತ್ ಅಧಿವೇಶನಕ್ಕೂ ಮುನ್ನ ಮಾತನಾಡಿದ್ದ ಪಿಎಂ ಮೋದಿ, “ನಾಳೆ ಜೂನ್ 25. ಇದು ಭಾರತದ ಪ್ರಜಾಪ್ರಭುತ್ವದ ಮೇಲೆ ಹಾಕಲಾದ ಕಳಂಕಕ್ಕೆ 50 ವರ್ಷಗಳನ್ನು ಸೂಚಿಸುತ್ತದೆ. ಭಾರತದ ಹೊಸ ಪೀಳಿಗೆಯು ಅದನ್ನು ಎಂದಿಗೂ ಮರೆಯುವುದಿಲ್ಲ” ಎಂದು ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ