ಆಂಧ್ರಪ್ರದೇಶದ 9 ತಿಂಗಳ ಕಂದಮ್ಮ ಬದುಕುಳಿಯಲು ಬೇಕು 16 ಕೋಟಿ; ಬೇಕಿದೆ ನಿಮ್ಮ ಸಹಾಯಹಸ್ತ
ಮುದ್ದಾಗಿರುವ ಈ 9 ತಿಂಗಳ ಮಗು ಬೇರೆ ಮಕ್ಕಳಂತೆ ಆಟವಾಡಲಾರದು, ಕುಳಿತುಕೊಳ್ಳಲಾರದು, ಸರಿಯಾಗಿ ಎದೆಹಾಲು ಕುಡಿಯಲು ಕೂಡ ಸಾಧ್ಯವಾಗದು. ನೋಡಲು ಬೇರೆ ಮಕ್ಕಳ ಹಾಗೆಯೇ ಕಾಣುವ ಈ ಪುಟ್ಟ ಕಂದಮ್ಮನಿಗೆ ಬೆನ್ನು ಮೂಳೆಯ ಸಮಸ್ಯೆ. ಇದು ಲಕ್ಷಾಂತರ ಮಕ್ಕಳಲ್ಲಿ ಒಂದು ಮಗುವಿಗೆ ಬರುವ ಅನುವಂಶೀಯ ಸಮಸ್ಯೆಯಾಗಿದೆ. ಈ ಮಗುವಿನ ಚಿಕಿತ್ಸೆಗೆ ನೀವು ನೀಡುವ ಸ್ವಲ್ಪ ಹಣವೂ ಬಹಳ ಸಹಾಯಕವಾಗುವುದರಲ್ಲಿ ಅನುಮಾನವಿಲ್ಲ.
ಗುಂಟೂರು: ಈ ಮಗುವಿಗೆ ಕೇವಲ 9 ತಿಂಗಳು. ಮುದ್ದಾದ ಈ ಮಗು ಮುಗುಳ್ನಗೆಯಲ್ಲೇ ಎಲ್ಲರ ಮನಸನ್ನೂ ಕರಗಿಸುತ್ತದೆ. ಆದರೆ, ವಿಪರ್ಯಾಸವೆಂದರೆ ಈ ಮಗು ಹಾಲು ಕುಡಿಯಲು ಸಾಧ್ಯವಿಲ್ಲ, ಸರಿಯಾಗಿ ಕುಳಿತುಕೊಳ್ಳಲು ಆಗುವುದಿಲ್ಲ. ಇದರಿಂದ ಪೋಷಕರಲ್ಲಿ ಆತಂಕ ಶುರುವಾಗಿ, ಮಗುವಿಗೆ ಏನಾಯಿತು ಎಂದು ತಿಳಿಯಲು ಅವರು ಎಲ್ಲಾ ವೈದ್ಯರ ಬಳಿಗೆ ಕರೆದುಕೊಂಡು ಹೋದರು. ವಿಜಯವಾಡ ಮತ್ತು ಗುಂಟೂರಿನಲ್ಲಿ (Guntur) ರೋಗ ಏನೆಂದು ಗೊತ್ತಾಗಲಿಲ್ಲ. ಹೀಗಾಗಿ, ಆ ಮಗುವನ್ನು ಬೆಂಗಳೂರಿನ ಬಾಪ್ಟಿಸ್ಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತಂಕದ ಸಂಗತಿ ಗೊತ್ತಾಯಿತು. ಈ ಮಗುವಿಗೆ ಇರುವುದು ಅತ್ಯಂತ ಅಪರೂಪವಾದ ಬೆನ್ನುಮೂಳೆಯ ಅಸ್ಥಿಮಜ್ಜೆಯ ಸಮಸ್ಯೆ (Spinal Muscular Atrophy).
ಗುಂಟೂರಿನಲ್ಲಿ ವಾಸಿಸುವ ಗಾಯತ್ರಿ ಅವರು ರಾಜಮಂಡ್ರಿಯ ಪ್ರೀತಮ್ ಅವರನ್ನು 2022ರಲ್ಲಿ ಮದುವೆಯಾಗಿದ್ದರು. ಅವರಿಗೆ 9 ತಿಂಗಳ ಮಗುವಿದೆ. ಅವರು ತಮ್ಮ ಮಗುವಿಗೆ ಹಿತೈಷಿ ಎಂದು ಹೆಸರಿಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಆದರೆ, ಕಳೆದ ಕೆಲವು ದಿನಗಳಿಂದ ಮಗು ಸರಿಯಾಗಿ ಹಾಲು ಕುಡಿಯುತ್ತಿಲ್ಲ ಎಂದು ಗಾಯತ್ರಿಗೆ ಅರಿವಾಯಿತು. ಸಾಫ್ಟ್‌ವೇರ್ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದ ಆ ದಂಪತಿಯಿಬ್ಬರೂ ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಹಲವಾರು ವೈದ್ಯಕೀಯ ಪರೀಕ್ಷೆಗಳ ನಂತರ, ಮಗುವಿಗೆ SMA ರೋಗನಿರ್ಣಯ ಮಾಡಲಾಯಿತು.
ಇದನ್ನೂ ಓದಿ: Video Viral: ಮಗುವಿನ ಬೆಡ್ ರೂಂನಲ್ಲಿ ಕಂಬಳಿಯೊಳಗೆ ಬೆಚ್ಚಗೆ ಮಲಗಿದ್ದ ವಿಷಕಾರಿ ಹಾವು
ಅಂದರೆ, ಆ ಮಗು ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದೆ. ಈ ರೋಗ ಬಂದರೆ ವಾಸಿ ಮಾಡುವುದು ಬಹಳ ಕಷ್ಟ. ಇದು ಜೆನೆಟಿಕ್ ರೋಗವಾದ್ದರಿಂದ ಚಿಕಿತ್ಸೆಗೆ 16 ಕೋಟಿ ರೂ. ವೆಚ್ಚವಾಗುತ್ತದೆ. ಕ್ರೋಮೋಸೋಮ್ 5 ನಲ್ಲಿ ಬದುಕುಳಿಯುವ ಮೋಟಾರ್ ನ್ಯೂರಾನ್ ರೂಪಾಂತರವು SMA ಪ್ರೋಟೀನ್ ಉತ್ಪಾದನೆಯಲ್ಲಿ ದೋಷವನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ, ನರಕೋಶದ ಜೀವಕೋಶಗಳು ಸಾಯುತ್ತವೆ ಮತ್ತು ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಇದರಿಂದ ಮಗುವಿಗೆ ನುಂಗಲು ಆಗುವುದಿಲ್ಲ, ನಡೆಯಲು ಸಾಧ್ಯವಾಗುವುದಿಲ್ಲ ಮತ್ತು ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ಮಹಿಳೆಗೆ 6 ತಿಂಗಳ ಹೆರಿಗೆ ರಜೆ
ದಾನಿಗಳು ಮುಂದೆ ಬಂದು ಈ ಕೆಳಗಿನ ಖಾತೆ ಸಂಖ್ಯೆ ಮೂಲಕ ಸಹಾಯ ಮಾಡಬಹುದು.
ದೇಣಿಗೆ ನೀಡುವ ವಿವರಗಳು:
ಹಿತೈಷಿಗೆ ಉಂಟಾಗಿರುವ ಈ ಅಪರೂಪದ ಕಾಯಿಲೆಗೆ ಔಷಧವಿದೆ. ಆದರೆ, ಇದು ಬಹಳ ದುಬಾರಿ. ಚಿಕಿತ್ಸೆ ಲಭ್ಯವಿದ್ದರೂ 16 ಕೋಟಿ ರೂ. ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಅಷ್ಟೊಂದು ಹಣವನ್ನು ನೀಡಲು ಅನುಕೂಲವಿಲ್ಲದ ಕಾರಣ ಆ ದಂಪತಿ ತಮ್ಮ ಮಗುವಿಗೆ ಚಿಕಿತ್ಸೆ ನೀಡಲು ಕ್ರೌಡ್ ಫಂಡಿಂಗ್ ಪ್ರಯತ್ನಿಸುತ್ತಿದ್ದಾರೆ. 9 ತಿಂಗಳ ಮಗುವಿನ ಜೀವ ಉಳಿಸಲು ನಿಮ್ಮ ಸಹಾಯವೂ ಇರಲಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ