ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi)ಯವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಯಾವುದೇ ವಿಶೇಷ ಸಮಾರಂಭಗಳು, ಯೋಜನೆಗಳ ಉದ್ಘಾಟನೆಗಳ ಬಗ್ಗೆ ಅಪ್ಡೇಟ್ ಕೊಡುತ್ತಾರೆ. ಗಣ್ಯರ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾರೆ. ಇದೀಗ ಪ್ರಧಾನಮಂತ್ರಿ ನರೇಂದ್ರ ತಮ್ಮ ಸೋಷಿಯಲ್ ಮೀಡಿಯಾಗಳ ಪ್ರೊಫೈಲ್ ಫೋಟೋ ಬದಲಿಸಿದ್ದಾರೆ. ಭಾರತದಲ್ಲಿ ಕೊರೊನಾ ಲಸಿಕೆ 100 ಕೋಟಿ ಡೋಸ್ ನೀಡಿ ದಾಖಲೆ ಸೃಷ್ಟಿಸಿದ ಬೆನ್ನಲ್ಲೇ ನರೇಂದ್ರ ಮೋದಿಯವರು ತಮ್ಮ ಟ್ವಿಟರ್ ಮತ್ತು ಫೇಸ್ಬುಕ್ ಖಾತೆಗಳಲ್ಲಿ ಪ್ರೊಫೈಲ್ ಫೋಟೊ ಬದಲಿಸಿಕೊಂಡಿದ್ದಾರೆ. 100 ಕೋಟಿ ಡೋಸ್ ಲಸಿಕೆ ನೀಡಿದ್ದಕ್ಕೆ ಅಭಿನಂದನೆಗಳು ಭಾರತ ಎಂದು ಹೇಳುವ ಫೋಟೋವೊಂದನ್ನು ಪ್ರೊಫೈಲ್ಗೆ ಹಾಕಿಕೊಂಡಿದ್ದಾರೆ.
ಭಾರತದಲ್ಲಿ ನಿನ್ನೆಗೆ 100 ಕೋಟಿ ಡೋಸ್ ಲಸಿಕೆ ಕೊಟ್ಟು ಪೂರ್ಣವಾಗಿದೆ. ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ನರೇಂದ್ರ ಮೋದಿಯವರು, ಭಾರತ ಇಂದು ಇತಿಹಾಸ ಬರೆದಿದೆ. ಭಾರತೀಯ ವಿಜ್ಞಾನ, ಉದ್ಯಮ ಮತ್ತು 130 ಕೋಟಿ ಭಾರತೀಯರ ಒಗ್ಗಟ್ಟಿನ ಸ್ಫೂರ್ತಿಗೆ ನಾವಿಂದು ಸಾಕ್ಷಿಯಾಗಿದ್ದೇವೆ ಎಂದು ಹೇಳಿದ್ದರು. ಹಾಗೇ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿಯಾಗಿ ಅಲ್ಲಿನ ಸಿಬ್ಬಂದಿ ಮತ್ತು ಲಸಿಕೆ ಫಲಾನುಭವಿಗಳೊಟ್ಟಿಗೆ ಸಂವಾದ ನಡೆಸಿದ್ದಾರೆ. ಇದುವರೆಗೆ ಶತಕೋಟಿ ಡೋಸ್ ಲಸಿಕೆ ನೀಡಿದ ದೇಶಗಳ ಸಾಲಿಗೆ ಚೀನಾ ಬಿಟ್ಟರೆ ಸೇರಿದ್ದು ಭಾರತವೇ ಆಗಿದೆ. ಡಬ್ಲ್ಯೂಎಚ್ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಭಾರತದ ನಾಗರಿಕರನ್ನು ಅಭಿನಂದಿಸಿದ್ದಾರೆ.
ಕಳೆದ ಮಾರ್ಚ್ನಲ್ಲಿ ಕೊರೊನಾ ಸಾಂಕ್ರಾಮಿಕ ಶುರುವಾಗಿ ಮೊದಲ ಲಾಕ್ಡೌನ್ ಜಾರಿಯಾಗಿತ್ತು. ಅದಾದ ಬಳಿಕ ಏಪ್ರಿಲ್ನಲ್ಲಿ ಪ್ರಧಾನಿ ಮೋದಿಯವರು ತಮ್ಮ ಮೂಗು, ಬಾಯಿಯನ್ನು ಗಮ್ಚಾ (ಹತ್ತಿಬಟ್ಟೆಯ ತೆಳುವಾದ ಶಾಲು)ದಿಂದ ಮುಚ್ಚಿಕೊಂಡಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಮಾಡಿಕೊಂಡಿದ್ದರು. ಈ ಮೂಲಕ ಜನರಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯ ಎಂಬುದನ್ನು ಸಾರಿದ್ದರು. ಅಲ್ಲಿಂದ ಇಲ್ಲಿಯವರೆಗೆ ಪ್ರೊಫೈಲ್ ಫೋಟೋ ಬದಲು ಮಾಡಿರಲಿಲ್ಲ. ಇದೀಗ 100 ಕೋಟಿ ಡೋಸ್ ಲಸಿಕೆ ನೀಡಿದ ಬೆನ್ನಲ್ಲೇ ಸಾಧನೆಯ ಖುಷಿಗೆ ದೇಶಕ್ಕೆ ಅಭಿನಂದನೆ ಸಲ್ಲಿಸಲು ಹೊಸ ಪ್ರೊಫೈಲ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Ananya Pandey: ಆರ್ಯನ್ ಖಾನ್ ಬಂಧನ ಪ್ರಕರಣ; ಎನ್ಸಿಬಿ ವಿಚಾರಣೆ ವೇಳೆ ಭಯಗೊಂಡು ಕಣ್ಣೀರಿಟ್ಟಿದ್ದ ಅನನ್ಯಾ ಪಾಂಡೆ
Anushka Sharma: ಒಂದೇ ಒಂದು ಚಿತ್ರದಿಂದ ಅಭಿಮಾನಿಗಳ ಮನಗೆದ್ದ ಅನುಷ್ಕಾ; ಅಂಥದ್ದೇನಿದೆ ಅದರಲ್ಲಿ?
Published On - 12:48 pm, Fri, 22 October 21