ತೆಲಂಗಾಣ: ಪ್ರಧಾನಿ ನರೇಂದ್ರ ಮೋದಿ (Narendra Modi) ಚುನಾವಣೆಗಾಗಿ ಡ್ರೆಸ್ ಮಾಡುತ್ತಾರೆ. ಅವರ ಬಜೆಟ್ (Budget 2022) “ಸತ್ವವಿಲ್ಲದ ಶೈಲಿ” ಯನ್ನು ನಿರೂಪಿಸುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರ ಶೇಖರ್ ರಾವ್ (K Chandrasekhar Rao) ಹೇಳಿದ್ದಾರೆ. ಬಜೆಟ್ನ್ನು ರಾವ್ ಅವರು ಭಯಾನಕ ಮತ್ತು ಗೋಲ್ ಮಾಲ್ ಎಂದು ಹೇಳಿದ್ದಾರೆ. ಮೂರು ದಿನಗಳಲ್ಲಿ ಮೋದಿ ಮತ್ತು ಕೆಸಿಐಆರ್ ಮೆಗಾ ಈವೆಂಟ್‌ಗಾಗಿ ಮುಖಾಮುಖಿಯಾಗಲಿದ್ದಾರೆ. ಆದರೆ ತಮ್ಮ ಟೀಕೆಗಳನ್ನು ವೈಯಕ್ತಿಕವಾಗಿ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ರಾವ್ ಹೇಳಿದ್ದಾರೆ. “ಊಪರ್ ಶೇರ್ವಾನಿ, ಅಂದರ್ ಪರೇಶಾನಿ (ಮೇಲೆ ಶೆರ್ವಾನಿ, ಒಳಗೆ ಗೊಂದಲ) ಎಂದು ಹೇಳುವ ಮೂಲಕ ಕೆಸಿಆರ್ ಪ್ರಧಾನಿ ಮೋದಿಯವರ ಆಡಳಿತದ ಉದಾಹರಣೆ ಎಂದು ಬಿಜೆಪಿ ತೋರಿಸುತ್ತಿರುವ “ಗುಜರಾತ್ ಮಾದರಿ” ಯನ್ನು ಲೇವಡಿ ಮಾಡಿದರು. ಕೆಸಿಆರ್ ಈ ಹಿಂದೆ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿಲಾಗಿತ್ತು. ಅವರ ತೆಲಂಗಾಣ ರಾಷ್ಟ್ರ ಸಮಿತಿ (TRS) ಸಂಸತ್ತಿನಲ್ಲಿ ಪ್ರಮುಖ ಶಾಸನಗಳ ಕುರಿತು ಮೋದಿ ಸರ್ಕಾರವನ್ನು ಹೆಚ್ಚಾಗಿ ಬೆಂಬಲಿಸಿದೆ. ಸೋಷಿಯಲ್ ಮೀಡಿಯಾ ನಿರ್ವಹಣೆಯಿಂದ, ಸುಳ್ಳು ಹೇಳುತ್ತಾ, ಮತ್ತೆ ಮತ್ತೆ ಸುಳ್ಳನ್ನು ಹೇಳುತ್ತಾ, ಜನರನ್ನು ಮೂರ್ಖರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈಗ ಅವರು ಬಹಿರಂಗಗೊಂಡಿದ್ದಾರೆ, ಅವರು ದ್ವೇಷ ಮತ್ತು ವಿಭಜನೆಯ ಕೋಮು ರಾಜಕೀಯವನ್ನು ಆಡುತ್ತಿದ್ದಾರೆ ಎಂದು ಕೆಸಿಆರ್ ಮೋದಿ ಆಡಳಿತ ವಿರುದ್ಧ ಕಿಡಿ ಕಾರಿದ್ದಾರೆ.
ಚುನಾವಣಾ ಸಮಯವಾದರೆ ಗಡ್ಡ ಬಿಟ್ಟು ರವೀಂದ್ರನಾಥ ಠಾಗೋರರಂತೆ ಕಾಣಿಸಿಕೊಳ್ಳಬೇಕು, ಅರೇ ಬಾಪ್ ರೇ ತಮಿಳುನಾಡಾದರೆ ಲುಂಗಿ ತೊಡಬೇಕು ಇದೇನಿದು? ದೇಶಕ್ಕೆ ಏನು ಸಿಗುತ್ತದೆ. ಈ ತರಹದ ಗಿಮಿಕ್ಗಳಿಂದ ದೇಶಕ್ಕೆ ಏನು ಸಿಗುತ್ತೆ, ಪಂಜಾಬ್ ಚುನಾವಣೆಯ ವೇಳೆ ಪಗ್ಡಿ(ಟರ್ಬನ್) ಹಾಕಿಕೊಳ್ಳುತ್ತಾರೆ. ಮಣಿಪುರದಲ್ಲಿ ಮಣಿಪುರಿ ಕ್ಯಾಪ್, ಉತ್ತರಾಖಂಡ್ ನಲ್ಲಿ ಮತ್ತೊಂದು ಟೋಪಿ(ಕ್ಯಾಪ್) ಈ ರೀತಿಯ ಎಷ್ಟು ಟೋಪಿ ಧರಿಸುತ್ತಾರೆ? ಎಂದು ಮೋದಿ ವಿರುದ್ದ ಕೆಸಿಆರ್ ವಾಗ್ದಾಳಿ ನಡೆಸಿದ್ದಾರೆ.
ವಿಶ್ವದ ಎರಡನೇ ಅತಿ ಎತ್ತರದ ಮತ್ತು ₹ 1,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸಂತ ರಾಮಾನುಜಾಚಾರ್ಯರ ಪ್ರತಿಮೆಯನ್ನು ಬಿಡುಗಡೆ ಮಾಡಲು ಶನಿವಾರ ಹೈದರಾಬಾದ್‌ನ ಹೊರವಲಯಕ್ಕೆ ಪ್ರಯಾಣಿಸುವಾಗ ಪ್ರಧಾನಿ ಮೋದಿ ಅವರೊಂದಿಗೆ ಕೆಸಿಆರ್ ಹೆಲಿಕಾಪ್ಟರ್ ರೈಡ್ ಅನ್ನು ಹಂಚಿಕೊಳ್ಳಲಿದ್ದಾರೆ.
ಪ್ರಧಾನಿ ಮೋದಿಯವರೊಂದಿಗಿನ ಸಂಭಾವ್ಯ ಪ್ರವಾಸದ ಕುರಿತು ಎನ್ಡಿಟಿವಿ ಕೇಳಿದ ಪ್ರಶ್ನೆಗೆ, ಕೆಸಿಆರ್ ಅವರು ಇದು ಆಟೋಮ್ಯಾಟಿಕ್. ಹಂಚಿಕೊಳ್ಳುವುದು (ದಿನ ಅಥವಾ ಚಾಪರ್ ರೈಡ್) ಪ್ರಶ್ನೆಯೇ ಅಲ್ಲ. ಪ್ರಧಾನಿ ಯಾವುದೇ ರಾಜ್ಯಕ್ಕೆ ಬಂದಾಗ, ಮುಖ್ಯಮಂತ್ರಿ ಹೋಗುತ್ತಾರೆ ಮತ್ತು ಅವರನ್ನು ಸ್ವಾಗತಿಸುತ್ತದೆ. ಇದು ವಾಡಿಕೆಯ ವಿಷಯ, ಅದು ಪ್ರೋಟೋಕಾಲ್ ಅವಶ್ಯಕತೆ. ರಾಜಕೀಯದಲ್ಲಿ ಅವರ ಮೇಲೆ ಟೀಕೆ ಮಾಡುವುದು ನನ್ನ ನೀತಿ. ಮೋದಿ ಅವರ ಹೆಲಿಕಾಪ್ಟರ್‌ನಲ್ಲಿ ಕುಳಿತಾಗಲೂ ನಾನು ಅವರಿಗೆ ಅದೇ ವಿಷಯವನ್ನು ಹೇಳುತ್ತೇನೆ ಎಂದಿದ್ದಾರೆ.
ಆದರೆ ಕೆಸಿಆರ್ ಅವರ ಇತ್ತೀಚಿನ ರಾಜಕೀಯ ಚಟುವಟಿಕೆಗಳು ಆತಂಕವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ವಿವಿಧ ವಿರೋಧ ಶಕ್ತಿಗಳನ್ನು ಒಟ್ಟುಗೂಡಿಸಲು ತೆಲಂಗಾಣ ಮುಖ್ಯಮಂತ್ರಿ ಅವರು ತಮ್ಮ ನಡೆಯುತ್ತಿರುವ ಪ್ರಾಜೆಕ್ಟ್ 2024 ರ ಭಾಗವಾಗಿ ಶೀಘ್ರದಲ್ಲೇ ತಮ್ಮ ಮಹಾರಾಷ್ಟ್ರದ ಸಹವರ್ತಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ.
ಅವರು ಈಗಾಗಲೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಸಿಪಿಎಂ ಮತ್ತು ಸಿಪಿಐನ ಇತರ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
“ದೇಶದಲ್ಲಿ ಗುಣಾತ್ಮಕ ಬದಲಾವಣೆಯ ಅಗತ್ಯವಿದೆ” ಎಂದು ಉದ್ಧವ್ ಠಾಕ್ರೆ ಅವರೊಂದಿಗಿನ ಭೇಟಿಯ ಕುರಿತು ರಾವ್ ಸುದ್ದಿಗಾರರಿಗೆ ತಿಳಿಸಿದರು.
“ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯುವ ಸಮಯ ಇದೀಗ ಬಂದಿದೆ, ನಾನು ಜನರಲ್ಲಿ ಮನವಿ ಮಾಡುತ್ತೇನೆ, ಬದಲಾವಣೆ ಬೇಕು. ನಾನು ಜನರೊಂದಿಗೆ ಮಾತನಾಡುತ್ತಿದ್ದೇನೆ, ಭಾರತೀಯರು ಎಚ್ಚೆತ್ತುಕೊಳ್ಳಬೇಕು, ಕೋಮುಗಲಭೆಗಳನ್ನು ಸೃಷ್ಟಿಸುವ ಈ ಜನರು ಬದಲಾಗಬೇಕು. ಮುಂಬರುವ ದಿನಗಳಲ್ಲಿ ದಿನಗಟ್ಟಲೆ ದೇಶಕ್ಕಾಗಿ ದುಡಿಯುತ್ತೇವೆ. ಯಾವ ಪಾತ್ರದಲ್ಲಿ ಎಂಬುದು ಇನ್ನೂ ಖಚಿತವಾಗಿಲ್ಲ,” ಎಂದ ಅವರು, ತಾವು ಪ್ರಧಾನಿಯಾಗಲು ಹೋರಾಟ ನಡೆಸುತ್ತಿಲ್ಲ ಎಂದು ಹೇಳಿದ್ದಾರೆ.
ಭಾರತದ ಸಂವಿಧಾನವನ್ನು ಬದಲಾಯಿಸಲು ಚರ್ಚೆಯ ಅಗತ್ಯವಿದೆ ಎಂದು ಕೆಸಿಆರ್ ಹೇಳಿದರು. “ಹಲವು ದೇಶಗಳು ಪ್ರತಿ ಬಾರಿಯೂ ಇದನ್ನು ಮಾಡುತ್ತವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸಹಕಾರಿ ಫೆಡರಲಿಸಂ ಅನ್ನು ಗೌರವಿಸಿಲ್ಲ. ನಮಗೆ ಯಾವುದು ಸರಿ ಎಂದು ನಾವು ಮರುಚಿಂತನೆ ಮಾಡಬೇಕಾಗಿದೆ,” ಎಂದು ಕೆಸಿಆರ್ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೇರಿದರೆ ಹೇಮಾ ಮಾಲಿನಿ ಮಾಡುತ್ತಾರೆಂದರು, ನಾನು ಹೇಮಾ ಮಾಲಿನಿಯಾಗಲು ಬಯಸುವುದಿಲ್ಲ: ಜಯಂತ್ ಚೌಧರಿ
Published On - 4:34 pm, Wed, 2 February 22